ಕೊಲಂಬೊ(ಶ್ರೀಲಂಕಾ): ತೀವ್ರ ಆರ್ಥಿಕ ದುಸ್ಥಿತಿಯಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ ಜನರ ಪ್ರತಿಭಟನೆ ತಾರಕಕ್ಕೇರುತ್ತಿದೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆಲವೇ ಗಂಟೆಗಳ ಮೊದಲು ಮಹಿಂದ ರಾಜಪಕ್ಸ ಕುಟುಂಬದ ಪೂರ್ವಜರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ರಾಜಪಕ್ಸ ಮಾತ್ರವಲ್ಲದೇ, ಹಲವು ಸಚಿವರು ಮತ್ತು ಮಾಜಿ ಸಚಿವರ ಮನೆಗಳಿಗೂ ಬೆಂಕಿಯಿಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
-
Ancestral home of the Rajapaksa family in Medamulana, Hambantota set on fire by protesters. pic.twitter.com/QIEnREphjq
— NewsWire 🇱🇰 (@NewsWireLK) May 9, 2022 " class="align-text-top noRightClick twitterSection" data="
">Ancestral home of the Rajapaksa family in Medamulana, Hambantota set on fire by protesters. pic.twitter.com/QIEnREphjq
— NewsWire 🇱🇰 (@NewsWireLK) May 9, 2022Ancestral home of the Rajapaksa family in Medamulana, Hambantota set on fire by protesters. pic.twitter.com/QIEnREphjq
— NewsWire 🇱🇰 (@NewsWireLK) May 9, 2022
ನಿನ್ನೆ(ಸೋಮವಾರ) ದೇಶದ ಹಲವೆಡೆ ಹಿಂಸಾಚಾರ ನಡೆದಿವೆ. ಈ ಘಟನಾವಳಿಗಳಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಓರ್ವ ಸಂಸದ ಸೇರಿ ಐವರು ಸಾವನ್ನಪ್ಪಿದ್ದಾರೆ. ಕೊಲಂಬೊದಲ್ಲಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಕಚೇರಿಯ ಹೊರಗೆ ಸರ್ಕಾರದ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆಯ ಹಿನ್ನೆಲೆಯಲ್ಲಿ ಮಹಿಂದಾ ರಾಜಪಕ್ಸ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಘರ್ಷಣೆ ತೀವ್ರ ಸ್ವರೂಪ ಪಡೆದಿದೆ.
ದೇಶದ ವಾಯುವ್ಯ ಪಟ್ಟಣ ನಿಟ್ಟಂಬುವಾದಲ್ಲಿ ನಡೆದ ಸಂಘರ್ಷದಲ್ಲಿ ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಅತುಕೋರಾಲ ಮತ್ತು ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಸಾವನ್ನಪ್ಪಿದರು. ಶ್ರೀಲಂಕಾದ ಬಾರ್ ಅಸೋಸಿಯೇಷನ್ ಸಾರ್ವಜನಿಕರಿಗೆ ಶಾಂತವಾಗಿರಲು ವಿನಂತಿಸಿದೆ ಮತ್ತು ಸೋಮವಾರ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಉದ್ವಿಗ್ನ ಪರಿಸ್ಥಿತಿ: ಸುಮಾರು ಒಂದು ತಿಂಗಳಿನಿಂದ ಶ್ರೀಲಂಕಾ ಇಂಧನ, ಔಷಧಗಳು ಮತ್ತು ವಿದ್ಯುತ್ ಪೂರೈಕೆಯ ತೀವ್ರ ಕೊರತೆ ಎದುರಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದೆಲ್ಲೆಡೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಇದನ್ನೂ ಓದಿ: ಲಂಕಾ ಪಿಎಂ ರಾಜೀನಾಮೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ: ಸಂಸದ ಸಾವು, ಮಾಜಿ ಸಚಿವರ ಮನೆಗೆ ಬೆಂಕಿ