ಮಾಸ್ಕೋ (ರಷ್ಯಾ): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧವೇ ದಂಗೆದ್ದಿದ್ದ ಖಾಸಗಿ ಸೇನಾ ಪಡೆ 'ವ್ಯಾಗ್ನರ್' ಉಕ್ರೇನ್ ಯುದ್ಧದಲ್ಲಿ ಮುಂದುವರಿಯುವುದಾಗಿ ಹೇಳಿದೆ. ಹೀಗಾಗಿ ಅದರ ನಾಯಕ, ಪುಟಿನ್ ಆಪ್ತ ಯೆವ್ಗನಿ ಪ್ರಿಗೊಝಿನ್ ವಿರುದ್ಧ ಸೂಚಿಸಿದ್ದ ಕ್ರಮವನ್ನು ಹಿಂತೆಗೆದುಕೊಳ್ಳಲಾಗಿದೆ.
50 ಸಾವಿರ ಸೇನಾ ಬಲವನ್ನು ಹೊಂದಿರುವ ಖಾಸಗಿ ಪಡೆ ವ್ಯಾಗ್ನರ್ ರಷ್ಯಾ ಪರವಾಗಿ ಉಕ್ರೇನ್ ಯುದ್ಧ ಭೂಮಿಯಲ್ಲಿ ಹೋರಾಡುತ್ತಿದೆ. ಆದರೆ, ಸೇನೆ ಹಲವಾರು ಸಂಕಷ್ಟಕ್ಕೀಡಾಗಿದ್ದರೂ ರಷ್ಯಾ ಸೇನಾಧ್ಯಕ್ಷರು ನಿರ್ಲಕ್ಷ್ಯ ವಹಿಸಿದ್ದರಿಂದ ಅಧಿಕೃತ ಸೇನೆ ವಿರುದ್ಧವೇ ಬಂಡಾಯ ಸಾರಿತ್ತು. ಅದರ ನಾಯಕ ಯೆವ್ಗನಿ ಪ್ರಿಗೊಝಿನ್ ಪುಟಿನ್ರ ಅತ್ಯಾಪ್ತರಾಗಿದ್ದರೂ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯುವುದಾಗಿ ಗುಡುಗಿದ್ದರು.
-
Absolutely unexpected development. According to Kremlin, Prigozhin will go to Belarus. Earlier, Lukashenka promised him security guarantees. The criminal case against him to be closed:
— Franak Viačorka (@franakviacorka) June 24, 2023 " class="align-text-top noRightClick twitterSection" data="
It doesn't seem that Belarus is Prigozhin’s dream destination. So what are the options:… pic.twitter.com/weWapLFFOa
">Absolutely unexpected development. According to Kremlin, Prigozhin will go to Belarus. Earlier, Lukashenka promised him security guarantees. The criminal case against him to be closed:
— Franak Viačorka (@franakviacorka) June 24, 2023
It doesn't seem that Belarus is Prigozhin’s dream destination. So what are the options:… pic.twitter.com/weWapLFFOaAbsolutely unexpected development. According to Kremlin, Prigozhin will go to Belarus. Earlier, Lukashenka promised him security guarantees. The criminal case against him to be closed:
— Franak Viačorka (@franakviacorka) June 24, 2023
It doesn't seem that Belarus is Prigozhin’s dream destination. So what are the options:… pic.twitter.com/weWapLFFOa
ವ್ಯಾಗ್ನರ್ ಪಡೆ ರಷ್ಯಾ ಒಂದು ನಗರವನ್ನೂ ವಶಕ್ಕೆ ಪಡೆದು ಮಾಸ್ಕೋದತ್ತ ದಾಳಿಗೆ ಮುಂದಾಗಿತ್ತು. ವ್ಯಾಗ್ನರ್ ಪಡೆಯ ಈ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ರಷ್ಯಾ ತಬ್ಬಿಬ್ಬಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಅಧ್ಯಕ್ಷ ಪುಟಿನ್ ದೇಶದ ವಿರುದ್ಧ ಬಂಡಾಯವೆದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.
