ETV Bharat / international

ಗುಂಡಿನ ದಾಳಿ.. ಮೂವರು ಸಾವು, 11 ಕ್ಕೂ ಹೆಚ್ಚು ಜನಕ್ಕೆ ಗಾಯ - ಫಿಲಡೆಲ್ಫಿಯಾದಲ್ಲಿ ಶನಿವಾರ ತಡರಾತ್ರಿ ನಡೆದ ಗುಂಡಿನ ದಾಳಿ

ಫಿಲಡೆಲ್ಫಿಯಾದಲ್ಲಿ ಶನಿವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 11 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ ಸೇರಿದ್ದಾರೆ.

ಫಿಲಡೆಲ್ಫಿಯಾದಲ್ಲಿ  ಗುಂಡಿನ ದಾಳಿ
ಫಿಲಡೆಲ್ಫಿಯಾದಲ್ಲಿ ಗುಂಡಿನ ದಾಳಿ
author img

By

Published : Jun 5, 2022, 7:04 PM IST

ಫಿಲಡೆಲ್ಫಿಯಾ(ಯು ಎಸ್​): ಫಿಲಡೆಲ್ಫಿಯಾದಲ್ಲಿ ಶನಿವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವಿಗೀಡಾಗಿದ್ದಾರೆ ಮತ್ತು 11ಕ್ಕೂ ಹೆಚ್ಚು ಜನ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಫಿಲಡೆಲ್ಫಿಯಾ ಡೌನ್‌ಟೌನ್‌ನ ಸೌತ್ ಸ್ಟ್ರೀಟ್‌ನಲ್ಲಿ ಗಸ್ತು ತಿರುಗುತ್ತಿದ್ದಾಗ ಗುಂಡಿನ ಶಬ್ದ ಕೇಳಿದ್ದಾರೆ. ಆ ವೇಳೆ ಮೊದಲು ಶಂಕಿತನೋ ದೊಡ್ಡ ಗುಂಪೊಂದರ ಮೇಲೆ ಗುಂಡು ಹಾರಿಸುವುದು ಕಂಡುಬಂದಿದೆ. ಈ ವೇಳೆ ಅಧಿಕಾರಿಯು ಶಂಕಿತರಲ್ಲಿ ಒಬ್ಬನ ಮೇಲೆ ಸುಮಾರು 30 ಅಡಿ (9 ಮೀಟರ್) ದೂರದಿಂದ ಗುಂಡು ಹಾರಿಸಿದ್ದಾರೆ. ಆದರೆ ಶಂಕಿತನಿಗೆ ಗುಂಡು ಹೊಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ಇಬ್ಬರು ಪುರುಷರು ಮತ್ತು ಮಹಿಳೆ ಸೇರಿದ್ದಾರೆ. ಅವರ ಹೆಸರನ್ನು ಅಧಿಕಾರಿಗಳು ಇನ್ನೂ ಬಹಿರಂಗಗೊಳಿಸಿಲ್ಲ. ಗುಂಡೇಟಿನಿಂದ ಗಾಯಗೊಂಡವರ ಸ್ಥಿತಿ ಬಗ್ಗೆಯೂ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಘಟನೆ ಸಂಬಂಧ ಎರಡು ನಾಡ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿವಾದಿತ ಹೇಳಿಕೆ: ಬಿಜೆಪಿಯಿಂದ ನೂಪುರ್​ ಶರ್ಮಾ, ನವೀನ್​ ಜಿಂದಾಲ್ ಅಮಾನತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.