ETV Bharat / international

ನಯಾಗರ ಜಲಪಾತಕ್ಕೆ ಆಯತಪ್ಪಿ ಬಿದ್ದು ಪಂಜಾಬ್​ ಯುವತಿ ಸಾವು - ನಯಾಗರಾ ನದಿಗೆ ಬಿದ್ದ ಪಂಜಾಬ್​ ಯುವತಿ

ಕೆನಡಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಪಂಜಾಬ್​ ಮೂಲದ ಯುವತಿಯೊಬ್ಬಳು ವಿಶ್ವವಿಖ್ಯಾತ ನಯಾಗರ ಜಲಪಾತದಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.

ನಯಾಗರಾ ಜಲಪಾತಕ್ಕೆ ಬಿದ್ದ ಪಂಜಾಬ್​ ಯುವತಿ
ನಯಾಗರಾ ಜಲಪಾತಕ್ಕೆ ಬಿದ್ದ ಪಂಜಾಬ್​ ಯುವತಿ
author img

By

Published : Jun 4, 2023, 7:17 AM IST

ಜಲಂಧರ್: ಉತ್ತರ ಅಮೆರಿಕದ ಈಶಾನ್ಯದಲ್ಲಿರುವ ನಯನ ಮನೋಹರ ನಯಾಗರ ಜಲಪಾತದಲ್ಲಿ ಅಚಾನಕ್ಕಾಗಿ ಕಾಲು ಜಾರಿ ಬಿದ್ದು ಭಾರತೀಯ ಮೂಲದ ಯುವತಿ ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ನಡೆದಿದೆ. 2 ದಿನ ಕಳೆದರೂ ಯುವತಿ ಪತ್ತೆಯಾಗಿಲ್ಲ. ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವವಿಖ್ಯಾತ ನಯಾಗರ ಜಲಪಾತವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ನಯಾಗರ ನದಿ ರೂಪಿಸಿರುವ ಸುಂದರ ಮೂರು ಜಲಪಾತಗಳು ಪ್ರವಾಸಿಗರಿಗೆ ರೋಮಾಂಚಕ ಅನುಭವ ನೀಡುತ್ತವೆ. ಸೌಂದರ್ಯಸವಿಯಲು ಪಂಜಾಬ್​ ಮೂಲದ ಯುವತಿ ಪೂನಮ್​ದೀಪ್ ​ಕೌರ್​ ಅವರು ಶುಕ್ರವಾರ ತನ್ನ ಸ್ನೇಹಿತರೊಂದಿಗೆ ಬಂದಿದ್ದರು. ಈ ವೇಳೆ ಆಯತಪ್ಪಿ ಜಲಪಾತಕ್ಕೆ ಬಿದ್ದಿದ್ದಾರೆ. ವಿಷಯ ತಿಳಿದ ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿ ಹುಡುಕಾಟ ಆರಂಭಿಸಿದರು.

ನದಿಗೆ ಬಿದ್ದ ಯುವತಿ ಪೂನಮ್​ದೀಪ್ ​ ಕೌರ್​ ಅವರು ಪಂಜಾಬ್‌ನ ಜಲಂಧರ್ ಜಿಲ್ಲೆಯ ಲೋಹಿಯಾನ್ ಖಾಸ್‌ ಗ್ರಾಮದವರು. ಪೂನಮ್​ದೀಪ್ ತನ್ನ ಸ್ನೇಹಿತರೊಂದಿಗೆ ಶುಕ್ರವಾರದಂದು ನಯಾಗರ ಜಲಪಾತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವಘಡ ಘಟಿಸಿದೆ.

