ನವದೆಹಲಿ: ಪರಿಸರ ರಕ್ಷಣೆ ಕುರಿತು ದುಬೈನಲ್ಲಿ ನಡೆದ ಕಾಪ್-28 (COP28) ಸಮ್ಮೇಳನದಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಮರಳಿದ್ದಾರೆ. ಸಮಾವೇಶದಲ್ಲಿ ವಿಶ್ವದ ಹಲವು ನಾಯಕರ ಜೊತೆ ಚರ್ಚೆ ನಡೆಸಿದರು. ಇದೇ ವೇಳೆ, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಜೊತೆ ಮೋದಿ ಸೆಲ್ಫಿ ಇಳಿದಿದ್ದು, ಅದನ್ನು ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
-
Meeting friends is always a delight. https://t.co/4PWqZZaDKC
— Narendra Modi (@narendramodi) December 2, 2023 " class="align-text-top noRightClick twitterSection" data="
">Meeting friends is always a delight. https://t.co/4PWqZZaDKC
— Narendra Modi (@narendramodi) December 2, 2023Meeting friends is always a delight. https://t.co/4PWqZZaDKC
— Narendra Modi (@narendramodi) December 2, 2023
ಮೊದಲು ಇಟಲಿ ಪಿಎಂ ಮೋದಿ ಅವರೊಂದಿಗಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು, 'ಕಾಪ್-28 ಸಮ್ಮೇಳನದಲ್ಲಿ ಒಳ್ಳೆಯ ಗೆಳೆಯರು' ಎಂದು ಒಕ್ಕಣೆ ಬರೆದುಕೊಂಡಿದ್ದರು. COP-28 ರ ವೇಳೆ ಉಭಯ ನಾಯಕರ ನಡುವೆ ನಡೆದ ಸಭೆಯಲ್ಲಿ ಇಟಲಿ ಮತ್ತು ಭಾರತ ಪರಿಸರ ರಕ್ಷಣೆ ಸುಸ್ಥಿರ ಮತ್ತು ಸಮೃದ್ಧ ಭವಿಷ್ಯದ ಬಗ್ಗೆ ಉಲ್ಲೇಖಿಸಿದರು.
ಪ್ರಧಾನಿ ಮೋದಿ ಅವರು ಶನಿವಾರ ಮೆಲಾನಿ ಅವರ ಪೋಸ್ಟ್ ಅನ್ನು ಮರು ಹಂಚಿಕೊಂಡಿದ್ದಾರೆ. ಜೊತೆಗೆ ಸೆಲ್ಫಿ ಫೋಟೋಗೆ ಪ್ರತಿಕ್ರಿಯಿಸಿದ್ದು, 'ಸ್ನೇಹಿತರನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ' ಬರೆದಿದ್ದಾರೆ. ಅಲ್ಲದೇ, COP-28 ಶೃಂಗಸಭೆಯಲ್ಲಿ ಇಟಲಿಯ ಪ್ರಧಾನಿ ಜಾರ್ಜಿಯ ಮೆಲೋನಿ ಅವರನ್ನು ಭೇಟಿ ಮಾಡಿ ಸುಸ್ಥಿರ ಮತ್ತು ಸಮೃದ್ಧ ಪರಿಸರಕ್ಕಾಗಿ ಉಭಯ ದೇಶಗಳ ನಡುವೆ ಸಹಯೋಗದ ಪ್ರಯತ್ನಗಳನ್ನು ಎದುರು ನೋಡುತ್ತಿದ್ದೇನೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಮೆಲೋಡಿ' ಹ್ಯಾಷ್ಟ್ಯಾಗ್ ಟ್ರೆಂಡ್: ಇಬ್ಬರೂ ತಮ್ಮ ಸೆಲ್ಫಿ ಚಿತ್ರಗಳನ್ನು ಹಂಚಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಹೆಸರಿನ ಸಂಯೋಜಿತ 'ಮೆಲೋಡಿ' ಹ್ಯಾಷ್ಟ್ಯಾಗ್ ಟ್ರೆಂಡ್ ಸೃಷ್ಟಿಸಿದೆ. ಅದರಲ್ಲಿ ಈ ಹಿಂದಿನ ಭೇಟಿಯ ವೇಳೆಯ ಫೋಟೋಗಳನ್ನೂ ಹಂಚಿಕೊಳ್ಳಲಾಗಿದೆ. ಈ ಹಿಂದೆಯೂ ಇದೇ ರೀತಿಯ ಮೆಲೋಡಿ ಹೆಸರು ಟ್ರೆಂಡ್ ಆಗಿತ್ತು.
ಇನ್ನೂ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್, ಬಾರ್ಬಡೋಸ್ ಕೌಂಟರ್ ಮಿಯಾ ಅಮೋರ್ ಮೊಟ್ಲಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಮತ್ತು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ವಿಶ್ವ ನಾಯಕರನ್ನು ಪ್ರಧಾನಿ ಮೋದಿ ದುಬೈನಲ್ಲಿ ಭೇಟಿಯಾದರು.
-
Good friends at COP28.#Melodi pic.twitter.com/g0W6R0RJJo
— Giorgia Meloni (@GiorgiaMeloni) December 1, 2023 " class="align-text-top noRightClick twitterSection" data="
">Good friends at COP28.#Melodi pic.twitter.com/g0W6R0RJJo
— Giorgia Meloni (@GiorgiaMeloni) December 1, 2023Good friends at COP28.#Melodi pic.twitter.com/g0W6R0RJJo
— Giorgia Meloni (@GiorgiaMeloni) December 1, 2023
ಭಾರತದಲ್ಲಿ ಕಾಪ್-28 ಸಮ್ಮೇಳನ: ಪರಿಸರ ರಕ್ಷಣೆ ಸಮ್ಮೇಳನದಲ್ಲಿ ಮಾನತಾಡಿದ ಪ್ರಧಾನಿ ಮೋದಿ, ಹವಾಮಾನ ಬದಲಾವಣೆಯು ಜಾಗತಿಕ ದಕ್ಷಿಣದ ದೇಶಗಳ ಮೇಲೆ ಅಪಾರ ಪರಿಣಾಮ ಬೀರಿದೆ. ಇದರ ನಿಯಂತ್ರಣ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದರು.
2028ರಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ಅಥವಾ ಕಾಪ್33 (COP-33) ಸಮ್ಮೇಳನವನ್ನು ಭಾರತದಲ್ಲಿ ಆಯೋಜಿಸುವ ಕುರಿರೂ ಪ್ರಸ್ತಾಪಿಸಿ, ಜನರ ಸಹಭಾಗಿತ್ವದ ಮೂಲಕ ಕಾರ್ಬನ್ ಸಿಂಕ್‌ಗಳನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುವ ಗ್ರೀನ್ ಕ್ರೆಡಿಟ್ ಇನಿಶಿಯೇಟಿವ್ ಪ್ರಾರಂಭಿಸಲಾಗುತ್ತದೆ ಎಂದು ಪ್ರಧಾನಿ ಹೇಳಿದ್ದರು.
ಇದನ್ನೂ ಓದಿ: 2028ರಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ಆಯೋಜನೆಯ ಪ್ರಸ್ತಾಪ ಮಾಡಿದ ಭಾರತ