ETV Bharat / international

Afghanistan floods: ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ; 47 ಮಂದಿ ಸಾವು

author img

By

Published : Jul 28, 2023, 11:07 AM IST

Afghanistan floods: ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಭಾರಿ ಪ್ರವಾಹದಿಂದಾಗಿ 47 ಜನ ಸಾವನ್ನಪ್ಪಿದ್ದಾರೆ. ಹಲವರಿಗೆ ಗಾಯಗಳಾಗಿದೆ.

Afghanistan floods
ಪ್ರವಾಹಕ್ಕೆ ಸಾವು

ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಹನ್ನೊಂದು ಪ್ರಾಂತ್ಯಗಳಲ್ಲಿ ಕಳೆದ ವಾರ ಉಂಟಾದ ಭೀಕರ ಪ್ರವಾಹದಲ್ಲಿ 47 ಜನರು ಸಾವನ್ನಪ್ಪಿ, 57 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಅಧಿಕೃತ ಮಾಧ್ಯಮ ವರದಿ ಮಾಡಿದೆ. ವಿಪತ್ತು ನಿರ್ವಹಣೆಯ ಮಾಧ್ಯಮ ವಿಭಾಗದ ಮುಖ್ಯಸ್ಥ ಶಫಿವುಲ್ಲಾ ರಹೀಮಿ ಹೇಳುವ ಪ್ರಕಾರ, ಮೈದಾನ ವಾರ್ಡಕ್, ಕಾಬೂಲ್, ಕುನಾರ್, ಪಕಿತಾ, ಖೋಸ್ಟ್, ನುರಿಸ್ತಾನ್, ನಂಗರ್ಹಾರ್, ಘಜ್ನಿ, ಹೆಲ್ಮಾಂಡ್ ಮತ್ತು ಪಕ್ತಿಕಾದಲ್ಲಿ ಭಾರಿ ಪ್ರವಾಹ ಸಂಭವಿಸಿದೆ.

ಸ್ಟಾನಿಕ್ಜಾಯ್, ಜಲ್ರೆಜ್ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 32 ಜನರು ಅಸುನೀಗಿದ್ದಾರೆ. 500 ಮನೆಗಳು, ಕೃಷಿ ಭೂಮಿ ನಾಶವಾಗಿದೆ. ಪರ್ವಾನ್​ ಪ್ರಾಂತ್ಯದಲ್ಲಿ ಮಂಗಳವಾರದ ಪ್ರವಾಹಕ್ಕೆ 9 ಜನ ಬಲಿಯಾಗಿದ್ದು 7 ಮಂದಿ ಗಾಯಗೊಂಡಿದ್ದಾರೆ. ಇನ್ನು ಹಿಂದಿನ ವಾರ ಪ್ರವಾಹಕ್ಕೆ ಸಿಲುಕಿ 31 ಜನರು ಸಾವನ್ನಪ್ಪಿ, 74 ಮಂದಿ ಗಾಯಗೊಂಡಿದ್ದು, 41 ಮಂದಿ ಕಾಣೆಯಾಗಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

250ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಗಾಯಗೊಂಡ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 30ಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಆಶ್ರಯ ಹಾಗು ಮೂಲಭೂತ ಅಗತ್ಯಗಳನ್ನು ಒದಗಿಸುವಂತೆ ತಾಲಿಬಾನ್ ಮತ್ತು ಮಾನವೀಯ ಸಂಘಟನೆಗಳಿಗೆ ಮನವಿ ಮಾಡಲಾಗುತ್ತಿದೆ. ಪ್ರವಾಹವಲ್ಲದೆ, ಭೂಕಂಪ, ಹಿಮಕುಸಿತ, ಭೂಕುಸಿತ ಮತ್ತು ಬರ ಸೇರಿದಂತೆ ನೈಸರ್ಗಿಕ ವಿಕೋಪಗಳು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುತ್ತವೆ.

ಇದನ್ನೂ ಓದಿ: ಇಥಿಯೋಪಿಯಾಗೆ ಪಲಾಯನ ಮಾಡಿದ 70 ಸಾವಿರ ಸುಡಾನ್ ಪ್ರಜೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.