ETV Bharat / international

9 ಕೋಟಿಗೆ ಹರಾಜಾಯ್ತು ರಾಜಕುಮಾರಿ ಡಯಾನಾ ಧರಿಸಿದ್ದ ಐಕಾನಿಕ್​ ಬ್ಲಾಕ್​ ಶೀಪ್​ ಸ್ವೆಟರ್​​ - ಎರಡು ದಶಕಗಳಿಗೂ ಹೆಚ್ಚು ಸಮಯ

1981ರ ಪೋಲೋ ಪಂದ್ಯ ವೀಕ್ಷಣೆಗೆ ತೆರಳಿದ್ದ ಬ್ರಿಟನ್ ರಾಜಕುಮಾರಿ ಡಯಾನಾ ಧರಿಸಿದ್ದ ಸ್ವೆಟರ್​ ಭಾರಿ ಬೆಲೆಗೆ ಹರಾಜಾಗಿದೆ.

Princess Dianas Iconic black Sheep sweater Sold 1.1mn dollar at auction

author img

By ETV Bharat Karnataka Team

Published : Sep 15, 2023, 11:12 AM IST

ನ್ಯೂಯಾರ್ಕ್​: ಬ್ರಿಟನ್​ ರಾಜಕುಮಾರಿ ಡಯಾನಾ ಅಪಘಾತದಲ್ಲಿ ಸಾವನ್ನಪ್ಪಿದ ಎರಡು ದಶಕಗಳಿಗೂ ಹೆಚ್ಚು ಸಮಯ ಆದರೂ, ಆಕೆಯ ನೆನಪು ಮಾತ್ರ ಜನರಲ್ಲಿ ಅಚ್ಚಳಿಯದೇ ಇದೆ. ಆಕೆಯ ಫ್ಯಾಷನ್​ ಸೆನ್ಸ್​ ಮತ್ತು ಸೌಂದರ್ಯ ಇಂದಿಗೂ ಜನರನ್ನು ಬೆರುಗುಗೊಳಿಸುವುದು ಸುಳ್ಳಲ್ಲ. ಇದೇ ಕಾರಣಕ್ಕೆ ಆಕೆ ಬಳಕೆ ಮಾಡುತ್ತಿದ್ದ ವಸ್ತುಗಳನ್ನು ಜನರು ಇಂದಿಗೂ ಅಭಿಮಾನದಿಂದ ಮುಗಿಬಿದ್ದು ತೆಗೆದುಕೊಳ್ಳುತ್ತಾರೆ. ರಾಜಕುಮಾರಿ ಡಯಾನಾ ಧರಿಸುತ್ತಿದ್ದ ಐಕಾನಿಕ್​ ಕೆಂಪು ಬಣ್ಣದ ಬ್ಲಾಕ್​ ಶೀಪ್​​ ಸ್ವೆಟರ್​ ಒಂದು ಇದೀಗ ಬರೋಬ್ಬರಿ 1.1 ಮಿಲಿಯನ್​ ಡಾಲರ್​ ಅಂದರೆ ಭಾರತೀಯ ರೂಪಾಯಿಗಳಲ್ಲಿ 9 ಕೋಟಿ ರೂ.ಗೆ ಹರಾಜಾಗಿದೆ.

ರಾಜಕುಮಾರಿ ಡಯಾನಾ ಧರಿಸುತ್ತಿದ್ದ ಕೆಂಪು ಬಣ್ಣದ ಬಿಳಿ ಕುರಿಗಳ ಮಧ್ಯೆ ಆಕರ್ಷಿಣಿಯವಾಗಿದ್ದ ಒಂದು ಕುರಿಯ ವಿನ್ಯಾಸಿತ ಸ್ವೇಟರ್​ ಅನ್ನು ನ್ಯೂಯಾರ್ಕ್​ನಲ್ಲಿ ಹರಾಜು ಮಾಡಲಾಗಿದೆ. ಈ ವೇಳೆ ಇದನ್ನು 1.1 ಮಿಲಿಯನ್​ ಡಾಲರ್​ ಕೊಟ್ಟು ಖರೀದಿಸಲಾಗಿದೆ ಎಂದು ಸೋಥೆಬಿಸ್ ತಿಳಿಸಿದ್ದಾರೆ

ಈ ಕುರಿತು ಪೋಸ್ಟ್​ ಮಾಡಿರುವ ಹರಾಜು ಸಂಸ್ಥೆ, ನಮ್ಮ ಫ್ಯಾಷನ್​ ಐಕಾನ್​ ಹರಾಜಿನಲ್ಲಿ ರಾಜಕುಮಾರಿ ಡಯಾನಾ ಅವರ ಐತಿಹಾಸಿನ ಕಪ್ಪು ಕುರಿಯ ಬೆಚ್ಚಗಿನ ಮತ್ತು ಅದ್ಬುತ ಸ್ವೆಟರ್​ ಬಿಡ್ಡಿಂಗ್​ನಲ್ಲಿ 1.1 ಮಿಲಿಯನ್​ ಡಾಲರ್​​ಗೆ ಮಾರಾಟ ಆಗಿದೆ ಎಂದಿದ್ದಾರೆ.