ಬೆಲಾರಸ್ ಅಧ್ಯಕ್ಷ ಮಧ್ಯಸ್ಥಿಕೆ: ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ವ್ಯಾಗ್ನರ್ ಪಡೆ ಮತ್ತು ರಷ್ಯಾ ಸೇನೆಯ ಮಧ್ಯೆ ಮಧ್ಯಸ್ಥಿಕೆ ವಹಿಸಿದ್ದರಿಂದ ಬಂಡಾಯ ಶಮನವಾಗಿದೆ. ಒಪ್ಪಂದದ ಮೇರೆಗೆ ಮಾಸ್ಕೋಗೆ ತನ್ನ ಪಡೆಗಳನ್ನು ಕಳುಹಿಸುವುದನ್ನು ಯೆವ್ಗನಿ ಪ್ರಿಗೊಝಿನ್ ನಿಲ್ಲಿಸಲು ನಿರ್ಧರಿಸಿದ್ದಾರೆ. ಸೇನಾ ನಾಯಕತ್ವದ ವಿರುದ್ಧದ ದಂಗೆಯನ್ನು ವ್ಯಾಗ್ನರ್ ಪಡೆ ಕೈಬಿಟ್ಟಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
-
‼️ At 9 p.m. tonight, the Presidents 🇧🇾🇷🇺 spoke again by phone.
— Belarus MFA 🇧🇾 (@BelarusMFA) June 24, 2023 " class="align-text-top noRightClick twitterSection" data="
The President of #Belarus #Lukashenko informed the President of #Russia about the results of negotiations w/ the leader of the Wagner Group.
The 🇷🇺 President #Putin thanked his 🇧🇾 counterpart for the work done pic.twitter.com/2Uz92jYcBm
">‼️ At 9 p.m. tonight, the Presidents 🇧🇾🇷🇺 spoke again by phone.
— Belarus MFA 🇧🇾 (@BelarusMFA) June 24, 2023
The President of #Belarus #Lukashenko informed the President of #Russia about the results of negotiations w/ the leader of the Wagner Group.
The 🇷🇺 President #Putin thanked his 🇧🇾 counterpart for the work done pic.twitter.com/2Uz92jYcBm‼️ At 9 p.m. tonight, the Presidents 🇧🇾🇷🇺 spoke again by phone.
— Belarus MFA 🇧🇾 (@BelarusMFA) June 24, 2023
The President of #Belarus #Lukashenko informed the President of #Russia about the results of negotiations w/ the leader of the Wagner Group.
The 🇷🇺 President #Putin thanked his 🇧🇾 counterpart for the work done pic.twitter.com/2Uz92jYcBm
ಬೆಲಾರಸ್ನ ವಕ್ತಾರ ಡಿಮಿಟ್ರಿ ಎಸ್ ಪೆಸ್ಕೋವ್, ವ್ಯಾಗ್ನರ್ ಪಡೆಯ ನಾಯಕ ಪ್ರಿಗೊಝಿನ್ ಬೆಲಾರಸ್ಗೆ ತೆರಳಲಿದ್ದಾರೆ. ಬಿಕ್ಕಟ್ಟು ಶಮನವಾಗಿದೆ. ಪ್ರಿಗೊಝಿನ್ ಜೊತೆಗೆ ಬಂಡಾಯವೆದ್ದ ಹೋರಾಟಗಾರರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ದಂಗೆಯಲ್ಲಿ ಭಾಗವಹಿಸದ ವ್ಯಾಗ್ನರ್ ಹೋರಾಟಗಾರರು ರಷ್ಯಾದ ರಕ್ಷಣಾ ಸಚಿವಾಲಯದೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಬಹುದು ಎಂದೂ ಹೇಳಿದ್ದಾರೆ.
