ETV Bharat / international

ಕಪ್ಪು ಸಮುದ್ರದಲ್ಲಿ ಅಮೆರಿಕದ ಡ್ರೋನ್​ ಉರುಳಿಸಿದ ರಷ್ಯಾದ ಫೈಟರ್ ಜೆಟ್ - Russian plane collided American drone

ಕಪ್ಪು ಸಮುದ್ರದ ಮೇಲೆ ಹಾರಾಡುತ್ತಿದ್ದ ಅಮೆರಿಕದ ಡ್ರೋನ್​ ಅನ್ನು ರಷ್ಯಾದ ವಿಮಾನಗಳು ಡಿಕ್ಕಿ ಹೊಡೆದು ಉರುಳಿಸಿವೆ. ಇದು ಉಭಯ ರಾಷ್ಟ್ರಗಳ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ.

ಅಮೆರಿಕದ ಡ್ರೋನ್​ ಉರುಳಿಸಿದ ರಷ್ಯಾ
ಅಮೆರಿಕದ ಡ್ರೋನ್​ ಉರುಳಿಸಿದ ರಷ್ಯಾ
author img

By

Published : Mar 15, 2023, 7:58 AM IST

ಕೀವ್​: ಕಪ್ಪು ಸಮುದ್ರದ ಮೇಲೆ ಹಾರಾಡುತ್ತಿದ್ದ ಅಮೆರಿಕದ ಕಣ್ಗಾವಲು ಡ್ರೋನ್‌ ಅನ್ನು ರಷ್ಯಾದ ಯುದ್ಧ ವಿಮಾನಗಳು ಡಿಕ್ಕಿ ಹೊಡೆದು ಹಾಕಿವೆ. ಇದು ಉಭಯ ರಾಷ್ಟ್ರಗಳ ನಡುವಿನ ಅಸಮಾಧಾನ ಹೆಚ್ಚಿಸಿದೆ. ರಷ್ಯಾದ ಈ ನಡೆಗೆ ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಅಂತಾರಾಷ್ಟ್ರೀಯ ಪ್ರದೇಶವಾದ ಕಪ್ಪು ಸಮುದ್ರದ ಮೇಲೆ ಹಾರಾಡುತ್ತಿದ್ದ ಅಮೆರಿಕದ ಎಂಕ್ಯೂ-9 ಡ್ರೋನ್‌ಗೆ ರಷ್ಯಾದ 2 ಯುದ್ಧ ವಿಮಾನಗಳು ಡಿಕ್ಕಿ ಹೊಡೆದಿವೆ. ಇದಕ್ಕೂ ಮೊದಲು ಡ್ರೋನ್​ ಮೇಲೆ ಜೆಟ್​ನ ಇಂಧನ ಸುರಿದಿವೆ. ಬಳಿಕ ಅದು ಬೀಳದಿದ್ದಾಗ ವಿಮಾನಗಳೇ ಡಿಕ್ಕಿ ಹೊಡೆದು ಕಪ್ಪು ಸಮುದ್ರದಲ್ಲಿ ಬೀಳಿಸಿವೆ.

ಇದು ವೃತ್ತಿಪರ ಕೆಲಸವಲ್ಲ: ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಈ ಬಗ್ಗೆ ಅಧ್ಯಕ್ಷ ಜೋ ಬೈಡನ್ ಅವರಿಗೆ ಘಟನೆಯ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ, ರಷ್ಯಾದ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ, ಈ ರೀತಿಯ ಘಟನೆಗಳು ಉಭಯ ರಾಷ್ಟ್ರಗಳಿಗೆ ತಕ್ಕುದಲ್ಲ. ಇಂತಹ ಬೆದರಿಕೆಗಳಿಗೆ ದೇಶ ಬಗ್ಗುವುದಿಲ್ಲ. ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಹಾರಾಡುತ್ತಿರುವ ಡ್ರೋನ್​ ಪತನಗೊಳಿಸಿದ್ದು, ಅಸುರಕ್ಷಿತ ಮತ್ತು ವೃತ್ತಿಪರವಲ್ಲದ ಕೆಲಸ ಎಂದು ಟೀಕಿಸಿದೆ.

