ETV Bharat / international

ಗೆಳತಿಯನ್ನು ಭೇಟಿ ಮಾಡಲು ತೆರಳಿದ್ದ ರ‍್ಯಾಪರ್​ಗೆ​ ಗುಂಡಿಕ್ಕಿ ಕೊಂದ ದುಷ್ಕರ್ಮಿ! - ರಾಪರ್ ಟ್ರಬಲ್ ನಿಧನ ಸುದ್ದಿ

ಭಾನುವಾರ ರಾತ್ರಿ ಸುಮಾರು 3ಕ್ಕೆ ತನ್ನ ಗೆಳತಿಯನ್ನು ಭೇಟಿ ಮಾಡಲು ಹೋಗಿದ್ದ ಅಟ್ಲಾಂಟಾ ರ‍್ಯಾಪರ್​ಗೆ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಕೊಂದಿರುವ ಘಟನೆ ಜಾರ್ಜಿಯಾದಲ್ಲಿ ನಡೆದಿದೆ.

Rapper Trouble shot dead in Georgia, Rapper Trouble shot dead in Apartment,  Rapper Trouble died news, ಜಾರ್ಜಿಯಾದಲ್ಲಿ ರಾಪರ್ ಟ್ರಬಲ್ ಗುಂಡಿಕ್ಕಿ ಹತ್ಯೆ, ಅಪಾರ್ಟ್‌ಮೆಂಟ್‌ನಲ್ಲಿ ರಾಪರ್ ಟ್ರಬಲ್ ಮೃತದೇಹ ಪತ್ತೆ, ರಾಪರ್ ಟ್ರಬಲ್ ನಿಧನ ಸುದ್ದಿ,
ರಾಪರ್​ ಟ್ರಬಲ್​
author img

By

Published : Jun 7, 2022, 9:10 AM IST

ಜಾರ್ಜಿಯಾ(ಅಮೆರಿಕ): ಇಲ್ಲಿನ ಕಾನ್ಯರ್ಸ್‌ನಲ್ಲಿರುವ ಲೇಕ್ ಸೇಂಟ್ ಜೇಮ್ಸ್ ಅಪಾರ್ಟ್‌ಮೆಂಟ್​ನಲ್ಲಿ ಅಟ್ಲಾಂಟಾ ರ‍್ಯಾಪರ್ ಟ್ರಬಲ್​ಅನ್ನು ಗುಂಡಿಕ್ಕಿ ಕೊಲ್ಲಲಾಗಿದೆ. 34 ವರ್ಷದ ರ‍್ಯಾಪರ್ ಭಾನುವಾರ ರಾತ್ರಿ ತನ್ನ ಗೆಳತಿಯನ್ನು ಭೇಟಿ ಮಾಡಲು ತೆರಳಿದ್ದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಟ್ರಬಲ್​ನ ನಿಜವಾದ ಹೆಸರು ಮೇರಿಯಲ್ ಸೆಮೊಂಟೆ ಓರ್. ಭಾನುವಾರ ರಾತ್ರಿ 3.20 ರ ಸಮಯದಲ್ಲಿ ಲೇಕ್ ಸೇಂಟ್ ಜೇಮ್ಸ್ ಅಪಾರ್ಟ್‌ಮೆಂಟ್​ನಲ್ಲಿ ಟ್ರಬಲ್​ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಆತ ಮೃತಪಟ್ಟಿರುವ ಬಗ್ಗೆ ಘೋಷಿಸಿದರು.

ಓದಿ: ಭದ್ರತೆ ಹಿಂಪಡೆದ ಒಂದೇ ದಿನದಲ್ಲಿ ಗುಂಡಿಟ್ಟು ಪಂಜಾಬಿ ಗಾಯಕನ ಬರ್ಬರ ಕೊಲೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ದಾಳಿಕೋರ ಜೆಮಿಸೆಲ್ ಜೋನ್ಸ್​ರನ್ನು ಬಂಧಿಸಲು ಪೊಲೀಸರು ವಾರಂಟ್ ಪಡೆದಿದ್ದಾರೆ. ಆದ್ರೂ ಶಂಕಿತ ಆರೋಪಿಯನ್ನು ಪೊಲೀಸರು ಇನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ. ಟ್ರಬಲ್ ತನ್ನ ಗೆಳತಿಯನ್ನು ಭೇಟಿಯಾಗಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ರ‍್ಯಾಪರ್ ಡೆಫ್ ಜಾಮ್ ಅವರು ಇನ್ಸ್ಟಾಗ್ರಾಮ್​ನಲ್ಲಿ ಟ್ರಬಲ್‌ನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಟ್ರಬಲ್ 'December 17th’ ಎಂಬ ತನ್ನ ಮೊದಲ ಮಿಕ್ಸ್‌ಟೇಪ್ ಅನ್ನು 2011 ರಲ್ಲಿ ಬಿಡುಗಡೆ ಮಾಡಿದ್ದರು. ಬಳಿಕ 2018 ರಲ್ಲಿ 'ಎಡ್ಜ್‌ವುಡ್' ಆಲ್ಬಂ ಅನ್ನು ಹೊರಗೆ ತಂದರು. ಈ ಕುರಿತು ಈ ಹಿಂದೆ ಮಾತನಾಡಿದ್ದ ಅವರು, ನನ್ನ ಸಂಗೀತವು ವೈಯಕ್ತಿಕ ಮಟ್ಟದಲ್ಲಿ ಹೋಗುತ್ತದೆ. ಇವು ನನ್ನ ಜೀವನದ ಕಥೆಗಳು. ನಾನು ನಿಜವಾದ ಸಂಬಂಧವನ್ನು ಹೊಂದಲು ಇಷ್ಟಪಡುತ್ತೇನೆ ಎಂದು ಟ್ರಬಲ್​ ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.