ETV Bharat / international

ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ರಷ್ಯಾ ಪ್ರವೇಶಕ್ಕೆ ನಿಷೇಧ - ಒಬಾಮಾ

ಯುಎಸ್ ಮಾಜಿ ಅಧ್ಯಕ್ಷ ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ರಷ್ಯಾ ದೇಶ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

former US President Obama
ಯುಎಸ್ ಮಾಜಿ ಅಧ್ಯಕ್ಷ ಒಬಾಮಾ
author img

By

Published : May 20, 2023, 12:32 PM IST

ವಾಷಿಂಗ್ಟನ್ (ಅಮೆರಿಕ): ಅಮೆರಿಕ ವಿಧಿಸಿರುವ ನಿರ್ಬಂಧಗಳಿಗೆ ಪ್ರತಿಯಾಗಿ ರಷ್ಯಾ ದೇಶಕ್ಕೆ ಪ್ರವೇಶಿಸದಂತೆ ನಿಷೇಧಿಸಿರುವ 500 ಅಮೆರಿಕನ್ನರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದ್ದಾರೆ. ರಷ್ಯಾ ಸಚಿವಾಲಯದ ಹೇಳಿಕೆಯ ಪ್ರಕಾರ, ಜೋ ಬೈಡನ್ ಆಡಳಿತವು ವಿಧಿಸಿದ ರಷ್ಯಾದ ವಿರೋಧಿ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಯುಎಸ್ ಕಾರ್ಯನಿರ್ವಾಹಕ ಶಾಖೆಯ ಹಲವಾರು ಹಿರಿಯ ಸದಸ್ಯರು ಸೇರಿದಂತೆ 500 ಅಮೆರಿಕನ್ನರನ್ನು ರಷ್ಯಾ ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದೆ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಒಬಾಮಾ, ಮಾಜಿ ಯುಎಸ್ ರಾಯಭಾರಿ ಜಾನ್ ಹಂಟ್ಸ್‌ಮನ್, ಹಲವಾರು ಯುಎಸ್ ಸೆನೆಟರ್‌ಗಳು ಮತ್ತು ಜಂಟಿ ಮುಖ್ಯಸ್ಥರು, ಚಾರ್ಲ್ಸ್ ಕ್ಯೂ ಬ್ರೌನ್ ಜೂನಿಯರ್ ಕೂಡ ಸೇರಿದ್ದಾರೆ. ಪ್ರಸಿದ್ಧ ಅಮೆರಿಕನ್ ಲೇಟ್ ನೈಟ್ ಟಿವಿ ಕಾರ್ಯಕ್ರಮದ ನಿರೂಪಕರಾದ ಜಿಮ್ಮಿ ಕಿಮ್ಮೆಲ್, ಕೋಲ್ಬರ್ಟ್ ಮತ್ತು ಸೇಥ್ ಮೇಯರ್ಸ್ ಅವರು ರಷ್ಯಾ ದೇಶ ಪ್ರವೇಶಕ್ಕೆ ನಿಷೇಧಿತರಾದ ಪಟ್ಟಿಯಲ್ಲಿದ್ದಾರೆ.

