ETV Bharat / international

ಟಿಮ್ ಕುಕ್ ಭೇಟಿಯಾದ ಪಿವಿ ಸಿಂಧು; ಬ್ಯಾಡ್ಮಿಂಟನ್ ಆಡುವ ಆಫರ್ ನೀಡಿದ ಆಟಗಾರ್ತಿ - ಆಪಲ್​ನ ಮುಂದಿನ ತಲೆಮಾರಿನ ಐಫೋನ್​​ಗಳನ್ನು

ಆಪಲ್​ ಸಿಇಒ ಟಿಮ್ ಕುಕ್ ಅವರನ್ನು ಭೇಟಿ ಮಾಡಿದ ಪಿವಿ ಸಿಂಧು, ಮುಂದಿನ ಬಾರಿ ಕುಕ್ ಭಾರತಕ್ಕೆ ಬಂದಾಗ ಅವರೊಂದಿಗೆ ಬ್ಯಾಡ್ಮಿಂಟನ್ ಆಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

PV Sindhu meets Tim Cook, offers badminton match to Apple CEO

author img

By ETV Bharat Karnataka Team

Published : Sep 13, 2023, 3:15 PM IST

ನವದೆಹಲಿ : ಭಾರತದ ಖ್ಯಾತ ಶಟ್ಲರ್ ಪಿ.ವಿ. ಸಿಂಧು ಅವರು ಕ್ಯಾಲಿಫೋರ್ನಿಯಾದಲ್ಲಿ ನಡೆದ ಆಪಲ್​ನ ಸಮಾರಂಭದಲ್ಲಿ ಸಿಇಒ ಟಿಮ್ ಕುಕ್ ಅವರನ್ನು ಭೇಟಿಯಾದರು. ಆಪಲ್​ನ ಮುಂದಿನ ತಲೆಮಾರಿನ ಐಫೋನ್​​ಗಳನ್ನು ಮಂಗಳವಾರ ಈ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಅಮೆರಿಕದ ಕ್ಯುಪರ್ಟಿನೊದಲ್ಲಿರುವ ಕಂಪನಿಯ ಪ್ರಧಾನ ಕಚೇರಿಯಲ್ಲಿ ಈವೆಂಟ್ ನಡೆಯಿತು. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇನ್​​ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ಮಾಹಿತಿ ಶೇರ್ ಮಾಡಿಕೊಂಡಿರುವ ಸಿಂದು, ಆಪಲ್ ಸಿಇಒ ಅವರೊಂದಿಗಿನ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ ಮತ್ತು ಈ ಕ್ಷಣವನ್ನು ಮರೆಯಲಾಗದು ಎಂದು ಕರೆದಿದ್ದಾರೆ. ಅಲ್ಲದೇ ಮುಂದಿನ ಭಾರತ ಭೇಟಿಯಲ್ಲಿ ಕುಕ್ ಅವರೊಂದಿಗೆ ಬ್ಯಾಡ್ಮಿಂಟನ್ ಆಡುವ ಪ್ರಸ್ತಾಪವನ್ನು ಸಹ ಮುಂದಿಟ್ಟಿದ್ದಾರೆ. "ಆಪಲ್ ಕ್ಯುಪರ್ಟಿನೊದಲ್ಲಿ ಮುಖ್ಯ ದಿನದಂದು ಟಿಮ್ ಕುಕ್ ಅವರನ್ನು ಭೇಟಿಯಾದ ಮರೆಯಲಾಗದ ಕ್ಷಣ! ನನಗೆ ಇಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು, ಟಿಮ್. ಅದ್ಭುತವಾದ ಆಪಲ್ ಪಾರ್ಕ್ ಅನ್ನು ನೋಡಲು ಮತ್ತು ನಿಮ್ಮನ್ನು ಭೇಟಿಯಾಗಲು ಸಂತೋಷವಾಗಿದೆ! ನೀವು ಮುಂದೆ ಭಾರತಕ್ಕೆ ಭೇಟಿ ನೀಡಿದಾಗ ಬ್ಯಾಡ್ಮಿಂಟನ್ ಆಡುವ ಪ್ರಸ್ತಾಪವನ್ನು ನಾನು ಸಂತೋಷದಿಂದ ತಮ್ಮ ಮುಂದೆ ಇಡುತ್ತಿದ್ದೇನೆ" ಎಂದು ಸಿಂಧು ಬರೆದಿದ್ದಾರೆ.

ಮತ್ತೊಂದು ಪೋಸ್ಟ್​ನಲ್ಲಿ ಸಿಂಧು, ಕುಕ್ ಅವರೊಂದಿಗಿನ ಸಂವಾದದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ನಾವೀನ್ಯತೆ, ಉತ್ಸಾಹ, ಆಶ್ಚರ್ಯ ಮತ್ತು ಉತ್ತಮ ಸಂಭಾಷಣೆಯ ಭರವಸೆ ನೀಡುವ #appleನ ಮುಖ್ಯ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೇನೆ. ಧನ್ಯವಾದಗಳು ಟಿಮ್ ಕುಕ್" ಎಂದು ಈ ಚಿತ್ರಗಳಿಗೆ ಅವರು ಕ್ಯಾಪ್ಷನ್ ನೀಡಿದ್ದಾರೆ. ಆಪಲ್ ಮಂಗಳವಾರ ಹೊಸ ಐಫೋನ್ ಸರಣಿಯನ್ನು ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಎಂಬ ಹೊಸ ನಾಲ್ಕು ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿದೆ.

ಪಿ.ವಿ.ಸಿಂಧು ತಮ್ಮ ವೃತ್ತಿಜೀವನದಲ್ಲಿ ಪ್ರಮುಖ ಪಂದ್ಯಾವಳಿಗಳಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಚಿನ್ನ ಸೇರಿದಂತೆ ಐದು ವಿಶ್ವ ಚಾಂಪಿಯನ್​ಶಿಪ್ ಪದಕಗಳನ್ನು ಹೊಂದಿದ್ದಾರೆ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಪದಕಗಳಲ್ಲದೇ ಎರಡು ಒಲಿಂಪಿಕ್ ಪದಕಗಳನ್ನು ಸಹ ಇವರು ಗೆದ್ದುಕೊಂಡಿದ್ದಾರೆ.

ಪುಸರ್ಲಾ ವೆಂಕಟ ಸಿಂಧು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ (ರಿಯೋ ಡಿ ಜನೈರೊದಲ್ಲಿ ನಡೆದ 2016 ಒಲಿಂಪಿಕ್ಸ್, ಒಲಿಂಪಿಕ್ಸ್) ಬೆಳ್ಳಿ ಪದಕ ಗೆದ್ದ ಮೊದಲ ಮತ್ತು ಕಿರಿಯ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದಾರೆ. ಬರ್ಮಿಂಗ್​​ಹ್ಯಾಮ್​ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅವರು ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಇದನ್ನೂ ಓದಿ : ಇಸ್ರೇಲ್​ನಲ್ಲಿ ಭುಗಿಲೆದ್ದ ಪ್ರತಿಭಟನೆ; ಪ್ರಜಾಪ್ರಭುತ್ವ ವಿರೋಧಿ ನ್ಯಾಯಾಂಗ ಸುಧಾರಣಾ ಕ್ರಮಕ್ಕೆ ಖಂಡನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.