ಕೀವ್: ಇತ್ತೀಚೆಗಷ್ಟೇ ಅಮೆರಿಕ ಯುದ್ಧಪೀಡಿತ ಉಕ್ರೇನ್ಗೆ ಹಿಮಾರ್ಸ್ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಒದಗಿಸಿ ಸಹಾಯ ಮಾಡುವುದಾಗಿ ಹೇಳಿರುವ ಬೆನ್ನಲ್ಲೇ ರಷ್ಯಾ ಕಿಡಿಕಾರಿದೆ. ಈ ಬಗ್ಗೆ ಮಾತನಾಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ಗೆ ಸಹಾಯ ಮಾಡಿದ್ದೇ ಆದಲ್ಲಿ ನಾವು ಹೊಸ ಗುರಿ ಇಡಬೇಕಾಗುತ್ತದೆ.
ಕೀವ್ಗೆ ದೂರಗಾಮಿ ಕ್ಷಿಪಣಿಗಳನ್ನು ಪೂರೈಸುವ ಪಶ್ಚಿಮದ ರಾಷ್ಟ್ರಗಳ ನಿರ್ಧಾರವನ್ನು ಖಂಡಿಸಿರುವ ಪುಟಿನ್, ನಿಮ್ಮ ಈ ಸಹಾಯ ನೀಡುವ ನಿರ್ಧಾರ ಯುದ್ಧವನ್ನು ಇನ್ನಷ್ಟು ವಿಸ್ತರಿಸಲು ಕಾರಣವಾಗಬಹುದು. ಸದ್ಯ ಯುದ್ಧಭೂಮಿಯಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ. ಇದರ ಜೊತೆಗೆ ಇಲ್ಲಿಯವರೆಗೆ ನಾಶ ಮಾಡಿರುವುದನ್ನೂ ಸೇರಿಸಿ, ಹೊಸ ಪ್ರದೇಶಗಳನ್ನು ನಾವು ಗುರಿಯಾಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ರಷ್ಯಾ ಅಧ್ಯಕ್ಷ ಹೊಸ ಪ್ರದೇಶಗಳ ಮೇಲೆ ದಾಳಿ ಮಾಡುವುದಾಗಿ ಹೇಳಿರುವ ರಷ್ಯಾ ಅಧ್ಯಕ್ಷ ಪುಟಿನ್ ನಿಖರವಾಗಿ ಯಾವ ಪ್ರದೇಶವನ್ನು ಗುರಿಯಾಗಿಸುತ್ತಾರೆ. ಅಥವಾ ಉಕ್ರೇನ್ ಹೊರತುಪಡಿಸಿ ಬೇರೆ ದೇಶವನ್ನೇ ದಾಳಿಗೆ ಗುರಿಯಾಗಿಸುತ್ತಾರೋ ಎಂಬುದನ್ನು ಸ್ಪಷ್ಟಪಡಿಸಿಲ್ಲ. ನಾವು ಈ ಯುದ್ಧವನ್ನು ಸಾಧ್ಯವಾದಷ್ಟು ಕಾಲ ವಿಸ್ತರಿಸುವ ಉದ್ದೇಶವನ್ನಷ್ಟೇ ಹೊಂದಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಉಕ್ರೇನ್ನಲ್ಲಿ ಶಾಂತಿ ಸ್ಥಾಪಿಸಬೇಕಾದರೆ ಮಾತುಕತೆಯೊಂದೇ ಪರಿಹಾರ: ಬೈಡನ್