ಲಂಡನ್: ಬ್ರಿಟನ್ ರಾಜಮನೆತನದ ರಾಜಕುಮಾರ ಹ್ಯಾರಿ ಮತ್ತು ಮೇಘನ್ ಮಾರ್ಕಲ್ ದಂಪತಿಯ ಪುತ್ರಿ ಲಿಲಿಬೆಟ್ ಡಯಾನಾ ಛಾಯಾಚಿತ್ರ ಈಗ ಬಿಡುಗಡೆಯಾಗಿದೆ. ಲಿಲಿಬೆಟ್ ಮೊದಲ ವರ್ಷದ ಹುಟ್ಟಹಬ್ಬ ಹಿನ್ನೆಲೆಯಲ್ಲಿ ಈ ಫೋಟೋಗಳು ಬಿಡುಗಡೆಯಾಗಿದೆ.
- " class="align-text-top noRightClick twitterSection" data="
">
ಮೇಘನ್ ಹಾಗೂ ಪ್ರಿನ್ಸ್ ಹ್ಯಾರಿ ಪುತ್ರಿ ಲಿಲಿಬೆಟ್ ಹೊಸ ಫೋಟೋಗಳನ್ನು ಖ್ಯಾತ ಛಾಯಾಗ್ರಾಹಕ ಮಿಸಾನ್ ಹ್ಯಾರಿಮನ್ ಹಂಚಿಕೊಂಡಿದ್ದಾರೆ. ನೀಲಿ ಉಡುಪು ಧರಿಸಿರುವ ಲಿಲಿಬೆಟ್ ತಂದೆ ಹ್ಯಾರಿ ಅವರಂತೆಯೇ ಕೊದಲು ಹೊಂದಿದ್ದಾರೆ. 'ಲಿಲಿಬೆಟ್ ಪ್ರಥಮ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಆಚರಿಸುವ ಅವಕಾಶ ದೊರೆಯಿತು' ಎಂದು ಹ್ಯಾರಿಮನ್ ಚಿತ್ರ ಶೀರ್ಷಿಕೆ ನೀಡಿದ್ದಾರೆ.
ರಾಜಕುಮಾರ ಹ್ಯಾರಿ, ರಾಜಕುಮಾರಿ ಮೇಘನ್ ತಮ್ಮ ಫ್ರಾಗ್‌ಮೋರ್ ಕಾಟೇಜ್ ನಿವಾಸದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದರು ಎಂದು ವಕ್ತಾರರು ತಿಳಿಸಿದ್ದಾರೆ. ಇತ್ತ, ಲಿಲಿಬೆಟ್ ಗೌರವಾರ್ಥವಾಗಿ ಪ್ರಪಂಚದಾದ್ಯಂತ ಇರುವ ಅಭಿಮಾನಿಗಳು ವರ್ಲ್ಡ್ ಸೆಂಟ್ರಲ್ ಕಿಚನ್‌ಗೆ 100 ಡಾಲರ್ನಷ್ಟು ದೇಣಿಗೆ ಸಂಗ್ರಹವಾಗಿದ್ದು, ಜಾಗತಿಕ ಬಿಕ್ಕಟ್ಟಿನಲ್ಲಿ ಸಂದರ್ಭದಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಎಡ್ ಶೀರಾನ್ '2 ಸ್ಟೆಪ್'ಗೆ ಜೊತೆಯಾದ ಅರ್ಮಾನ್ ಮಲಿಕ್