ETV Bharat / international

ಅಮೆರಿಕ: H1-B ವೀಸಾ ಗ್ರೇಸ್ ಅವಧಿ ವಿಸ್ತರಿಸುವಂತೆ ಉಪಸಮಿತಿ ಶಿಫಾರಸು

author img

By

Published : Mar 15, 2023, 3:51 PM IST

ಅಮೆರಿಕದಲ್ಲಿ ನೌಕರಿ ಮಾಡುತ್ತಿರುವಾಗ ನೌಕರಿ ಕಳೆದುಕೊಳ್ಳುವ ನೌಕರರ H1 B ಗ್ರೇಸ್ ಅವಧಿಯನ್ನು ವಿಸ್ತರಿಸುವಂತೆ ಅಲ್ಲಿನ ಅಧ್ಯಕ್ಷೀಯ ಸಲಹಾ ಉಪಸಮಿತಿಯು ಅಮೆರಿಕ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಅಮೆರಿಕ: H1-B ವೀಸಾ ಗ್ರೇಸ್ ಅವಧಿ ವಿಸ್ತರಿಸುವಂತೆ ಉಪಸಮಿತಿ ಶಿಫಾರಸು
Presidential advisory panel recommends to extend grace period for H1-B workers to 180 days

ವಾಷಿಂಗ್ಟನ್: ಉದ್ಯೋಗ ಕಳೆದುಕೊಂಡಿರುವ H1-B ನೌಕರರ ಗ್ರೇಸ್ ಅವಧಿಯನ್ನು (grace period) ವಿಸ್ತರಿಸಲು ಅಧ್ಯಕ್ಷೀಯ ಸಲಹಾ ಉಪಸಮಿತಿ ಅಮೆರಿಕದ ಫೆಡರಲ್ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೆಲಸ ಕಳೆದುಕೊಂಡವರು ಹೊಸ ಕೆಲಸ ಹುಡುಕುವ ನಿಟ್ಟಿನಲ್ಲಿ ಅನುಕೂಲವಾಗುವಂತೆ ಈ ಗ್ರೇಸ್ ಅವಧಿಯನ್ನು 60 ದಿನಗಳಿಂದ 180 ದಿನಗಳಿಗೆ ವಿಸ್ತರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ವಲಸೆ ಉಪಸಮಿತಿಯು ಉದ್ಯೋಗ ಕಳೆದುಕೊಂಡಿರುವ H1-B ಕಾರ್ಮಿಕರ ಗ್ರೇಸ್ ಅವಧಿಯನ್ನು 60 ದಿನಗಳಿಂದ 180 ದಿನಗಳವರೆಗೆ ವಿಸ್ತರಿಸುವಂತೆ ಹೋಮ್​ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಮತ್ತು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳಿಗೆ (Department of Homeland Security and the US Citizenship and Immigration Services -USCIS) ಶಿಫಾರಸು ಮಾಡಿದೆ ಎಂದು ಏಷ್ಯನ್ ಅಮೆರಿಕನ್ನರು, ಸ್ಥಳೀಯ ಹವಾಯಿಗಳು ಮತ್ತು ಪೆಸಿಫಿಕ್ ದ್ವೀಪವಾಸಿಗಳ ಮೇಲಿನ ಅಧ್ಯಕ್ಷರ ಸಲಹಾ ಆಯೋಗದ ಸದಸ್ಯರಾಗಿರುವ ಅಜಯ್ ಜೈನ್ ಭುಟೋರಿಯಾ ಮಂಗಳವಾರ ಹೇಳಿದ್ದಾರೆ.

ಪ್ರಸ್ತುತ 60 ದಿನಗಳ ಗ್ರೇಸ್ ಅವಧಿಯೊಳಗೆ ಹೊಸ ಉದ್ಯೋಗವನ್ನು ಹುಡುಕುವುದು, H1-B ಸ್ಥಿತಿಯನ್ನು ವರ್ಗಾಯಿಸಲು ಸಂಕೀರ್ಣವಾದ ದಾಖಲೆಗಳನ್ನು ನೀಡುವುದು ಮತ್ತು USCIS ನ ಪ್ರಕ್ರಿಯೆಯಲ್ಲಿ ವಿಳಂಬ ಸೇರಿದಂತೆ ಹಲವಾರು ಅಡಚಣೆಗಳು ಉಂಟಾಗುತ್ತವೆ ಎಂದು ಭುಟೋರಿಯಾ ಹೇಳಿದರು. ಇಂಥ ಅಡಚಣೆಗಳ ಕಾರಣದಿಂದ ಅನೇಕ H1-B ನೌಕರರು ಅನಿವಾರ್ಯವಾಗಿ ದೇಶವನ್ನು ತೊರೆಯುವಂತಾಗುತ್ತದೆ.

