ಬೆಲ್‌ಗ್ರೇಡ್ (ಸರ್ಬಿಯಾ): ಸರ್ಬಿಯಾದಲ್ಲಿ ಕಳೆದ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ನಗರವು ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ. ಸರ್ಕಾರಿ ಸ್ವಾಮ್ಯದ RTS ದೂರದರ್ಶನ ವರದಿಯಂತೆ, ಮ್ಲಾಡೆನೋವಾಕ್ ನಗರದಲ್ಲಿ ದಾಳಿ ನಡೆದಿದೆ. ದಾಳಿಕೋರ ಚಲಿಸುತ್ತಿದ್ದ ವಾಹನದಿಂದ ಸ್ವಯಂಚಾಲಿತ ಆಯುಧವನ್ನು ತೆಗೆದುಕೊಂಡು ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸರ್ಬಿಯಾದಲ್ಲಿ ಬಂದೂಕುಗಳಿಗೆ ಸಂಬಂಧಿಸಿದ ನಿಯಮಗಳು ತುಂಬಾ ಕಠಿಣವಾಗಿವೆ. ಹೀಗಿದ್ದರೂ ನಿರಂತರವಾಗಿ ಘಟನೆಗಳು ಮರುಕಳಿಸುತ್ತಿವೆ. ಈ ಘಟನೆಯ ಮುನ್ನಾದಿನ ಶಾಲೆಯೊಂದರಲ್ಲಿ ಭೀಕರ ಗುಂಡಿನ ದಾಳಿ ನಡೆದಿತ್ತು.
-
Eight people were killed and 10 injured in a shooting near a Serbian town about 60 kilometres south of capital Belgrade, local media report. The shooting occurred near Mladenovac as the attacker opened fire with an automatic weapon from a moving vehicle and fled. Police are…
— ANI (@ANI) May 5, 2023 " class="align-text-top noRightClick twitterSection" data="
">Eight people were killed and 10 injured in a shooting near a Serbian town about 60 kilometres south of capital Belgrade, local media report. The shooting occurred near Mladenovac as the attacker opened fire with an automatic weapon from a moving vehicle and fled. Police are…
— ANI (@ANI) May 5, 2023Eight people were killed and 10 injured in a shooting near a Serbian town about 60 kilometres south of capital Belgrade, local media report. The shooting occurred near Mladenovac as the attacker opened fire with an automatic weapon from a moving vehicle and fled. Police are…
— ANI (@ANI) May 5, 2023
ಬಾಲಕನಿಂದ ಗುಂಡಿನ ದಾಳಿ, 9 ಸಾವು: ಬೆಲ್‌ಗ್ರೇಡ್‌ನ ಶಾಲೆಯೊಂದರಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಎಂಟು ಮಕ್ಕಳು ಸೇರಿದಂತೆ 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಸರ್ಬಿಯಾ ಪೊಲೀಸರು ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಬೆಲ್‌ಗ್ರೇಡ್‌ನಲ್ಲಿರುವ ವ್ಲಾಡಿಸ್ಲಾವ್ ರಿಬ್ನಿಕರ್ ಎಲಿಮೆಂಟರಿ ಸ್ಕೂಲ್‌ನಲ್ಲಿ ಘಟನೆ ನಡೆದಿದೆ. ಬುಧವಾರ ಬೆಳಿಗ್ಗೆ 8:40 ಗಂಟೆಗೆ ದಾಳಿಯ ಕುರಿತು ಪೊಲೀಸರಿಗೆ ಪ್ರಥಮ ಮಾಹಿತಿ ದೊರೆತಿದೆ. ಪೊಲೀಸರು ಸ್ಥಳ ತಲುಪಿದಾಗ ವಿದ್ಯಾರ್ಥಿ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಆರೋಪಿಯು ಶಾಲಾ ಸಿಬ್ಬಂದಿ ಮತ್ತು ಇತರ ವಿದ್ಯಾರ್ಥಿಗಳ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ಎಂಟು ಮಕ್ಕಳು ಮತ್ತು ಭದ್ರತಾ ಸಿಬ್ಬಂದಿಯನ್ನು ಆತ ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ಆರು ಮಕ್ಕಳು ಮತ್ತು ಶಿಕ್ಷಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಿಂದಾಗಿ ಇಡೀ ಶಾಲಾ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವರದಿಗಳ ಪ್ರಕಾರ, ಗುಂಡಿನ ಸುದ್ದಿ ತಿಳಿದಾಕ್ಷಣ, ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯಲು ಶಾಲೆ ಹತ್ತಿರ ಧಾವಿಸಿದ್ದರು. ಶಾಲೆಯ ಹೊರಗೆ ಪೋಷಕರು ಸೇರಿದಂತೆ ಅನೇಕ ಜನರ ಗುಂಪು ಕಂಡು ಬಂದಿತ್ತು. ಪೊಲೀಸರು ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ತಂದೆಯ ಪಿಸ್ತೂಲಿನಿಂದ ದಾಳಿ: ವಿದ್ಯಾರ್ಥಿಯು ತನ್ನ ತಂದೆಯ ಪಿಸ್ತೂಲ್ನಿಂದ ಬೆಳಗ್ಗೆ ಶಾಲೆಗೆ ಬಂದು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಇದರ ಹಿಂದಿನ ಕಾರಣ ತಿಳಿದು ಬಂದಿಲ್ಲ. ಆತನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಮತ್ತೊಂದೆಡೆ, ಬೆಲ್‌ಗ್ರೇಡ್‌ನ ವ್ಲಾಡಿಸ್ಲಾವ್ ರಿಬ್ನಿಕರ್ ಶಾಲೆಯ ಸುತ್ತಮುತ್ತಲಿನ ಪ್ರದೇಶವನ್ನು ಪೊಲೀಸರು ಸಂಪೂರ್ಣವಾಗಿ ಸೀಲ್ ಮಾಡಿದ್ದಾರೆ
ಸರ್ಬಿಯಾದಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಅಪರೂಪ. 1990 ರ ದಶಕದ ಯುದ್ಧಗಳ ನಂತರ ದೇಶದಲ್ಲಿ ಉಳಿದಿರುವ ಶಸ್ತ್ರಾಸ್ತ್ರಗಳ ಸಂಖ್ಯೆಯ ಬಗ್ಗೆ ಸರ್ಕಾರದಿಂದ ಪದೇ ಪದೇ ಎಚ್ಚರಿಕೆಗಳು ಬರುತ್ತಿವೆ.
ಇದನ್ನೂ ಓದಿ: ಮಾರ್ಕೆಟ್ ಮಧ್ಯದಲ್ಲಿ ಜೆಡಿಯು ನಾಯಕನನ್ನು ಗುಂಡುಕ್ಕಿ ಕೊಂದ ಹಂತಕರು