ETV Bharat / international

ಇಂಗ್ಲೆಂಡ್​ ಪ್ರಧಾನಿ ಆಯ್ಕೆ: 1ನೇ ಸುತ್ತಿನಲ್ಲಿ ರಿಷಿ ಸುನಕ್​​ಗೆ ಹೆಚ್ಚಿನ ಮತ.. ಪ್ರಧಾನಿ ರೇಸ್​​ನಲ್ಲಿ ಮುನ್ನಡೆ - ಯಕೆ ಪ್ರಧಾನಿ ಆಯ್ಕೆ

ಯುಕೆ ಪ್ರಧಾನಿ ಹುದ್ದೆ ರೇಸ್​​ನಲ್ಲಿರುವ ರಿಷಿ ಸುನಕ್​ ಇದೀಗ ಮೊದಲ ಹಂತದ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಒಟ್ಟು 88 ಮತಗಳನ್ನು ಗಳಿಕೆ ಮಾಡಿದ್ದಾರೆ.

Rishi Sunak Leads In Race of next UK PM
Rishi Sunak Leads In Race of next UK PM
author img

By

Published : Jul 13, 2022, 10:43 PM IST

Updated : Jul 13, 2022, 10:55 PM IST

ಯುಕೆ(ಲಂಡನ್​​): ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾಗಿರುವ ಯುಕೆ ಪ್ರಧಾನಿ ಹುದ್ದೆಗೆ ಚುನಾವಣೆ ಆರಂಭಗೊಂಡಿದೆ. ಮೊದಲನೇ ಸುತ್ತಿನ ಮತದಾನದಲ್ಲಿ ಇನ್ಫೋಸಿಸ್​ ಸುಧಾಮೂರ್ತಿ ಅವರ ಅಳಿಯ ರಿಷಿ ಸುನಕ್ ಹೆಚ್ಚಿನ ಮತ ಪಡೆದುಕೊಂಡಿದ್ದು, ಪ್ರಧಾನಿ ರೇಸ್​​ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಿಷಿ ಸುನಕ್​​ 88 ಮತ ಪಡೆದುಕೊಂಡಿದ್ದು, ಉಳಿದಂತೆ ಪೆನ್ನಿ ಮೊರ್ಡಾಂಟ್​​ 67 ಹಾಗೂ ಟ್ರಸ್ ಲಿಜ್​ 50 ಮತ ಗಳಿಕೆ ಮಾಡಿದ್ದಾರೆ. ಇದರ ಜೊತೆಗೆ ಇಬ್ಬರು ಅಭ್ಯರ್ಥಿಗಳು ರೇಸ್​​ನಿಂದ ಹೊರಬಿದ್ದಿದ್ದಾರೆ.​

  • Former British Finance Minister Rishi Sunak won the most votes in the first round of voting to succeed Boris Johnson as leader of the Conservative Party and UK Prime Minister, as two candidates were eliminated: Reuters

    (File photo) pic.twitter.com/xnmpASMEQn

    — ANI (@ANI) July 13, 2022 " class="align-text-top noRightClick twitterSection" data=" ">

ಬೋರಿಸ್ ಜಾನ್ಸನ್​ ಅವರ ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲು ಮಾಜಿ ಚಾನ್ಸಲರ್​ ರಿಷಿ ಸುನಕ್, ಅಟಾರ್ನಿ ಜನರಲ್​ ಸುಯೆಲ್ಲಾ ಬ್ರಾವರ್​ಮನ್​ ಕನ್ಸರ್ವೇಟಿವ್ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಉಳಿದಂತೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್, ಹೊಸ ಚಾನ್ಸೆಲರ್ ನಧಿಮ್ ಜಹಾವಿ, ವಾಣಿಜ್ಯ ಸಚಿವ ಪೆನ್ನಿ ಮೊರ್ಡಾಂಟ್, ಮಾಜಿ ಕ್ಯಾಬಿನೆಟ್ ಮಂತ್ರಿಗಳಾದ ಕೆಮಿ ಬಡೆನೊಚ್ ಮತ್ತು ಜೆರೆಮಿ ಹಂಟ್ ಮತ್ತು ಟೋರಿ ಬ್ಯಾಕ್‌ಬೆನ್‌ಚರ್ ಟಾಮ್ ತುಗೆನ್‌ಧಾಟ್ ಅವರು ಸಹ ಪ್ರಧಾನಿ ಹುದ್ದೆ ರೇಸ್​​ನಲ್ಲಿದ್ದಾರೆ.​

ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಕನಿಷ್ಠ 20 ಸಂಸದರ ಬೆಂಬಲ ಅಗತ್ಯವಿದ್ದು, ಅಷ್ಟು ಸಂಸದರು ಬೆಂಬಲ ಸೂಚಿಸಿದರೆ ಮೊದಲ ಸುತ್ತಿನಲ್ಲಿ ಅರ್ಹತೆ ಪಡೆಯುತ್ತಾರೆ. ಇದೀಗ ಸುನಕ್​ ಅವರಿಗೆ ಬೆಂಬಲ ಸಿಕ್ಕಿರುವ ಕಾರಣ ಮುನ್ನಡೆ ಸಾಧಿಸಿದ್ದಾರೆ. ಇನ್ನೂ ಎರಡನೇ ಸುತ್ತು ಪ್ರವೇಶಿಸಬೇಕಾದರೆ 30 ಸಂಸದರ ಬೆಂಬಲ ಸಿಗಬೇಕು. ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್​ ಅವರ ಉತ್ತರಾಧಿಕಾರಿಯಾಗಿ ಯಾರು ಆಯ್ಕೆಯಾಗುತ್ತಾರೆಂಬುದು ಇದೀಗ ಹೆಚ್ಚಿನ ಕುತೂಹಲ ಮೂಡಿಸಿದೆ.

ಹಲವು ಹಗರಣಗಳು, ಕೊರೊನಾ ಸಂದರ್ಭದಲ್ಲಿ ನಿಯಮ ಮೀರಿ ಸಂತೋಷಕೂಟ ಸೇರಿದಂತೆ ಅನೇಕ ಗಂಭೀರ ಪ್ರಕರಣಗಳು ಕೇಳಿ ಬಂದ ಕಾರಣ ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Last Updated : Jul 13, 2022, 10:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.