ನವದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧವು ಮತ್ತಷ್ಟು ತೀವ್ರತೆಗೊಳ್ಳುತ್ತಿದೆ. ಅಮೆರಿಕ ಸೇರಿದಂತೆ ಇತರ ಯುರೋಪಿಯನ್ ರಾಷ್ಟ್ರಗಳು ರಷ್ಯಾದಲ್ಲಿ ಲಗಾಮು ಹಾಕಲು ಪ್ರಯತ್ನಿಸುತ್ತಿವೆ. ಆದರೆ, ಇಲ್ಲಿಯವರೆಗೆ ಎಲ್ಲ ಪ್ರಯತ್ನಗಳು ವ್ಯರ್ಥವಾದಂತೆ ತೋರುತ್ತಿದೆ. ಇದರ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬುಧವಾರ ರಷ್ಯಾದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಯುದ್ಧದ ಸಮಯದಲ್ಲಿ ಉಕ್ರೇನ್ ಮೇಲೆ ದಾಳಿ ಮಾಡಲು ರಷ್ಯಾ ಇದುವರೆಗೆ ಸುಮಾರು 400 ಇರಾನ್ ಡ್ರೋನ್‌ಗಳನ್ನು ಬಳಸಿದೆ ಎಂದು ಆರೋಪಿಸಿದ ಝೆಲೆನ್ಸ್ಕಿ, ಬಹಳ ಸಮಯದ ನಂತರ ನಾವು ಮುಂದೆ ಸಾಗುತ್ತಿದ್ದೇವೆ ಎಂದು ಹೇಳಿದರು.
ಮತ್ತೊಂದೆಡೆ, ಇಸ್ರೇಲ್‌ನಿಂದ ಉಕ್ರೇನ್‌ಗೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವ ಕುರಿತು ಝೆಲೆನ್ಸ್ಕಿ ಇದು ಇಸ್ರೇಲ್‌ನ ಸಕಾರಾತ್ಮಕ ಹೆಜ್ಜೆಯಾಗಿದೆ. ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಇಸ್ರೇಲ್‌ಗೆ ಯುದ್ಧದ ಬಗ್ಗೆ ತಿಳಿದಿದೆ ಮತ್ತು ಇಸ್ರೇಲ್ ನಮ್ಮನ್ನು ಹೆಚ್ಚು ಬೆಂಬಲಿಸಬೇಕು. ಫೆಬ್ರವರಿ 24 ರಿಂದ ಇಸ್ರೇಲ್ ಜನರು ಉಕ್ರೇನಿಯನ್ನರನ್ನು ಬೆಂಬಲಿಸುತ್ತಾರೆ ಎಂದು ನಾವು ಕಾಯುತ್ತಿದ್ದೇವೆ. ನಮಗೆ ಇಸ್ರೇಲ್‌ನ ರಾಜಕೀಯ ನಾಯಕತ್ವ ಬೇಕು ಎಂದು ಹೇಳಿದರು.
ಬೇರೆ ಹೆಸರಿನಲ್ಲಿ ರಷ್ಯಾ ಬಳಕೆ: ಉಕ್ರೇನಿಯನ್ ತಜ್ಞರ ಪ್ರಕಾರ, ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲು ಕಾಮಿಕೇಜ್ ಡ್ರೋನ್‌ಗಳನ್ನು ವ್ಯಾಪಕವಾಗಿ ಬಳಸುತ್ತಿದೆ. ಇದು ಇರಾನ್‌ನಲ್ಲಿ ತಯಾರಿಸಲ್ಪಟ್ಟಿದೆ. ಯಾರೂ ಅವಗಳನ್ನು ಗುರುತಿಸಲು ಸಾಧ್ಯವಾಗದಂತೆ ರಷ್ಯಾದ ಸೈನ್ಯವು ಅವುಗಳನ್ನು ಬೇರೆ ಹೆಸರಿನಲ್ಲಿ ಬಳಸುತ್ತದೆ ಎಂದು ಹೇಳಿದ್ದಾರೆ.
ಕಳೆದ ಒಂದು ದಿನದಲ್ಲಿ ರಷ್ಯಾ ಉಕ್ರೇನ್‌ನ 40 ಕ್ಕೂ ಹೆಚ್ಚು ಹಳ್ಳಿಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಜನರು ವೈಮಾನಿಕ ದಾಳಿಗೆ ಹೆದರಿ ಬಂಕರ್‌ಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ಬುಧವಾರ ಹೇಳಿದ್ದಾರೆ. ರಷ್ಯಾದ ಪಡೆಗಳು ಉಕ್ರೇನಿಯನ್ ಗುರಿಯನ್ನಾಗಿಸಿ ಐದು ರಾಕೆಟ್ ದಾಳಿಗಳು, 30 ವೈಮಾನಿಕ ದಾಳಿಗಳು ಮತ್ತು ಬಹು ಉಡಾವಣಾ ರಾಕೆಟ್ ವ್ಯವಸ್ಥೆಗಳೊಂದಿಗೆ 100 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿವೆ ಎಂದು ಉಕ್ರೇನ್ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಹೇಳಿದ್ದಾರೆ.
ಆಪಾದಿತ 'ಡರ್ಟಿ ಬಾಂಬ್' ಅನ್ನು ಬಳಸುವ ಉಕ್ರೇನ್‌ನ ಯೋಜನೆಯ ಬಗ್ಗೆ ತಮ್ಮ ಕಳವಳ ಹಂಚಿಕೊಳ್ಳಲು ರಷ್ಯಾದ ರಕ್ಷಣಾ ಸಚಿವರು ಭಾರತ ಮತ್ತು ಚೀನಾದಲ್ಲಿರುವ ತಮ್ಮ ಸಹವರ್ತಿಗಳೊಂದಿಗೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದಾರೆ.
ಓದಿ: ಪರಮಾಣುಗಳ ಸಮರಾಭ್ಯಾಸ: ಪರಿಣಾಮ ನೆಟ್ಟಗಿರಲ್ಲ ಎಂದು ರಷ್ಯಾಗೆ ಅಮೆರಿಕ ವಾರ್ನಿಂಗ್