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹ 47 ಲಕ್ಷ ಪರಿಹಾರ ಪಾವತಿಸಲು MACT ಆದೇಶ

ಪೂನಮ್​ದೀಪ್ ಕಳೆದ ಒಂದೂವರೆ ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದಾರೆ. ಆಕೆ ಅಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಿದ್ದರು. ಯುವತಿಯ ತಂದೆ ಜೀವನೋಪಾಯಕ್ಕಾಗಿ ಕಳೆದ ಹಲವು ವರ್ಷಗಳಿಂದ ಮನಿಲಾದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಪೂನಮ್​ದೀಪ್ ನದಿಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದ್ದು, ಇದು ಕುಟುಂಬಸ್ಥರನ್ನು ತೀವ್ರ ದುಖಃಕ್ಕೀಡು ಮಾಡಿದೆ.

ರಾಯಭಾರ ಕಚೇರಿಯಿಂದ ಮಾಹಿತಿ: ಯುವತಿ ಪೂನಮ್​ದೀಪ್ ಅವರು ನಯಾಗರ ಜಲಪಾತಕ್ಕೆ ಬಿದ್ದು ಮೃತಪಟ್ಟ ವಿಷಯವನ್ನು ಆಕೆಯ ಕುಟುಂಬಸ್ಥರಿಗೆ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. ಬಳಿಕ ಆಕೆಯ ಹುಡುಕಾಟ ಮತ್ತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಪೂನಂ ಕುಟುಂಬ ಕೆನಡಾದಲ್ಲಿ ನೆಲೆಸಿರುವ ಅವರ ಸಂಬಂಧಿಕರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸುತ್ತಿದೆ. ನಯಾಗರ ಜಲಪಾತವು ಪ್ರವಾಸಿ ತಾಣವಾಗಿದ್ದು, ಪ್ರಕೃತಿಯ ಔದಾರ್ಯವನ್ನು ವೀಕ್ಷಿಸಲು ಹಲವಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ಹಿಂದೆ ಇದೇ ಜಲಪಾತದಲ್ಲಿ ಹಲವರು ಕಾಲು ಜಾರಿ ಮುಳುಗಿ ಸಾವನ್ನಪ್ಪಿದ ಘಟನೆಗಳು ನಡೆದಿವೆ.

ವಿಶ್ವದ ಅದ್ಭುತಗಳಲ್ಲಿ ಒಂದು: ನಯಾಗರ ಜಲಪಾತವು ಉತ್ತರ ಅಮೆರಿಕದಲ್ಲಿರುವ ವಿಶ್ವವಿಖ್ಯಾತ ಜಲಪಾತ. ನಯಾಗರ ನದಿ ಈ ಅದ್ಭುತ ಜಲಪಾತವನ್ನು ನಿರ್ಮಿಸಿದೆ. ನಯನ ಮನೋಹರ ಜಲಪಾತ ಪ್ರವಾಸಿಗರ ಸ್ವರ್ಗ ಎಂದೇ ಹೇಳಲಾಗಿದೆ. ಈ ಸುಂದರ ಜಲಪಾತವು ಒಂಟಾರಿಯೋ, ಕೆನಡಾ ಮತ್ತು ನ್ಯೂಯಾರ್ಕ್​, ಅಮೆರಿಕದ ನಡುವಿನ ಗಡಿಯಲ್ಲಿದೆ. ಈ ಸೌಂದರ್ಯ ಜಲರಾಶಿಯು ಕೆನಡಾ ಮತ್ತು ಅಮೆರಿಕದ ಅತಿದೊಡ್ಡ ಮತ್ತು ಸುಂದರವಾದ ಜಲಪಾತವಾಗಿದೆ. ಎರಡೂ ದೇಶಗಳಲ್ಲಿ ಹರಿಯುವ ನಯಾಗರಾ ನದಿಯು ಅಮೆರಿಕನ್​, ಬ್ರೈಡಲ್​, ಕೆನಡಿಯನ್​ ಎಂಬ ಮೂರು ಜಲಪಾತಗಳನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: ರಣಭೀಕರ ತ್ರಿವಳಿ ರೈಲು ದುರಂತದಲ್ಲಿ ಈಗ ಮೃತರ ಗುರುತು ಪತ್ತೆ ಹಚ್ಚುವುದೇ ಸವಾಲು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.