ETV Bharat / international

ನೇಪಾಳದಲ್ಲಿ ಬಿರುಗಾಳಿ ಎಬ್ಬಿಸಿದ ಭಾರತ ಕುರಿತಾದ ಪ್ರಚಂಡ ಹೇಳಿಕೆ: ಪ್ರಧಾನಿ ರಾಜೀನಾಮೆಗೆ ಪ್ರತಿಪಕ್ಷಗಳ ಒತ್ತಾಯ - ಈಟಿವಿ ಭಾರತ್​ ಕನ್ನಡ ನ್ಯೂಸ್

ರಾಷ್ಟ್ರೀಯ ಅಸೆಂಬ್ಲಿ ಸಭೆಯಲ್ಲಿ ನೇಪಾಳದ ವಿರೋಧ ಪಕ್ಷಗಳು ಪ್ರಧಾನಿ ಪ್ರಚಂಡ ರಾಜೀನಾಮೆಗೆ ಒತ್ತಾಯಿಸಿವೆ.

ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ
ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ
author img

By

Published : Jul 6, 2023, 7:42 PM IST

ಕಠ್ಮಂಡು (ನೇಪಾಳ) : ನೇಪಾಳದ ಉನ್ನತ ನಾಯಕರು ಭೌಗೋಳಿಕ ರಾಜಕೀಯ, ದ್ವಿಪಕ್ಷೀಯ ಸಂಬಂಧಗಳು ಮತ್ತು ಇತರ ರಾಷ್ಟ್ರೀಯ ವಿಷಯಗಳಂತಹ ಸೂಕ್ಷ್ಮ ವಿಷಯಗಳ ಬಗೆಗಿನ ಟೀಕೆಗಳಿಗಾಗಿ ವಿವಾದಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ನೇಪಾಳದ ಪ್ರಧಾನಮಂತ್ರಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರು ಇಲ್ಲಿ ನೆಲೆಸಿರುವ ಭಾರತೀಯ ಉದ್ಯಮಿಯೊಬ್ಬರು ನನ್ನನ್ನು ಪ್ರಧಾನಿಯನ್ನಾಗಿ ಮಾಡಲು ಒಮ್ಮೆ ಪ್ರಯತ್ನ ನಡೆಸಿದ್ದರು ಎಂಬ ಹೇಳಿಕೆ ನೇಪಾಳದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಇದರಿಂದ ಪ್ರತಿಪಕ್ಷಗಳು ಪ್ರಧಾನಿ ರಾಜೀನಾಮೆಗೆ ಒತ್ತಾಯಿಸುತ್ತಿವೆ. ನೇಪಾಳದ ಪ್ರವರ್ತಕ ಟ್ರಕ್ಕಿಂಗ್ ಉದ್ಯಮಿ ಸರ್ದಾರ್ ಪ್ರೀತಮ್ ಸಿಂಗ್ ಅವರು ನೇಪಾಳ-ಭಾರತ ಸಂಬಂಧಗಳನ್ನು ಹೆಚ್ಚಿಸುವಲ್ಲಿ ವಿಶೇಷ ಪಾತ್ರ ವಹಿಸಿದ್ದಾರೆ ಎಂದು ಪ್ರಚಂಡ ಹೇಳಿದ್ದರು. ರೋಡ್ಸ್ ಟು ದಿ ವ್ಯಾಲಿ' ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ಪ್ರಚಂಡ ಸೋಮವಾರ ಮಾತನಾಡಿದ ವೇಳೆ ಈ ಹೇಳಿಕೆ ನೀಡಿದ್ದರು. ಪ್ರೀತಮ್ ಸಿಂಗ್ ಅವರು ಒಮ್ಮೆ ನನ್ನನ್ನು ಪ್ರಧಾನಿ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಹಲವಾರು ಬಾರಿ ದೆಹಲಿಗೆ ಪ್ರಯಾಣಿಸುವುದರ ಜೊತೆಗೆ ಕಠ್ಮಂಡುವಿನಲ್ಲಿ ರಾಜಕೀಯ ಮುಖಂಡರೊಂದಿಗೆ ಅನೇಕ ಸುತ್ತಿನ ಮಾತುಕತೆ ನಡೆಸಿದ್ದರು ಎಂದು ಹೇಳಿದ್ದರು.

