ETV Bharat / international

ಅಮೆರಿಕದ ವಾಲ್​​ಮಾರ್ಟ್​ ಮಳಿಗೆಯಲ್ಲಿ ಗುಂಡಿನ ದಾಳಿ: ಹಲವರು ಸಾವು - shooting incident reported from the US state

ವರ್ಜೀನಿಯಾ ರಾಜ್ಯದ ಚೆಸಾಪೀಕ್‌ನಲ್ಲಿರುವ ವಾಲ್‌ಮಾರ್ಟ್‌ ಸ್ಟೋರ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಹಲವು ಜನರು ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

US Shooting
ವಾಲ್​ಮಾರ್ಟ್​ನಲ್ಲಿ ಗುಂಡಿನ ದಾಳಿ
author img

By

Published : Nov 23, 2022, 12:10 PM IST

ವರ್ಜೀನಿಯಾ: ಅಮೆರಿಕದ ವರ್ಜೀನಿಯಾ ರಾಜ್ಯದ ಚೆಸಾಪೀಕ್​ನಲ್ಲಿರುವ ವಾಲ್​ಮಾರ್ಟ್​ ಕಂಪನಿಯ ಮಳಿಗೆಯಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಹಲವರು ಮೃತಪಟ್ಟಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೂಟರ್​ ಕೂಡ ಸಾವಿಗೀಡಾಗಿದ್ದಾನೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕನ್ ಮಾಧ್ಯಮಗಳ ಪ್ರಕಾರ, ದಾಳಿಯಲ್ಲಿ ಎಷ್ಟು ಜನ ಸಾವಿಗೀಡಾಗಿದ್ದಾರೆ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ. ಆದರೆ ಸಾವಿನ ಸಂಖ್ಯೆ 10 ಕ್ಕಿಂತ ಕಡಿಮೆ ಇರಬಹುದು ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಲಿಯೊ ಕೊಸಿನ್ಸ್ಕಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕದ ಆಸ್ಪತ್ರೆ ಆವರಣದಲ್ಲಿ ಗುಂಡಿನ ದಾಳಿ: ನಾಲ್ವರ ಹತ್ಯೆ

ಶೂಟರ್ ವಾಲ್‌ಮಾರ್ಟ್‌ ಉದ್ಯೋಗಿಯೇ ಎಂಬುದು ಸ್ಪಷ್ಟವಾಗಿಲ್ಲ. ಅಧಿಕಾರಿಗಳು ವಾಲ್‌ಮಾರ್ಟ್ ಸೂಪರ್ ಸೆಂಟರ್​ನಲ್ಲಿ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.