ETV Bharat / international

ಶ್ವೇತಭವನದಲ್ಲಿ ಪ್ರಧಾನಿ ಮೋದಿ: ಬೈಡನ್‌ ದಂಪತಿಯಿಂದ ಆತ್ಮೀಯ ಸ್ವಾಗತ

ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ (ಪತ್ನಿ) ಜಿಲ್​ ಬೈಡನ್​ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದರು.

prime-minister-modi-meets-president-biden-at-white-house
ಶ್ವೇತಭವನದಲ್ಲಿ ಪ್ರಧಾನಿ ಮೋದಿ.. ಜೋ ಬೈಡನ್ - ಜಿಲ್​ ಬೈಡನ್ ಅವರಿಂದ ಆತ್ಮೀಯ ಸ್ವಾಗತ
author img

By

Published : Jun 22, 2023, 9:30 PM IST

ಶ್ವೇತಭವನದಲ್ಲಿ ಪ್ರಧಾನಿ ಮೋದಿ

ವಾಷಿಂಗ್ಟನ್ ಡಿಸಿ (ಅಮೆರಿಕ): ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಶ್ವೇತಭವನಕ್ಕೆ ಭೇಟಿ ನೀಡಿದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್​ ಬೈಡನ್​ ಅವರು ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. 21 ಗನ್ ಸೆಲ್ಯೂಟ್ ಜೊತೆಗೆ ಎರಡೂ ದೇಶಗಳ ರಾಷ್ಟ್ರಗೀತೆಗಳನ್ನು ನುಡಿಸಲಾಯಿತು.

ರಕ್ಷಣೆ, ಬಾಹ್ಯಾಕಾಶ, ಶುದ್ಧ ಶಕ್ತಿ ಮತ್ತು ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಭಾರತ- ಅಮೆರಿಕ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಪರಸ್ಪರ ಮತ್ತು ಜಾಗತಿಕ ಹಿತಾಸಕ್ತಿಗಳ ವಿಷಯಗಳ ಕುರಿತು ಚರ್ಚಿಸಲು ಮೋದಿ ಶ್ವೇತಭವನದ ಓವಲ್ ಕಚೇರಿಯಲ್ಲಿ ಜೋ ಬೈಡನ್ ಅವರನ್ನು ಭೇಟಿ ಮಾಡಿದರು.

ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಮೋದಿ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಶೀಘ್ರದಲ್ಲೇ ಅಧ್ಯಕ್ಷರೊಂದಿಗೆ ಚರ್ಚಿಸಲಾಗುತ್ತದೆ. ನಮ್ಮ ಮಾತುಕತೆ ಸಕಾರಾತ್ಮಕವಾಗಿರುತ್ತವೆ ಎಂದು ನನಗೆ ಖಾತ್ರಿಯಿದೆ. ಜಾಗತಿಕ ಒಳಿತಿಗಾಗಿ ಮತ್ತು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲು ಭಾರತ ಮತ್ತು ಅಮೆರಿಕ ಬದ್ಧವಾಗಿದೆ ಎಂದು ಹೇಳಿದರು.

ಕೋವಿಡ್ ನಂತರದ ಯುಗದಲ್ಲಿ ವಿಶ್ವಕ್ರಮವು ಹೊಸ ಆಕಾರವನ್ನು ಪಡೆಯುತ್ತಿದೆ. ಈ ಸಮಯದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವು ಇಡೀ ಪ್ರಪಂಚದ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ. ಭಾರತೀಯ ಸಮುದಾಯದ ಜನರು ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಅಮೆರಿಕದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ. ಇವರೇ ನಮ್ಮ ಸಂಬಂಧದ ನಿಜವಾದ ಶಕ್ತಿ ಎಂದರು.

