ಚಂಡೀಗಢ: ಕೆನಡಾದಲ್ಲಿ ನೆಲೆಸಿದ್ದ ಸಿಖ್ ಯುವತಿಯನ್ನು ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಈಚೆಗೆ ನಡೆದಿದೆ. ಒಂಟಾರಿಯೊ ಪ್ರಾಂತ್ಯದ ಮಿಸಿಸೌಗಾ ನಗರದಲ್ಲಿ ನೆಲೆಸಿದ್ದ ಪವನ್ಪ್ರೀತ್ ಕೊಲೆಯಾದವರು.
ಪವನ್ಪ್ರೀತ್ ಕೌರ್ ಅವರನ್ನು ಶನಿವಾರ ರಾತ್ರಿ 10.39 ಸುಮಾರಿಗೆ ಗ್ಯಾಸ್ ಸ್ಟೇಷನ್ ಬಳಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಕೊಲೆಯ ಹಿಂದೆ ದ್ವೇಷದ ಛಾಯೆ ಇದೆ ಎಂಬ ಅನುಮಾನವಿದೆ. ಆರೋಪಿಗಳು ಕಪ್ಪು ಬಟ್ಟೆ, ಗ್ಲೌಸ್ ಧರಿಸಿದ್ದಾರೆ. ಪರಾರಿಯಾಗಿರುವ ಹಂತಕರ ಪತ್ತೆಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಮೇಲೆ ಗುಂಡು ಹಾರಿಸಿದ ಬಳಿಕ ಸಾರ್ವಜನಿಕರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಆಕೆಯನ್ನು ರಕ್ಷಿಸಲು ಯತ್ನಿಸಿದರು. ಆದರೆ, ತೀವ್ರ ರಕ್ತಸ್ರಾವದಿಂದ ಯುವತಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.