ETV Bharat / international

ಪಾಕಿಸ್ತಾನಕ್ಕೆ ಮತ್ತಷ್ಟು ಸಾಲ ನೀಡಲಿದೆ ಸೌದಿ ಅರೇಬಿಯಾ - ಈಟಿವಿ ಭಾರತ ಕನ್ನಡ

ಐಎಂಎಫ್​ನಿಂದ ಹೊಸ ಸಾಲ ಪಡೆಯಲು ಹೆಣಗಾಡುತ್ತಿರುವ ಪಾಕಿಸ್ತಾನಕ್ಕೆ ಹಲವಾರು ಅಡ್ಡಿ ಆತಂಕಗಳು ಎದುರಾಗುತ್ತಿವೆ. ಸಾಲ ಪಡೆಯುವ ಮುನ್ನ ಇತರ ಮಿತ್ರ ರಾಷ್ಟ್ರಗಳಿಂದ ಹಣಕಾಸು ನೆರವನ್ನು ಖಚಿತಪಡಿಸಿಕೊಳ್ಳುವಂತೆ ಐಎಂಎಫ್​ ಪಾಕಿಸ್ತಾನಕ್ಕೆ ಸೂಚಿಸಿದೆ.

Saudi Arabia signals readiness to provide more credit to Pakistan

author img

By

Published : Mar 30, 2023, 1:03 PM IST

ಇಸ್ಲಾಮಾಬಾದ್ : ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯೊಂದಿಗೆ ಉಂಟಾದ ಗೊಂದಲದ ಪರಿಸ್ಥಿತಿಯನ್ನು ತಿಳಿಗೊಳಿಸಲು ಸಹಾಯಕವಾಗುವ ರೀತಿಯಲ್ಲಿ ಸೌದಿ ಅರೇಬಿಯಾ ತನಗೆ ಹೆಚ್ಚುವರಿ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಯಾವುದೋ ಒಂದು ರೀತಿಯ ಸಹಾಯ ನೀಡುವ ಬಗ್ಗೆ ಸೌದಿ ಅರೇಬಿಯಾ ನಮಗೆ ಮಾಹಿತಿ ನೀಡಿದೆ ಎಂದು ಹಣಕಾಸು ರಾಜ್ಯ ಸಚಿವೆ ಡಾ ಆಯಿಶಾ ಪಾಶಾ ಅವರು ಸಂಸದೀಯ ಸಮಿತಿಯ ಸಭೆಯಲ್ಲಿ ಭಾಗವಹಿಸಿದ ನಂತರ ಹೇಳಿದರು. ಆದರೆ ಸೌದಿ ಅರೇಬಿಯಾ ನೀಡಬಹುದಾದ ಸಾಲದ ಮೊತ್ತವನ್ನು ಅವರು ಬಹಿರಂಗಪಡಿಸಲಿಲ್ಲ.

ಮಿತ್ರ ದೇಶವೊಂದು ನಮ್ಮ ಪರವಾಗಿ ಹಣಕಾಸು ಠೇವಣಿ ಇಡುವ ನಿಟ್ಟಿನಲ್ಲಿ ಒಂದಿಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ಹಣಕಾಸು ಸೆನೆಟ್ ಸ್ಥಾಯಿ ಸಮಿತಿಗೆ ತಿಳಿಸಿದರು. ನಾವು ಶೀಘ್ರದಲ್ಲೇ IMF ನೊಂದಿಗೆ ಸಿಬ್ಬಂದಿ ಮಟ್ಟದ ಒಪ್ಪಂದಕ್ಕೆ ಸಹಿ ಹಾಕುವ ಹಂತವನ್ನು ತಲುಪಲಿದ್ದೇವೆ ಎಂದು ಹೇಳಿದರು. 6 ಶತಕೋಟಿ ಡಾಲರ್​ಗಳಷ್ಟು ಹೆಚ್ಚುವರಿ ಸಾಲಗಳನ್ನು ವ್ಯವಸ್ಥೆಗೊಳಿಸುವಂತೆ ಐಎಂಎಫ್​​ ಪಾಕಿಸ್ತಾನಕ್ಕೆ ಸೂಚಿಸಿದೆ ಮತ್ತು ತನ್ನೊಂದಿಗೆ ಮುಂದಿನ ಸಭೆಗೂ ಮುನ್ನ ಈ ಸಾಲದ ಅರ್ಧದಷ್ಟು ಮೊತ್ತ ಬಂದಿರಬೇಕು ಎಂದು ಐಎಂಎಫ್ ಷರತ್ತು ವಿಧಿಸಿದೆ.