ಡಯಾನಾ ಆಗಿನ ರಾಜಕುಮಾರನಾಗಿದ್ದ ಚಾರ್ಲ್ಸ್​​​ ನಿಶ್ಚಿತಾರ್ಥದ ಬಳಿಕ ಪ್ರಿನ್ಸನ್​ ಡಯಾನಾ ಈ ಸ್ವೆಟರ್​​ ಅನ್ನು 1981ರಲ್ಲಿ ನಡೆದ ಪೊಲೋ ಮ್ಯಾಚ್​​ ವೀಕ್ಷಣೆಗೆ ರಾಜಕುಮಾರ ಚಾರ್ಲ್ಸ್​​ ಜೊತೆ ವೀಕ್ಷಣೆ ವೇಳೆ ಧರಿಸಿದ್ದರು. ಈ ಸ್ವೆಟರ್​ ಅನ್ನು ವಾರ್ಮ್​ ಅಂಡ್​ ವಂಡರ್ಫುಲ್​ ರಾಜಕುಮಾರಿಗಾಗಿ ತಯಾರಿಸಿತ್ತು. ಆದರೆ, ಈ ಸ್ವೆಟರ್​​ ಹಾನಿಯಾದ ಹಿನ್ನೆಲೆ ಇದರ ದುರಸ್ತಿ ಅಥವಾ ಬದಲಾವಣೆ ಮಾಡುವಂತೆ ಬ್ರಿಟಿಷ್​ ರಾಜಮನೆತನ ಪತ್ರವನ್ನು ಬರೆದಿತ್ತು.

1983ರಲ್ಲಿ ವಾರ್ಮ್​ ಅಂಡ್​ ವಂಡರ್​ಫುಲ್​ 1983ರಲ್ಲಿ ಮತ್ತೊಂದು ಪೋಲೋ ಪಂದ್ಯಕ್ಕೆ ಇದಕ್ಕೆ ಬದಲಿ ಸ್ವೆಟರ್​ ಅನ್ನು ಕಳುಹಿಸಿದ್ದರು ಎಂದು ಈ ಸ್ವೆಟರ್​ನಲ್ಲಿ ವಿವರಣೆಯನ್ನು ಕೂಡ ತಿಳಿಸಲಾಗಿದೆ. ಈ ಸ್ವೆಟರ್​​ಗೆ ಆಗಸ್ಟ್​​ 31ರಿಂದ ಬಿಡ್ಡಿಂಗ್​ ಶುರುವಾಗಿದ್ದು, ಅಂತಿಮ ಕ್ಷಣದವರೆಗೆ ಹರಾಜಿನ ಮೌಲ್ಯ 2,00,00 ಡಾಲರ್​​​ ಇತ್ತು.

ಸೋಥೆಬಿಸ್​​ ಈ ಸ್ವೆಟರ್​ ಮೌಲ್ಯವನ್ನು 50,000 ಡಾಲರ್​​ನಿಂದ 80,000 ಡಾಲರ್​​ಗೆ ಅಂದಾಜಿಸಿತ್ತು. ಇನ್ನು ದುಬಾರಿ ಬೆಲೆಗೆ ಹರಾಜಾದ ಈ ಸ್ವೆಟರ್​​ ಖರೀದಿದಾತರ ಬಗ್ಗೆ ಯಾವುದೇ ಮಾಹಿತಿಯನ್ನು ಹರಾಜು ಸಂಸ್ಥೆ ಬಹಿರಂಗ ಮಾಡಿಲ್ಲ. (IANS)

ಇದನ್ನೂ ಓದಿ: ಜೈಲಿನಿಂದ ಪರಾರಿಯಾದ ಅಪರಾಧಿಯನ್ನು ದಟ್ಟಾರಣ್ಯದಲ್ಲಿ ಹಿಡಿದುಕೊಟ್ಟ ಪೊಲೀಸ್​ ಶ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.