ಪ್ರಧಾನಿ ಪ್ರಚಂಡ ಅವರ ಈ ಹೇಳಿಕೆಗಳು ನೇಪಾಳದಲ್ಲಿ ದೊಡ್ಡ ಮಟ್ಟದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಹಲವು ರಾಜಕೀಯ ವಲಯದಲ್ಲಿ ಭಾರಿ ಟೀಕೆಗೆ ಕಾರಣವಾಗಿದೆ. ನೇಪಾಳದ ಪ್ರಮುಖ ವಿರೋಧ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಯುನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್) (ಸಿಪಿಎನ್-ಯುಎಂಎಲ್) ಸದಸ್ಯರು ಬುಧವಾರ ನಡೆದ ರಾಷ್ಟ್ರೀಯ ಅಸೆಂಬ್ಲಿ ಸಭೆಯಲ್ಲಿ ಹೊಸದಿಲ್ಲಿಯಿಂದ ನೇಮಕಗೊಂಡ ಪ್ರಧಾನಿಗೆ ಹುದ್ದೆಯಲ್ಲಿ ಮುಂದುವರಿಯುವ ಹಕ್ಕಿಲ್ಲ ಎಂದು ಘೋಷಣೆಗಳನ್ನು ಕೂಗಿ ರಾಜೀನಾಮೆಗೆ ಒತ್ತಾಯಿಸಿದ್ದರು.

ಪ್ರಧಾನಿ ರಾಜೀನಾಮೆಗೆ ಮಾಜಿ ಪ್ರಧಾನಿ ಒಲಿ ಒತ್ತಾಯ : ಸಿಪಿಎನ್-ಯುಎಂಎಲ್ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ನಮಗೆ ಪ್ರಧಾನಿಯಿಂದ ರಾಜೀನಾಮೆ ಬೇಕು. ಸ್ಪಷ್ಟೀಕರಣವಲ್ಲ. ಅವರ ಹೇಳಿಕೆಗಳು ರಾಷ್ಟ್ರೀಯ ಸ್ವಾತಂತ್ರ್ಯ, ಘನತೆ, ಸಂವಿಧಾನ ಮತ್ತು ಸಂಸತ್ತಿಗೆ ಹೊಡೆತ ನೀಡಿದೆ ಹೀಗಾಗಿ ಅವರು ರಾಜೀನಾಮ ನೀಡಬೇಕು ಎಂದು ಕಿಡಿಕಾರಿದ್ದರು.

ಈ ಕುರಿತು ಮಾತನಾಡಿದ ಯುಎಂಎಲ್ ಶಾಸಕ ರಘುಜಿ ಪಂತ್, ನೈತಿಕ ಆಧಾರದ ಮೇಲೆ ಪ್ರಧಾನಿ ರಾಜೀನಾಮೆ ನೀಡಬೇಕು. ನಮಗೆ ದೆಹಲಿಯಿಂದ ಪ್ರಧಾನಿ ನೇಮಕ ಆಗುವುದು ಬೇಕಾಗಿಲ್ಲ. ಪ್ರಚಂಡ ಹೇಳಿಕೆಗೆ ಪ್ರತಿಪಕ್ಷಗಳು ಮಾತ್ರವಲ್ಲ, ಆಡಳಿತ ಪಕ್ಷಗಳೂ ಅಸಮಾಧಾನ ವ್ಯಕ್ತಪಡಿಸಿವೆ. ಪ್ರಧಾನಿಯವರ ಮಾತುಗಳು ಟೀಕೆಗೆ ಅರ್ಹವಾಗಿವೆ ಎಂದರು.

ಇದನ್ನೂ ಓದಿ : ಭಾರತ - ನೇಪಾಳ ಸಾಂಸ್ಕೃತಿಕ ಸಂಬಂಧ ಬಲಪಡಿಸಲು ರಾಮಾಯಣ ಸರ್ಕ್ಯೂಟ್​ಗೆ ವೇಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.