ETV Bharat / international

ರಷ್ಯಾ ಅಧ್ಯಕ್ಷ ​ಪುಟಿನ್​ ಇರಾನ್​ ಪ್ರವಾಸ: ಉಕ್ರೇನ್​ ಮೇಲಿನ ದಾಳಿಗೆ ಇರಾನ್​ ಬೆಂಬಲ

author img

By

Published : Jul 20, 2022, 9:35 AM IST

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಇರಾನ್​ ಪ್ರವಾಸ ಕೈಗೊಂಡಿದ್ದಾರೆ. ಇದು ಉಕ್ರೇನ್​ ಮೇಲೆ ನಡೆದ ದಾಳಿಯ ಬಳಿಕದ ಮೊದಲ ವಿದೇಶ ಪ್ರವಾಸವಾಗಿದೆ. ಇರಾನ್​ ಕೂಡ ರಷ್ಯಾ ದಾಳಿಗೆ ಬೆಂಬಲ ನೀಡಿದೆ.

ರಷ್ಯಾ ಅಧ್ಯಕ್ಷ ​ಪುಟಿನ್​ ಇರಾನ್​ ಪ್ರವಾಸ
ರಷ್ಯಾ ಅಧ್ಯಕ್ಷ ​ಪುಟಿನ್​ ಇರಾನ್​ ಪ್ರವಾಸ

ಟೆಹ್ರಾನ್(ಇರಾನ್): ಉಕ್ರೇನ್​ ಮೇಲೆ ದಾಳಿ ಮುಂದುವರೆದ ಮಧ್ಯೆಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಇರಾನ್​ ಪ್ರವಾಸ ಕೈಗೊಂಡಿದ್ದಾರೆ. ಇದು ಯುದ್ಧಾರಂಭವಾದ ಬಳಿಕ ಪುಟಿನ್​ ಕೈಗೊಂಡ ಮೊದಲ ವಿದೇಶ ಪ್ರವಾಸವಾಗಿದ್ದು, ಇರಾನ್​ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರೊಂದಿಗೆ ಮಾತುಕತೆ ನಡೆಸಿದರು.

ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಘೋಷಿಸಿದ ಬಳಿಕ ಸೋವಿಯತ್ ಒಕ್ಕೂಟದ ಹೊರ ರಾಷ್ಟ್ರಗಳಿಗೆ ಅಧ್ಯಕ್ಷ ಪುಟಿನ್​ ಭೇಟಿ ನೀಡಿರಲಿಲ್ಲ. ಇರಾನ್​ಗೆ ಮಂಗಳವಾರ ಭೇಟಿ ನೀಡುವ ಮೂಲಕ ಉಭಯ ರಾಷ್ಟ್ರಗಳ ನಡುವಿನ ಸಹಕಾರದ ಬಗ್ಗೆ ಚರ್ಚಿಸಿದರು.

ಇರಾನ್​ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಜೊತೆಗಿನ ಮಾತುಕತೆಯ ವೇಳೆ ಉಕ್ರೇನ್​ ಮೇಲಿನ ದಾಳಿಗೆ ಬೆಂಬಲ ನೀಡುವಂತೆ ಪುಟಿನ್​ ಕೋರಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಇರಾನ್​ ಬೆಂಬಲ: ಉಕ್ರೇನ್​ ಮೇಲಿನ ರಷ್ಯಾದ ಮಿಲಿಟರಿ ಕಾರ್ಯಾಚರಣೆಗೆ ಇರಾನ್‌ನಿಂದ ಬಲವಾದ ಬೆಂಬಲ ವ್ಯಕ್ತವಾಗಿದೆ. ಸ್ವತಂತ್ರ ಮತ್ತು ಬಲಿಷ್ಠ ರಷ್ಯಾವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧಿಸುತ್ತಿವೆ. ಉಕ್ರೇನ್‌ಗೆ ಮೇಲೆ ರಷ್ಯಾ ಹಿಡಿತ ಸಾಧಿಸದಿದ್ದರೆ, ನ್ಯಾಟೋ ಪಡೆಗಳೇ ಆ ದೇಶದ ಮೇಲೆ ದಾಳಿ ಮಾಡುತ್ತಿದ್ದವು ಎಂದು ಅಲಿ ಖಮೇನಿ ಹೇಳಿದ್ದಾರೆ. ಯುದ್ಧ ಘೋಷಣೆ ವ್ಲಾಡಿಮಿರ್​ ಪುಟಿನ್ ಅವರ ಗಟ್ಟಿ ನಿರ್ಧಾರವಾಗಿದೆ. ರಷ್ಯಾ ಮತ್ತು ಇರಾನ್​ ನಡುವಿನ ನಿಕಟ ಸಂಬಂಧ ಮುಂದುವರಿಯುತ್ತದೆ ಎಂದೂ ಹೇಳಿದ್ದಾರೆ.

ಉಕ್ರೇನ್ ದಾಳಿ ಬಳಿಕ ರಷ್ಯಾಧ್ಯಕ್ಷರ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಹರಿದಾಡಿದ್ದವು. ಕ್ಯಾನ್ಸರ್​, ಚರ್ಮ ಸಂಬಂಧಿ ರೋಗದಿಂದ ಪುಟಿನ್ ಬಳಲುತ್ತಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು. ವಿದೇಶಿಗರು ಬಂದಲ್ಲಿ ದೂರದಲ್ಲಿಯೇ ನಿಲ್ಲಿಸಿ ಮಾತನಾಡುತ್ತಾರೆ. ಪುಟಿನ್​ ದೈಹಿಕ ಕ್ಷಮತೆಯನ್ನು ಕಳೆದುಕೊಂಡ ಬಗ್ಗೆಯೂ ಪುಂಖಾನುಪುಂಖವಾಗಿ ವರದಿ ಬಿತ್ತರವಾಗಿದ್ದವು.

ಇದನ್ನೂ ಓದಿ: ಸ್ಪೇನ್​, ಪೋರ್ಚುಗಲ್​ ಬಳಿಕ ಟೆಕ್ಸಾಸ್​ ಕಾಡಿಗೆ ಬೆಂಕಿ; ಬಿಸಿಗಾಳಿಗೆ ತತ್ತರಿಸಿದ ಜನರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.