ಹಾಂಗ್ ಕಾಂಗ್: ಈ ಪಾಂಡದ ವಯಸ್ಸು 35 ವರ್ಷಗಳು. ಇದು ಮನಷ್ಯನ 105 ವರ್ಷಗಳ ವಯಸ್ಸಿಗೆ ಸಮಾನವಾಗಿದೆ. ಪಾಂಡಾ ಘನ ಆಹಾರವನ್ನು ತಿನ್ನುವುದನ್ನು ನಿಲ್ಲಿಸಿತು. ದೀರ್ಘಕಾಲದವರೆಗೆ ಇದು ವಿದ್ಯುದ್ವಿಚ್ಛೇದ್ಯಗಳನ್ನು ಹೊಂದಿರುವ ನೀರು ಅಥವಾ ದ್ರವಗಳನ್ನು ಮಾತ್ರ ತೆಗೆದುಕೊಳ್ಳುತ್ತಿತ್ತು. ಓಷನ್ ಪಾರ್ಕ್ ಈ ಪಾಂಡಾದ ಯೋಗಕ್ಷೇಮ ನೋಡಿಕೊಳ್ಳುತ್ತಿತ್ತು. ಪಾಂಡಾದ ತೊಂದರೆಯನ್ನು ನಿವಾರಿಸಲು ಸಿಬ್ಬಂದಿ ಅದಕ್ಕೆ ವೈದ್ಯಕೀಯ ಆರೈಕೆಯನ್ನು ಸಹ ನೀಡಿದ್ದರು.
ಓಷನ್ ಪಾರ್ಕ್ ತನ್ನ ಹೇಳಿಕೆಯಲ್ಲಿ ಇದು ದುಃಖಕರವಾಗಿದೆ ಎಂದು ಹೇಳಿದೆ. ಆದರೆ, An An ಪರಿಸ್ಥಿತಿಯು 21 ಜುಲೈ 2022 ರಂದು ಹದಗೆಟ್ಟಿದೆ. ಓಷನ್ ಪಾರ್ಕ್ ಮತ್ತು ಕೃಷಿ, ಮೀನುಗಾರಿಕೆ ಮತ್ತು ಸಂರಕ್ಷಣಾ ಇಲಾಖೆಯ ಪಶು ವೈದ್ಯರು ಚೀನಾ ಸಂರಕ್ಷಣೆ ಮತ್ತು ಸಂಶೋಧನಾ ಕೇಂದ್ರದೊಂದಿಗೆ (CHC) ಸಮಾಲೋಚಿಸಿದ ನಂತರ ದೈತ್ಯ ಪಾಂಡಾವನ್ನು ದಯಾಮರಣಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಗುರುವಾರ ಬೆಳಗ್ಗೆ 8.40ಕ್ಕೆ ಪಾಂಡವಿದ್ದ ಆವರಣದಲ್ಲೇ ದಯಾಮರಣ ಪ್ರಕ್ರಿಯೆ ನೆರವೇರಿತು ಎಂದು ಹೇಳಿದೆ.
ಓಷನ್ ಪಾರ್ಕ್ ಕಾರ್ಪೊರೇಷನ್ ಅಧ್ಯಕ್ಷ ಪಾಲೊ ಪಾಂಗ್ ಮಾತನಾಡಿ, ಆನ್ ಆನ್ ನಮ್ಮ ಕುಟುಂಬದ ಪ್ರಮುಖ ಸದಸ್ಯರಾಗಿದ್ದರು. ಉದ್ಯಾನದ ಜೊತೆಗೆ ಬೆಳೆದರು. ಆನ್ ಆನ್ ಸ್ಥಳೀಯ ಜನರು ಮತ್ತು ಪ್ರವಾಸಿಗರೊಂದಿಗೆ ಸ್ನೇಹ ಸಂಬಂಧ ಬೆಳೆಸಿದರು. ನಮಗೆ ಅನೇಕ ಹೃದಯ ಸ್ಪರ್ಶಿಸುವ ಸ್ಮರಣೀಯ ಕ್ಷಣಗಳನ್ನು ಅವರು ನೀಡಿದ್ದಾರೆ. ಆತನನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ನಿನ್ನೆ ಮಧ್ಯಾಹ್ನ ಆನ್ ಆನ್ ಆವರಣದಲ್ಲಿ ಸಂತಾಪ ಸೂಚಕ ಸಭೆಯನ್ನು ನಡೆಸಲಾಯಿತು. ಅಲ್ಲಿನ ಸಿಬ್ಬಂದಿ ಪಾಂಡ ಚಿತ್ರದೊಂದಿಗೆ ಬಿಳಿ ಹೂವುಗಳನ್ನು ಇರಿಸಿದ್ದರು. ಚಿತ್ರದಲ್ಲಿ 'ಧನ್ಯವಾದಗಳು 1986-2022' ಎಂದು ಬರೆಯಲಾಗಿದೆ. ಕಳೆದ ಗುರುವಾರದಿಂದ ಪಾಂಡಾ ತಿನ್ನುವುದನ್ನು ನಿಲ್ಲಿಸಿತ್ತು.
ಅದರ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಕಳೆದ ಕೆಲ ದಿನಗಳಿಂದ ಆನ್ ಆನ್ ಆರೋಗ್ಯದ ದೃಷ್ಟಿಯಿಂದ ಉದ್ಯಾನಕ್ಕೆ ಬರುವ ಜನರಿಂದ ದೂರ ಇಡಲಾಗಿತ್ತು. ಪಾಂಡ ಸಾವಿನ ಸುದ್ದಿ ಕೇಳಿ ಜನರು ತುಂಬಾ ದುಃಖಿತರಾದರು. ಅವರನ್ನು ಪ್ರೀತಿಸಿದ ಜನರು ಉದ್ಯಾನಕ್ಕೆ ಬಂದು ಶ್ರದ್ಧಾಂಜಲಿ ಸಲ್ಲಿಸಿದರು.
ಆನ್ ಆನ್ ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಜನಿಸಿದೆ. 1999 ರಲ್ಲಿ ಬೀಜಿಂಗ್ ಆನ್ ಆನ್ ಮತ್ತು ಹೆಣ್ಣು ದೈತ್ಯ ಪಾಂಡಾ ಜಿಯಾ ಜಿಯಾ ಅವರನ್ನು ಹಾಂಕಾಂಗ್‌ಗೆ ಉಡುಗೊರೆಯಾಗಿ ಕಳುಹಿಸಿತು. ಜಿಯಾ - ಜಿಯಾ 2016 ರಲ್ಲಿ 38 ನೇ ವಯಸ್ಸಿನಲ್ಲಿ ನಿಧನರಾದರು. ಪ್ರಸ್ತುತ ಉದ್ಯಾನದಲ್ಲಿ ಇನ್ನೂ ಎರಡು ದೈತ್ಯ ಪಾಂಡಾಗಳಿವೆ. ಇದನ್ನು 2007 ರಲ್ಲಿ ಕೇಂದ್ರ ಸರ್ಕಾರವು ಹಾಂಕಾಂಗ್‌ಗೆ ನೀಡಿತು.
ಓದಿ: 2 ತಿಂಗಳ ನಂತರ ಓಪನ್ ಆಯ್ತು ಮೃಗಾಲಯ: ಪ್ರವಾಸಿಗರ ಆಕರ್ಷಣೆಯಾದ ಪಾಂಡಾ !