ಮಾತುಕತೆ, ಬಂಡಾಯ ಶಮನ: ಈ ವಿಷಯವಾಗಿ ಟ್ವೀಟ್ ಮಾಡಿರುವ ಬೆಲಾರಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವ್ಯಾಗ್ನರ್ ಪಡೆಯ ನಾಯಕ ಯೆವ್ಗನಿ ಪ್ರಿಗೊಝಿನ್ ಜೊತೆ ಸಂಧಾನ ಏರ್ಪಟ್ಟಿದೆ. ಪುಟಿನ್ ಅವರ ಜೊತೆಗೂ ಸಂಪರ್ಕ ಸಾಧಿಸಲಾಗಿದೆ. ರಷ್ಯಾ ಮಿತ್ರ ರಾಷ್ಟ್ರವಾದ ಬೆಲಾರಸ್ನ ಅಧ್ಯಕ್ಷರು ಮಾತುಕತೆ ನಡೆಸಿ ಬಂಡಾಯ ಶಮನಗೊಳಿಸಿದ್ದಾರೆ. ಇದಕ್ಕೆ ಪುಟಿನ್ ಕೂಡ ಧನ್ಯವಾದ ಸಲ್ಲಿಸಿದ್ದಾರೆ ಎಂದು ಬರೆದುಕೊಂಡಿದೆ.
ರಷ್ಯಾ ಸೇನಾಧಿಕಾರಿಗಳ ವಿರುದ್ಧವೇ ವ್ಯಾಗ್ನರ್ ಪಡೆ ದಂಗೆ ಸಾರಿತ್ತು. ಶಸ್ತ್ರಸಜ್ಜಿತ ಸೈನಿಕರು ರಷ್ಯಾದ ನಗರವನ್ನು ವಶಕ್ಕೆ ಪಡೆದುದಿದ್ದು, ರಾಜಧಾನಿ ಮಾಸ್ಕೋದತ್ತ ಧಾವಿಸಲಾಗುವುದು ಎಂಬ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಇದು ರಷ್ಯಾ ಸೇನೆ ಮತ್ತು ಆಡಳಿತಕ್ಕೆ ತಲೆನೋವು ತಂದಿತ್ತು.
ಬಂಧನಕ್ಕೆ ಆದೇಶಿಸಿದ್ದ ಪುಟಿನ್: ತಮ್ಮ, ಸೇನೆ ವಿರುದ್ಧವೇ ಬಂಡೆದ್ದಿದ್ದ ವ್ಯಾಗ್ನರ್ ಪಡೆಯ ನಾಯಕ ಯೆವ್ಗನಿ ಪ್ರಿಗೊಝಿನ್ ಬಂಧಿಸಲು ಅಧ್ಯಕ್ಷ ಪುಟಿನ್ ಆದೇಶಿಸಿದ್ದರು. ದೇಶದ ಸೇನೆಯ ವಿರುದ್ಧ ಸಶಸ್ತ್ರ ದಂಗೆಗೆ ಕರೆ ನೀಡಿದ್ದರಿಂದ ದೇಶ ವಿರೋಧಿ ಕೆಲಸವಾಗಿದೆ. ಬಂಧಿಸಿ ಕ್ರಮ ಜರುಗಿಸಲು ಸೂಚಿಸಲಾಗಿತ್ತು.
ವ್ಯಾಗ್ನರ್ ಪಡೆಯ ಬಗ್ಗೆ..: Wagner Mercenary ಎಂಬುದು ಒಂದು ಖಾಸಗಿ ಪ್ಯಾರಾ ಮಿಲಿಟರಿ ಪಡೆಯಾಗಿದೆ. ಪುಟಿನ್ ಆಪ್ತ ಯೆವ್ಗನಿ ಪ್ರಿಗೊಝಿನ್ ಇದರ ಮುಖ್ಯಸ್ಥನಾಗಿದ್ದಾನೆ. ಇದು ಕಾನೂನು ಬಾಹಿರ ಸೇನಾ ಪಡೆಯಾಗಿದ್ದರೂ, ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದಂತೆ ಕೆಲಸ ಮಾಡುತ್ತಿದೆ. ಒಟ್ಟು 50 ಸಾವಿರ ಸೈನಿಕರನ್ನು ಹೊಂದಿದೆ.
ಇದನ್ನೂ ಓದಿ: Russian Wagner group: ಖಾಸಗಿ ಸೇನೆಯ ಬಂಡಾಯವನ್ನು ದ್ರೋಹ ಎಂದ ರಷ್ಯಾದ ಅಧ್ಯಕ್ಷ.. ದಂಗೆ ಹತ್ತಿಕ್ಕಲು ಪುಟಿನ್ ಪ್ರತಿಜ್ಞೆ