ಇದು ಅಮೆರಿಕದಲ್ಲಿ ಕೌಶಲ್ಯ ಹೊಂದಿದ ಕಾರ್ಮಿಕರ ಕೊರತೆಗೆ ಕಾರಣವಾಗಬಹುದು ಎಂದು ಅವರು ಸಲಹಾ ಆಯೋಗದ ಸದಸ್ಯರಿಗೆ ತಿಳಿಸಿದರು. ಭುಟೋರಿಯಾ ಅವರು ತಮ್ಮ ಪ್ರಸ್ತುತಿಯಲ್ಲಿ, ಗ್ರೇಸ್ ಅವಧಿಯ ವಿಸ್ತರಣೆಗೆ ಬಲವಾಗಿ ಪ್ರತಿಪಾದಿಸಿದರು. ಅಮೆರಿಕದ ಆರ್ಥಿಕ ಬೆಳವಣಿಗೆಗೆ ನುರಿತ ಟೆಕ್ ಉದ್ಯೋಗಿಗಳು ಅತ್ಯಗತ್ಯ ಎಂದು ಅವರು ಹೇಳಿದರು.

ಕೆಲಸ ಕೆಳೆದುಕೊಂಡಾಗ ಎದುರಾಗುವ ಸಮಸ್ಯೆಗಳಿವು: H1-B ವೀಸಾ ಹೊಂದಿರುವವರು ತಮ್ಮ ಉದ್ಯೋಗ ಕಳೆದುಕೊಂಡಾಗ ಬಹಳ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲಸ ಕಳೆದುಕೊಂಡ ನಂತರ ಅವರು 60 ದಿನಗಳ ಗ್ರೇಸ್ ಅವಧಿಯನ್ನು ಹೊಂದಿರುತ್ತಾರೆ. ಈ ಸಮಯದಲ್ಲಿ ಅವರು ಅಮೆರಿಕವನ್ನು ತೊರೆಯಬೇಕು ಅಥವಾ ವಲಸೆ ಸ್ಥಿತಿಯನ್ನು ಬದಲಾಯಿಸಬೇಕು ಅಥವಾ ಅವರ ಪರವಾಗಿ ಇನ್ನೊಬ್ಬ ಉದ್ಯೋಗದಾತನು H1-B ಅರ್ಜಿಯನ್ನು ಸಲ್ಲಿಸಬೇಕು.

60 ದಿನಗಳಲ್ಲಿ ಹಾಗೆ ಮಾಡದಿದ್ದರೆ, ಅವರು ತಮ್ಮ ವಲಸೆಯೇತರ ವೀಸಾದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಹಿಂದಿನ ಕಂಪನಿಯು ವಜಾಗೊಳಿಸಿದ 60 ದಿನಗಳೊಳಗೆ ಹೊಸ ಕಂಪನಿಯು ಹೊಸ H1-B ವೀಸಾ ಅರ್ಜಿಯನ್ನು ಸಲ್ಲಿಸಿದರೆ, ಉದ್ಯೋಗಿಯ H1-B ಸ್ಥಿತಿಯಲ್ಲಿ ಅಂತರವಿದ್ದರೂ ಸಹ ಆ ಕಂಪನಿಯ ಅರ್ಜಿಯ ಬದಲಾವಣೆಯನ್ನು ಸಾಮಾನ್ಯವಾಗಿ ಮಾನ್ಯ ಮಾಡಲಾಗುತ್ತದೆ.

ಉದ್ಯೋಗ ಮಾರುಕಟ್ಟೆಯು ಬಹಳ ಸವಾಲಿನದ್ದಾಗಿದೆ. ವಿಶೇಷ ಕ್ಷೇತ್ರಗಳಲ್ಲಿನ ಕಾರ್ಮಿಕರಿಗೆ ಇದು ಬಹಳ ಅನ್ವಯಿಸುತ್ತದೆ. ಹೊಸದಾಗಿ ನೇಮಕ ಮಾಡಿಕೊಳ್ಳುವಾಗ ಟೆಕ್ ಕಂಪನಿಗಳು ಸಾಮಾನ್ಯವಾಗಿ ನಾಲ್ಕರಿಂದ ಐದು ಸುತ್ತಿನ ಸಂದರ್ಶನಗಳನ್ನು ನಡೆಸುತ್ತವೆ. ಅಂದರೆ ಹೊಸ ಉದ್ಯೋಗ ಸಿಗಬೇಕಾದರೆ ಅನೇಕ ವಾರಗಳೇ ಹಿಡಿಯುತ್ತವೆ. H1-B ಉದ್ಯೋಗಿಯೊಬ್ಬ 60 ದಿನಗಳಲ್ಲಿ ಹೊಸ ಉದ್ಯೋಗವನ್ನು ಹುಡುಕಲು ಸಾಧ್ಯವಾದರೂ, ಆತ ತನ್ನ H1-B ಸ್ಥಿತಿಯನ್ನು ವರ್ಗಾಯಿಸುವ ಪ್ರಕ್ರಿಯೆ ಮಾತ್ರ ಬಹಳ ಸಮಯ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ : ಅಮೆರಿಕ ಇತಿಹಾಸದಲ್ಲಿ 2ನೇ ಅತಿದೊಡ್ಡ ಬ್ಯಾಂಕ್ ವೈಫಲ್ಯ..' ಸಿಲಿಕಾನ್ ವ್ಯಾಲಿ ಬ್ಯಾಂಕ್' ಮುಚ್ಚಲು ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.