ಇನ್ನೂ ನಿಲ್ಲದ ರಷ್ಯಾ ಮತ್ತು ಉಕ್ರೇನ್ ಯುದ್ಧ: ರಷ್ಯಾ ಮತ್ತು ಉಕ್ರೇನ್ ನಡುವೆ 15 ತಿಂಗಳಿನಿಂದ ಯುದ್ಧ ನಡೆಯುತ್ತಿದೆ. ಕಳೆದ ವರ್ಷ ಫೆಬ್ರವರಿ 24ರಂದು ಪ್ರಾರಂಭವಾದ ಯುದ್ಧ ಇನ್ನೂ ಅಂತ್ಯವಿಲ್ಲ. ಈ ಯುದ್ಧದಲ್ಲಿ ಉಕ್ರೇನ್‌ನ ಹಲವು ನಗರಗಳು ನಾಶವಾಗಿವೆ. ರಷ್ಯಾದ ಸೈನಿಕರು ಸೇರಿದಂತೆ ಸಾವಿರಾರು ಜನರು ಜೀವ ಕಳೆದುಕೊಂಡಿದ್ದಾರೆ. ಅದೇ ಪ್ರಮಾಣದಲ್ಲಿ ಆಸ್ತಿ ಹಾನಿಯಾಗಿದೆ. ಆದರೆ, ಯಾವ ದೇಶವೂ ಕೂಡ ಯುದ್ಧದಿಂದ ಹಿಂದೆ ಸರಿದಿಲ್ಲ. ನಡೆಯುತ್ತಿರುವ ಯುದ್ಧದಿಂದಾಗಿ ಉಕ್ರೇನ್‌ನ ಪೂರ್ವ ಪ್ರದೇಶದ ಅನೇಕ ನಗರಗಳು ಈಗಾಗಲೇ ನೆಲಸಮವಾಗಿವೆ. ಅವರೆಲ್ಲರನ್ನೂ ರಷ್ಯಾದ ಸೇನಾ ಪಡೆಗಳು ವಶಕ್ಕೆ ತೆಗೆದುಕೊಂಡಿದೆ. ಮರಿಯುಪೋಲ್, ಮೆಲಿಟೊಪೋಲ್, ಕ್ರೈಮಿಯಾ, ಡಾನ್ಬಾಸ್, ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್, ಸುಮಿ, ಒಡೆಸ್ಸಾ, ಚೆರ್ನಿವ್ಟ್ಸಿ ಸೇರಿದಂತೆ ವಿವಿಧ ನಗರಗಳನ್ನು ರಷ್ಯಾದ ಮಿಲಿಟರಿ ಪಡೆಗಳು ವಶಪಡಿಸಿಕೊಂಡಿವೆ.

ರಷ್ಯಾದ ಆಕ್ರಮಣವನ್ನು ಸಮರ್ಥವಾಗಿ ತಡೆದ ಉಕ್ರೇನ್: ಉಕ್ರೇನ್ ಅಷ್ಟು ಸುಲಭವಾಗಿ ರಷ್ಯಾಕ್ಕೆ ತಲೆಬಾಗುವುದಿಲ್ಲ ಅಂತ ಕಾಣಿಸುತ್ತದೆ. ಈ ದಾಳಿಗಳನ್ನು ಅದು ಧೈರ್ಯದಿಂದ ಎದುರಿಸಿ ನಿಂತಿದೆ. ರಷ್ಯಾ ವಶಪಡಿಸಿಕೊಂಡ ಕೆಲವು ಪ್ರಮುಖ ನಗರಗಳನ್ನು ಸ್ವತಂತ್ರಗೊಳಿಸುವಲ್ಲಿ ಯಶಸ್ವಿಯಾಯಿತು. ಅಮೆರಿಕ, ಫ್ರಾನ್ಸ್, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳು ಶಸ್ತ್ರಾಸ್ತ್ರಗಳು ಮತ್ತು ಯುದ್ಧ ಸಾಮಗ್ರಿಗಳೊಂದಿಗೆ ರಷ್ಯಾದ ಆಕ್ರಮಣವನ್ನು ತಡೆಯಲು ಸಮರ್ಥವಾಗಿವೆ.

ರಷ್ಯಾ ದೇಶದ ಮೇಲೆ ಹಲವು ನಿರ್ಬಂಧಗಳು: ರಷ್ಯಾ ಕೂಡ ಪಾಶ್ಚಿಮಾತ್ಯ ದೇಶಗಳಿಂದ ಒತ್ತಡಗಳು, ನಿರ್ಬಂಧಗಳು ಮತ್ತು ವಿವಿಧ ರೀತಿಯ ನಿಷೇಧಗಳನ್ನು ಎದುರಿಸುತ್ತಿದೆ. ರಷ್ಯಾ ಅನೇಕ ರಾಜತಾಂತ್ರಿಕ, ಆರ್ಥಿಕ ಮತ್ತು ವ್ಯಾಪಾರ ನಿರ್ಬಂಧಗಳನ್ನು ಎದುರಿಸುತ್ತಿದೆ. ಕೆಲವು ಯುರೋಪಿಯನ್ ರಾಷ್ಟ್ರಗಳು ಸಹ ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿವೆ. ವಿದೇಶಗಳ ವಿಮಾನಗಳು ಸಹ ತನ್ನ ವಾಯುಪ್ರದೇಶವನ್ನು ಬಂದ್ ಮಾಡಲಾಗಿದೆ.

ಇದನ್ನೂ ಓದಿ: ಜಪಾನ್​ ಪ್ರವಾಸದಲ್ಲಿ ಪ್ರಧಾನಿ ಮೋದಿ.. ಹಿರೋಶಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.