ದೇಶವು ಡಿಫಾಲ್ಟರ್ ಆಗುವುದನ್ನು ತಪ್ಪಿಸಲು ಮತ್ತು 1.7 ತಿಂಗಳಿನ ಆಮದುಗಳಿಗೆ ಸಾಕಾಗುವಷ್ಟು ವಿದೇಶಿ ವಿನಿಮಯ ಮೀಸಲುಗಳನ್ನು ಹೆಚ್ಚಿಸಲು ಹೊಸ ನಿಧಿಗಳ ಅಗತ್ಯವಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಹೆಚ್ಚುವರಿ ಹಣಕಾಸು ಅಗತ್ಯತೆಗಳನ್ನು ಪೂರೈಸಲು ಸೌದಿ ಅರೇಬಿಯಾದಿಂದ 2 ಬಿಲಿಯನ್ ಡಾಲರ್ ಮತ್ತು ಯುಎಇಯಿಂದ 1 ಬಿಲಿಯನ್ ಡಾಲರ್ ಹೆಚ್ಚುವರಿ ಸಾಲವನ್ನು ಪಡೆಯುವುದಾಗಿ ಪಾಕಿಸ್ತಾನವು ಐಎಂಎಫ್‌ಗೆ ತಿಳಿಸಿತ್ತು.

ಯುಎಇ ರಾಯಭಾರಿ ಹಮದ್ ಒಬೈದ್ ಇಬ್ರಾಹಿಂ ಸಲೀಂ ಅಲ್-ಝಾಬಿ ಅವರು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಅವರನ್ನು ಭೇಟಿಯಾಗಿದ್ದರು. ಎರಡೂ ದೇಶಗಳು ತಮ್ಮ ಅಸ್ತಿತ್ವದಲ್ಲಿರುವ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೆಚ್ಚಿಸುವ ವಿವಿಧ ಮಾರ್ಗಗಳನ್ನು ದಾರ್ ಪ್ರಸ್ತಾಪಿಸಿದರು. ದ್ವಿಪಕ್ಷೀಯ ಮತ್ತು ವಾಣಿಜ್ಯ ಸಾಲಗಳ ಸಂಯೋಜನೆಯಿಂದ ಪಾಕಿಸ್ತಾನವು ಒಟ್ಟಾರೆ 3 ಬಿಲಿಯನ್ ಡಾಲರ್‌ಗಳಷ್ಟು ಹಣಕಾಸನ್ನು ವ್ಯವಸ್ಥೆಗೊಳಿಸಬೇಕೆಂದು ಐಎಂಎಫ್ ಬಯಸಿದೆ ಎಂದು ಮೂಲಗಳು ತಿಳಿಸಿವೆ.

ಚೀನಾ ಸಾಲ ಮರುಪಾವತಿಗೆ ಸಮಯ ಕೇಳಿದ ಪಾಕಿಸ್ತಾನ: ಚೀನಾದಿಂದ ಪಡೆದ, ಕಳೆದ ವಾರ ಮರುಪಾವತಿ ಮಾಡಬೇಕಿದ್ದ 2 ಬಿಲಿಯನ್ ಡಾಲರ್​ ಮೌಲ್ಯದ ಸಾಲ ಮರುಪಾವತಿಯ ದಿನಾಂಕವನ್ನು ಮುಂದೂಡಬೇಕೆಂದು ಪಾಕಿಸ್ತಾನ ಚೀನಾಕ್ಕೆ ಮನವಿ ಮಾಡಿದೆ. ಪಾಕಿಸ್ತಾನದ ವಿನಂತಿಯ ಮೇಲೆ ಚಿಂತನೆ ಮಾಡಲಾಗುತ್ತಿದೆ ಎಂದು ಚೀನಾದ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇವಲ ನಾಲ್ಕು ತಿಂಗಳಿಗೆ ಸಾಕಾಗುವಷ್ಟು ವಿದೇಶಿ ಮೀಸಲು ನಿಧಿಯನ್ನು ಹೊಂದಿರುವ ಪಾಕಿಸ್ತಾನಕ್ಕೆ ಚೀನಾ ಸಾಲ ಮರುಪಾವತಿ ಮುಂದೂಡುವುದು ಬಹಳ ಮುಖ್ಯವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಚೀನಾ ಹೇಳಿದ್ದರೂ ನಿರ್ದಿಷ್ಟ ದಿನಾಂಕವನ್ನು ತಿಳಿಸಿಲ್ಲ. ಚೀನಾದ ಸಾಲದ ಅವಧಿಯು ಮಾರ್ಚ್ 23 ರಂದು ಮುಕ್ತಾಯವಾಗಿದೆ.

ಇದನ್ನೂ ಓದಿ : ಪಾಕಿಸ್ತಾನದಲ್ಲಿ ಉಚಿತ ಗೋಧಿ ಹಿಟ್ಟು ಪಡೆಯಲು ನೂಕುನುಗ್ಗಲು; ಕಾಲ್ತುಳಿತಕ್ಕೆ 11 ಜನ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.