ಇದನ್ನೂ ಓದಿ: ಕರ್ನಾಟಕದ ಗಂಧದ ಪೆಟ್ಟಿಗೆ, ವಜ್ರ, ಬೆಳ್ಳಿ ಗಣೇಶ.. ಬೈಡನ್​ ದಂಪತಿಗೆ ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ವಸ್ತುಗಳ ಉಡುಗೊರೆ ಕೊಟ್ಟ ಮೋದಿ!

ನಾನು ಪ್ರಧಾನಿಯಾದ ನಂತರ ಶ್ವೇತಭವನಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾರತೀಯ- ಅಮೆರಿಕನ್ ಸಮುದಾಯಕ್ಕೆ ಶ್ವೇತಭವನದ ಗೇಟ್‌ಗಳನ್ನು ತೆರೆಯುತ್ತಿರುವುದು ಇದೇ ಮೊದಲು. ಈ ಗೌರವ ನೀಡಿದ್ದಕ್ಕಾಗಿ ಅಧ್ಯಕ್ಷ ಬೈಡನ್ ಮತ್ತು ಜಿಲ್ ಬೈಡನ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಮೋದಿ ಹೇಳಿದರು.

ಜೋ ಬೈಡನ್ ಮಾತನಾಡಿ, ಪ್ರಧಾನಿ ಮೋದಿಯವರನ್ನು ಶ್ವೇತಭವನಕ್ಕೆ ಮರಳಿ ಸ್ವಾಗತಿಸುತ್ತಿದ್ದೇನೆ. ಸ್ಟೇಟ್​ ಪ್ರವಾಸದಲ್ಲಿ ನಿಮಗೆ ಇಲ್ಲಿ ಆತಿಥ್ಯ ನೀಡಿದ ಮೊದಲ ವ್ಯಕ್ತಿ ಎಂಬ ಗೌರವ ನನಗಿದೆ. ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧವು 21ನೇ ಶತಮಾನದ ಅತ್ಯಂತ ನಿರ್ಣಾಯಕ ಸಂಬಂಧಗಳಲ್ಲಿ ಒಂದು ಎಂದು ಬಣ್ಣಿಸಿದರು.

24 ಗಂಟೆಗಳಲ್ಲಿ ಉಭಯ ನಾಯಕರ ನಡುವಿನ ಎರಡನೇ ಭೇಟಿ ಇದಾಗಿದೆ. ಅಧ್ಯಕ್ಷ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರು ಒಂದು ದಿನದ ಹಿಂದೆ ಶ್ವೇತಭವನದಲ್ಲಿ ಪ್ರಧಾನಿ ಮೋದಿಯವರಿಗೆ ಆತ್ಮೀಯ ಭೋಜನಾತಿಥ್ಯ ನೀಡಿದ್ದರು. ಈ ಸಮಯದಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದರು. ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡಿದ್ದರು.

ಶ್ವೇತಭವನದ ಸ್ವಾಗತ ಸಮಾರಂಭದಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಸೆಕೆಂಡ್ ಜಂಟಲ್‌ಮನ್ ಡೌಗ್ಲಾಸ್ ಎಂಹಾಫ್ ಉಪಸ್ಥಿತರಿದ್ದರು. ಶ್ವೇತಭವನದಲ್ಲಿ ಸೇರಿದ್ದ ಭಾರತೀಯ ಅಮೆರಿಕನ್ನರು 'ಯುಎಸ್​ಎ, ಯುಎಸ್​ಎ' ಮತ್ತು 'ಭಾರತ್ ಮಾತಾ ಕೀ ಜೈ' ಹಾಗೂ 'ಮೋದಿ ಮೋದಿ' ಎಂದು ಘೋಷಣೆಗಳನ್ನು ಮೊಳಗಿಸಿ ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: Modi in US: 2024ರಲ್ಲಿ ಇಸ್ರೋ-ನಾಸಾದಿಂದ ಜಂಟಿ ಬಾಹ್ಯಾಕಾಶ ಯೋಜನೆ ಉಡ್ಡಯನ ಒಪ್ಪಂದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.