ETV Bharat / international

50 ವರ್ಷಗಳಿಂದ ಜಾರಿಯಲ್ಲಿದ್ದ ಗರ್ಭಪಾತದ ಹಕ್ಕು ರದ್ದುಗೊಳಿದ ಅಮೆರಿಕ!

50 ವರ್ಷಗಳಿಂದ ಜಾರಿಯಲ್ಲಿದ್ದ ಗರ್ಭಪಾತದ ಹಕ್ಕನ್ನು ರದ್ದುಗೊಳಿಸಲಾಗುತ್ತಿದೆ ಎಂದು ಅಮೆರಿಕದ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ತೀರ್ಪಿನಿಂದ ಕೆಲವರು ಸಂತಸ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಾನೂನು ರದ್ದುಗೊಳಿಸಿದ್ದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ. "ಇಂದು ಅಮೆರಿಕಕ್ಕೆ ಬಹಳ ದುಃಖದ ದಿನ" ಎಂದು ಅಧ್ಯಕ್ಷ ಬೈಡನ್​ ಬೇಸರ ವ್ಯಕ್ತಪಡಿಸಿದ್ದಾರೆ.

Roe v Wade: US Supreme Court ends constitutional right to abortion  US Supreme Court ends constitutional right to abortion  America Supreme Court news  abortion news  ರೋಯ್ ವಿ ವೇಡ್ ತೀರ್ಪು ರದ್ಧುಗೊಳಿಸಿದ ಯುಎಸ್​ ಸುಪ್ರೀಂಕೋರ್ಟ್​ ಅಮೆರಿಕಾದಲ್ಲಿ ಗರ್ಭಪಾತ ಹಕ್ಕನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್​ ಅಮೆರಿಕಾ ಸುಪ್ರೀಂಕೋರ್ಟ್​ ಸುದ್ದಿ
50 ವರ್ಷಗಳಿಂದ ಜಾರಿಯಲ್ಲಿದ್ದ ಗರ್ಭಪಾತದ ಹಕ್ಕನ್ನು ರದ್ದುಗೊಳಿದ ಅಮೆರಿಕ
author img

By

Published : Jun 25, 2022, 7:14 AM IST

ವಾಷಿಂಗ್ಟನ್​: ಅಮೆರಿಕ ಸುಪ್ರೀಂಕೋರ್ಟ್ ಸಂವೇದನಾಶೀಲ ತೀರ್ಪು ನೀಡಿದೆ. ಸುಮಾರು ಐವತ್ತು ವರ್ಷಗಳಿಂದ ಜಾರಿಯಲ್ಲಿದ್ದ ಗರ್ಭಪಾತದ ಹಕ್ಕನ್ನು ರದ್ದುಪಡಿಸಲಾಗುತ್ತಿದೆ ಎಂದು ಬಹಿರಂಗಪಡಿಸಿದೆ. ಸಂವಿಧಾನವು ಗರ್ಭಪಾತದ ಹಕ್ಕನ್ನು ಒದಗಿಸುವುದಿಲ್ಲ.

ರೋ ಕೇಸಿ ಪ್ರಕರಣದ ತೀರ್ಪನ್ನು ನಾವು ರದ್ದುಗೊಳಿಸುತ್ತೇವೆ. ಗರ್ಭಪಾತಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವು ಚುನಾಯಿತ ಪ್ರತಿನಿಧಿಗಳು, ಜನರಿಗೆ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅಮೆರಿಕದಲ್ಲಿ 1973 ರಲ್ಲಿ ರೋಯ್ ವಿ ವೇಡ್ ಪ್ರಕರಣದಲ್ಲಿ ಮಹಿಳೆಯರಿಗೆ ಗರ್ಭಪಾತ ಮಾಡುವ ಸಾಂವಿಧಾನಿಕ ಹಕ್ಕನ್ನು ನೀಡುವ ಮಹತ್ವದ ತೀರ್ಪು ನೀಡಲಾಗಿತ್ತು. ಅಂದಿನಿಂದ ಅಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಲಾಗಿತ್ತು.

ಆದರೆ, ಅನಿಯಂತ್ರಿತ ಗರ್ಭಪಾತಗಳು ಮತ್ತು ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡಿತ್ತು. ಕಳೆದ ಕೆಲವು ವರ್ಷಗಳಿಂದ ಅಮೆರಿಕದ ಕೆಲವು ಭಾಗಗಳಲ್ಲಿ ಹೋರಾಡುತ್ತಿದ್ದು, ಗರ್ಭಪಾತದ ಹಕ್ಕನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದವು.

ಓದಿ: ಗರ್ಭಪಾತ ವಿರೋಧಿಸಿ 60 ಅಂತಸ್ತಿನ ಕಟ್ಟಡ ಏರಿದ ಕಾರ್ಯಕರ್ತನ ಬಂಧನ

ಗರ್ಭಪಾತದ ಕುರಿತು ಅಮೆರಿಕ ಸುಪ್ರೀಂಕೋರ್ಟ್ ತೀರ್ಪಿನಿಂದ ಕೆಲವರು ಸಂತೋಷಪಟ್ಟರೆ, ಕೆಲವರು ಅದನ್ನು ವಿರೋಧಿಸುತ್ತಿದ್ದಾರೆ. ಈ ಆದೇಶದಲ್ಲಿ ನೂರಾರು ಅಮೆರಿಕನ್ನರು ಸುಪ್ರೀಂಕೋರ್ಟ್ ಮುಂದೆ ಜಮಾಯಿಸಿ ಪ್ರತಿಭಟನೆಗೆ ಮುಂದಾದರು.

ಈ ವೇಳೆ, ಪೊಲೀಸರು ಬಿಗಿ ಭದ್ರತೆ ಕೈಗೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ಮಾಡಿದರು. ಸುಪ್ರೀಂಕೋರ್ಟ್ ತೀರ್ಪು ನೀಡಿದ ಸ್ವಲ್ಪ ಸಮಯದ ನಂತರ ಸುಮಾರು 25 ರಿಂದ 50 ರಾಜ್ಯಗಳು ಗರ್ಭಪಾತದ ಮೇಲೆ ನಿಷೇಧವನ್ನು ಘೋಷಿಸಿದವು. ಯುನೈಟೆಡ್ ಸ್ಟೇಟ್ಸ್​ನ ಮಿಸೌರಿ ರಾಜ್ಯವು ಗರ್ಭಪಾತವನ್ನು ನಿಷೇಧಿಸಿದ ಮೊದಲ ರಾಜ್ಯವಾಯಿತು.

ಅಮೆರಿಕಾಕ್ಕೆ ದುಃಖದ ದಿನ: ಗರ್ಭಪಾತದ ಹಕ್ಕುಗಳನ್ನು ರದ್ದುಗೊಳಿಸುವ ಸುಪ್ರೀಂಕೋರ್ಟ್ ತೀರ್ಪಿಗೆ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ. ಇಂದು ಅಮೆರಿಕಕ್ಕೆ ಅತ್ಯಂತ ದುಃಖದ ದಿನವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸುಪ್ರೀಂಕೋರ್ಟ್ ತೀರ್ಪು ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದೆ. ಮಹಿಳೆಯರ ಆರೋಗ್ಯ ಮತ್ತು ಜೀವನ ಅಪಾಯದಲ್ಲಿ ಬಿದ್ದಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.