ETV Bharat / international

ಅಮೆರಿಕದಲ್ಲಿ ಮೂವರು ಪ್ಯಾಲೆಸ್ಟೈನ್ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ

author img

By ETV Bharat Karnataka Team

Published : Nov 27, 2023, 8:28 AM IST

Three Palestinian college students shot in US: ಅಮೆರಿಕದಲ್ಲಿ ಮೂವರು ಪ್ಯಾಲೆಸ್ಟೈನ್ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆದಿದೆ. ಓರ್ವ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಎಫ್​ಬಿಐ ತನಿಖೆ ಕೈಗೊಂಡಿದೆ.

Palestinian students shot in US
ಅಮೆರಿಕದಲ್ಲಿ ಮೂವರು ಪ್ಯಾಲೆಸ್ಟೈನ್ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ: ಎಫ್​ಬಿಐನಿಂದ ತನಿಖೆ ಆರಂಭ

ವಾಷಿಂಗ್ಟನ್ ಡಿಸಿ(ಅಮೆರಿಕ): ಅಮೆರಿಕದ ಬರ್ಲಿಂಗ್ಟನ್​ನಲ್ಲಿ ಪ್ಯಾಲೆಸ್ಟೈನ್ ಮೂಲದ ಮೂವರು ಯುವಕರ ಮೇಲೆ ಗುಂಡಿನ ದಾಳಿ ನಡೆದಿದೆ. ಇದು ದ್ವೇಷದ ಕೃತ್ಯವಾಗಿರಬಹುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಮೂವರು ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಶನಿವಾರ ಸಂಜೆ ಬರ್ಲಿಂಗ್‌ಟನ್ ಸಿಟಿಯ ವರ್ಮೊಂಟ್‌ನಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಗಳು ಬರ್ಲಿಂಗ್ಟನ್‌ನಲ್ಲಿ ಸಂಬಂಧಿಕರನ್ನು ಭೇಟಿಯಾದ ನಂತರ ಪ್ರಾಸ್ಪೆಕ್ಟ್ ಸ್ಟ್ರೀಟ್‌ನಲ್ಲಿ ತಿರುಗಾಡುತ್ತಿದ್ದರು ಎಂದು ತಿಳಿದುಬಂದಿದೆ.

ಪೊಲೀಸರು ನೀಡಿದ ಹೇಳಿಕೆಯ ಪ್ರಕಾರ, ಗಾಯಾಳುಗಳನ್ನು ಚಿಕಿತ್ಸೆಗಾಗಿ ವರ್ಮೊಂಟ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಇಬ್ಬರ ಸ್ಥಿತಿ ಸ್ಥಿರವಾಗಿದ್ದರೆ, ಒಬ್ಬರ ಸ್ಥಿತಿ ಗಂಭೀರವಾಗಿದೆ. ದಾಳಿಕೋರನೊಬ್ಬ ಏಕಾಏಕಿ ನಾಲ್ಕು ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದಾನೆ. ಇಬ್ಬರು ವಿದ್ಯಾರ್ಥಿಗಳು ಕೆಫಿಯೆಹ್ (ಸಾಂಪ್ರದಾಯಿಕ ಪ್ಯಾಲೆಸ್ಟೈನಿಯನ್ ಸ್ಕಾರ್ಫ್) ಧರಿಸಿದ್ದರು.

ಬರ್ಲಿಂಗ್‌ಟನ್ ಪೊಲೀಸರ ಪ್ರಕಾರ, ತನಿಖೆಯ ವೇಳೆ ಘಟನಾ ಸ್ಥಳದಲ್ಲಿ ಲಭಿಸಿದ ಪುರಾವೆಗಳನ್ನು ಪಡೆಯಲಾಗಿದೆ. ಈ ಕುರಿತು ವಿಸ್ತೃತ ತನಿಖೆ ನಡೆಸಲು ಸಿದ್ಧ ಎಂದು ಎಫ್‌ಬಿಐ ಭಾನುವಾರ ತಿಳಿಸಿದೆ. ಶೂಟರ್‌ನನ್ನು ಗುರುತಿಸಲಾಗಿಲ್ಲ ಅಥವಾ ಸೆರೆಹಿಡಿಯಲಾಗಿಲ್ಲ. ತನಿಖೆಯ ಆರಂಭಿಕ ಹಂತದಲ್ಲಿದೆ

ಈ ದಾಳಿ ದ್ವೇಷದ ಅಪರಾಧವಾಗಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ಗಾಯಾಳುಗಳ ಕುಟುಂಬಗಳು ಒತ್ತಾಯಿಸಿವೆ. ದಾಳಿಕೋರನಿಗೆ ಶಿಕ್ಷೆ ವಿಧಿಸುವವರೆಗೆ ನಾವು ಸುಮ್ಮನಿರುವುದಿಲ್ಲ. ಯಾವುದೇ ಕುಟುಂಬ ಈ ನೋವು, ಸಂಕಟವನ್ನು ಎಂದಿಗೂ ಸಹಿಸದು. ನಮ್ಮ ಮಕ್ಕಳು ತಮ್ಮ ಅಧ್ಯಯನ ಮಾಡಲು ವಿದೇಶಕ್ಕೆ ಬಂದಿದ್ದಾರೆ. ಅವರ ಮೇಲೆ ದಾಳಿ ಮಾಡಿರುವುದು ಸರಿಯಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಾಯಗೊಂಡ ವಿದ್ಯಾರ್ಥಿಗಳ ಗುರುತು ಪತ್ತೆ: ಇನ್ಸ್ಟಿಟ್ಯೂಟ್ ಫಾರ್ ಮಿಡಲ್ ಈಸ್ಟ್ ಅಂಡರ್‌ಸ್ಟಾಂಡಿಂಗ್ ಹೇಳಿಕೆ ಬಿಡುಗಡೆಗೊಳಿಸಿದೆ. ಮೃತರು ರೋಡ್ ಐಲೆಂಡ್‌ನಲ್ಲಿರುವ ಬ್ರೌನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಿಶಾಮ್ ಅವರ್ತಾನಿ, ಪೆನ್ಸಿಲ್ವೇನಿಯಾದ ಹ್ಯಾವರ್‌ಫೋರ್ಡ್ ಕಾಲೇಜಿನ ವಿದ್ಯಾರ್ಥಿ ಕಿನ್ನನ್ ಅಬ್ದಲ್‌ಹಮಿದ್ ಮತ್ತು ಕನೆಕ್ಟಿಕಟ್‌ನ ಟ್ರಿನಿಟಿ ಕಾಲೇಜಿನ ವಿದ್ಯಾರ್ಥಿ ತಹಸೀನ್ ಅಹ್ಮದ್ ಎಂದು ಸಿಎನ್​ಎನ್​ ವರದಿ ಮಾಡಿದೆ.

ಇದನ್ನೂ ಓದಿ: ಬಿರುಗಾಳಿಯ ಹೊಡೆತಕ್ಕೆ ಸರಕು ಸಾಗಣೆ ಹಡಗು ಮುಳುಗಡೆ​: ಓರ್ವ ಸಾವು, ಭಾರತೀಯರು ಸೇರಿ 12 ಮಂದಿ ನಾಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.