ಶೀತಲ ಸಮರದ ಬಳಿಕ ಇದೇ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ಮಧ್ಯೆ ತಿಕ್ಕಾಟ ನಡೆದಿದೆ. ಅಮೆರಿಕದ ಭದ್ರತಾ ಅಧಿಕಾರಿಗಳು ರಷ್ಯಾದ ಜೊತೆಗೆ ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಕಪ್ಪು ಸಮುದ್ರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ MQ-9 ಡ್ರೋನ್‌ನ ಮೇಲೆ ರಷ್ಯಾದ Su-27 ಫೈಟರ್ ಜೆಟ್‌ಗಳು ದಾಳಿ ಮಾಡಿದ್ದು, ಕಳವಳಕಾರಿ ಮತ್ತು ಅಸುರಕ್ಷಿತ ನಡೆಯಾಗಿದೆ ಎಂದು ಅಮೆರಿಕ ಹೇಳಿದೆ.

ಬೆದರಿಕೆಗೆ ಬಗ್ಗಲ್ಲ: ರಷ್ಯಾದ ಬೆದರಿಕೆ ನಡೆಯಿಂದಾಗಿ ಈ ಪ್ರದೇಶದಲ್ಲಿ ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸುವುದರಿಂದ ಅಮೆರಿಕದ ಹಿಂದೆ ಸರಿಯುವುದಿಲ್ಲ. ಕಪ್ಪು ಸಮುದ್ರದ ಮೇಲೆ ಹಾರುವ ಮತ್ತು ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಕಾರ್ಯನಿರ್ವಹಿಸದಂತೆ ನಮ್ಮನ್ನು ತಡೆಯುವ ಪ್ರಯತ್ನ ಇದಾಗಿದ್ದರೆ, ಅಂತಹ ಯತ್ನ ಸಂಪೂರ್ಣ ವೈಫಲ್ಯ ಕಾಣಲಿದೆ ಎಂದು ಅಮೆರಿಕದ ವಕ್ತಾರರು ಎಚ್ಚರಿಸಿದ್ದಾರೆ.

ಕಪ್ಪು ಸಮುದ್ರವು ಯಾವುದೇ ರಾಷ್ಟ್ರಕ್ಕೆ ಸೇರಿಲ್ಲ. ಅದರ ಮೇಲಿನ ಹಾರಾಟ, ನಿಗಾವನ್ನು ಮುಂದುವರಿಸುತ್ತೇವೆ. ರಷ್ಯಾದ ವಾಯುಪಡೆಯ ಆಕ್ರಮಣಕಾರಿ ಕ್ರಮಗಳು ಅಪಾಯಕಾರಿ ಮತ್ತು ತಪ್ಪು ಲೆಕ್ಕಾಚಾರವಾಗಿದೆ. ಇದು ಬೇರೊಂದು ಘಟನೆಗಳಿಗೆ ಕಾರಣವಾಗಲಿದೆ ಎಂದು ಅಮೆರಿಕ ಎಚ್ಚರಿಕೆಯ ಮಾತನ್ನಾಡಿದೆ.

ರಷ್ಯಾಕ್ಕೆ ಪ್ರತಿಭಟನೆ ಸಲ್ಲಿಸಿದ ಯುಎಸ್​: ಕಪ್ಪು ಸಮುದ್ರದಲ್ಲಿ ತನ್ನ ಡ್ರೋನ್​ ಕೆಡವಿದ್ದಕ್ಕೆ ರಷ್ಯಾದ ರಾಯಭಾರಿಯನ್ನು ಅನಾಟೊಲಿ ಆಂಟೊನೊವ್ ಅವರನ್ನು ಕರೆಸಿಕೊಂಡ ಅಮೆರಿಕದ ವಿದೇಶಾಂಗ ಇಲಾಖೆ ಅಧಿಕಾರಿಗಳು ಪ್ರತಿಭಟನೆ ಸಲ್ಲಿಸಿದ್ದಾರೆ. ಇದಲ್ಲದೇ ರಷ್ಯಾದಲ್ಲಿ ಯುಎಸ್ ರಾಯಭಾರಿಯಾಗಿರುವ ಲಿನ್ ಟ್ರೇಸಿ ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ.

ಇದನ್ನೂ ಓದಿ: ಹೊಸ ಮೊಬೈಲ್‌ನಲ್ಲಿ Install ಆಗಿರುವ Appಗಳಿಂದ ಮಾಹಿತಿ ಕಳವು?: ಸದ್ಯದಲ್ಲೇ ಇದಕ್ಕೆ ಕಡಿವಾಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.