ETV Bharat / international

ಡೆನ್ಮಾರ್ಕ್‌ನಲ್ಲಿ ಮೋದಿ : ಅಭಿವೃದ್ಧಿ ವಿಷಯಗಳ ಬಗ್ಗೆ ಮಹತ್ವದ ಚರ್ಚೆ - ಪ್ರಧಾನಿ ನರೇಂದ್ರ ಮೋದಿ ಅವರು ಐಸ್‌ಲ್ಯಾಂಡ್​ನ ಕ್ಯಾಟ್ರಿನ್ ಜಾಕೋಬ್ಸ್‌ಡೊಟ್ಟಿರ್ ಅವರನ್ನು ಭೇಟಿ ಮಾಡಿದ್ದಾರೆ

ನವೀಕರಿಸಬಹುದಾದ ಇಂಧನ, ಮೀನುಗಾರಿಕೆ, ಆಹಾರ ಸಂಸ್ಕರಣೆಯಲ್ಲಿ ನಮ್ಮ ಆರ್ಥಿಕ ಸಂಬಂಧಗಳನ್ನು ತೀವ್ರಗೊಳಿಸುವ ಮಾರ್ಗಗಳನ್ನು ಅನ್ವೇಷಿಸಲಾಗಿದೆ. ಭಾರತದಲ್ಲಿ ಭೂಶಾಖದ ಶಕ್ತಿಯಲ್ಲಿ ಸಹಯೋಗದ ಯೋಜನೆಗಳನ್ನು ಸ್ವಾಗತಿಸಲಾಗಿದೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ..

http://10.10.50.80:6060//finalout3/odisha-nle/thumbnail/04-May-2022/15190247_234_15190247_1651658976257.png
ಡೆನ್ಮಾರ್ಕ್‌ನಲ್ಲಿ ಮೋದಿ: ಅಭಿವೃದ್ಧಿ ವಿಷಯಗಳ ಬಗ್ಗೆ ಮಹತ್ವದ ಚರ್ಚೆ
author img

By

Published : May 4, 2022, 4:43 PM IST

ಕೋಪನ್ ಹ್ಯಾಗನ್ : ಪ್ರಧಾನಿ ನರೇಂದ್ರ ಮೋದಿ ಅವರು ಐಸ್‌ಲ್ಯಾಂಡ್​ನ ಕ್ಯಾಟ್ರಿನ್ ಜಾಕೋಬ್ಸ್‌ಡೊಟ್ಟಿರ್ ಅವರನ್ನು ಭೇಟಿ ಮಾಡಿದ್ದು, ವ್ಯಾಪಾರ, ಇಂಧನ ಮತ್ತು ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿ ಬಾಂಧವ್ಯವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ. ಮೂರು ಯುರೋಪಿಯನ್ ರಾಷ್ಟ್ರಗಳ ಭೇಟಿಯ 2ನೇ ಹಂತದಲ್ಲಿ ಬರ್ಲಿನ್‌ನಿಂದ ಮಂಗಳವಾರ ಇಲ್ಲಿಗೆ ಆಗಮಿಸಿದ ಮೋದಿ, ಡ್ಯಾನಿಶ್ ರಾಜಧಾನಿಯಲ್ಲಿ ನಡೆದ ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯ ನೇಪಥ್ಯದಲ್ಲಿ ಜಾಕೋಬ್ಸ್‌ಡೊಟ್ಟಿರ್ ಅವರನ್ನು ಭೇಟಿಯಾದರು.

ಈ ಸಂಬಂಧ ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ. ಇಬ್ಬರೂ ಪ್ರಧಾನಮಂತ್ರಿಗಳು 2018ರ 1ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ತಮ್ಮ ಮೊದಲ ಭೇಟಿಯನ್ನು ಆತ್ಮೀಯವಾಗಿ ಸ್ಮರಿಸಿಕೊಂಡಿದ್ದಾರೆ. ಈ ವರ್ಷ ಎರಡೂ ದೇಶಗಳು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ ಎಂದು ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ :ಸೌಗಂಧಿಕಾ ಕ್ಯಾಂಟೀನ್​​ ಪಾನೀಯದಲ್ಲಿದೆ ಔಷಧೀಯ ಗುಣ: ಒಮ್ಮೆ ಭೇಟಿ ಕೊಟ್ರೆ ಮತ್ತೆ ಬರುವ ಬಯಕೆ

ಇಬ್ಬರೂ ನಾಯಕರು ವಿಶೇಷವಾಗಿ ಭೂಶಾಖದ ಶಕ್ತಿ, ನೀಲಿ ಆರ್ಥಿಕತೆ, ಆರ್ಕ್ಟಿಕ್, ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು. ಮೀನುಗಾರಿಕೆ, ಆಹಾರ ಸಂಸ್ಕರಣೆ, ಡಿಜಿಟಲ್ ವಿಶ್ವವಿದ್ಯಾಲಯಗಳು ಮತ್ತು ಸಂಸ್ಕೃತಿ ಸೇರಿದಂತೆ ಶಿಕ್ಷಣ ವಿಷಯಗಳೂ ಈ ವೇಳೆ ಚರ್ಚೆಗೆ ಬಂದವು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ನವೀಕರಿಸಬಹುದಾದ ಇಂಧನ, ಮೀನುಗಾರಿಕೆ, ಆಹಾರ ಸಂಸ್ಕರಣೆಯಲ್ಲಿ ನಮ್ಮ ಆರ್ಥಿಕ ಸಂಬಂಧಗಳನ್ನು ತೀವ್ರಗೊಳಿಸುವ ಮಾರ್ಗಗಳನ್ನು ಅನ್ವೇಷಿಸಲಾಗಿದೆ. ಭಾರತದಲ್ಲಿ ಭೂಶಾಖದ ಶಕ್ತಿಯಲ್ಲಿ ಸಹಯೋಗದ ಯೋಜನೆಗಳನ್ನು ಸ್ವಾಗತಿಸಲಾಗಿದೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.