ETV Bharat / international

ಉಕ್ರೇನ್​ ಸಂಘರ್ಷ ನಿಲುಗಡೆ ಬಗ್ಗೆ ಡೆನ್ಮಾರ್ಕ್​ ಪ್ರಧಾನಿ ಜೊತೆ ನರೇಂದ್ರ ಮೋದಿ ಚರ್ಚೆ - PM Modi, Danish PM discuss Ukraine conflict

ಡೆನ್ಮಾರ್ಕ್​ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆ ದೇಶದ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ಜೊತೆ ಉಕ್ರೇನ್​ ಯುದ್ಧದ ಬಗ್ಗೆ ಚರ್ಚೆ ನಡೆಸಿದರು. ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕಾಗಿದೆ ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

pm-modi-danish
ಡೆನ್ಮಾರ್ಕ್​ ಪ್ರಧಾನಿ ಜೊತೆ ನರೇಂದ್ರ ಮೋದಿ ಚರ್ಚೆ
author img

By

Published : May 3, 2022, 10:44 PM IST

ನವದೆಹಲಿ: ಯುರೋಪ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಡೆನ್ಮಾರ್ಕ್​ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ಜೊತೆ ಉಕ್ರೇನ್​ ಸಂಘರ್ಷದ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ, ಡೆನ್ಮಾರ್ಕ್​ ಪ್ರಧಾನಿ ರಷ್ಯಾದ ನೀತಿಯನ್ನು ಖಂಡಿಸಿದರು. ರಷ್ಯಾದ ಪಡೆಗಳು ಉಕ್ರೇನ್ ವಿರುದ್ಧ ಕಾನೂನುಬಾಹಿರ ಮತ್ತು ಅಪ್ರಚೋದಿತ ಆಕ್ರಮಣ ನಡೆಸುತ್ತಿವೆ. ಡೆನ್ಮಾರ್ಕ್​ ಇದನ್ನು ಬಲವಾಗಿ ವಿರೋಧಿಸುತ್ತದೆ ಎಂದರು.

ಉಕ್ರೇನ್‌ನಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಇಬ್ಬರು ಪ್ರಧಾನ ಮಂತ್ರಿಗಳು ಕಳವಳ ವ್ಯಕ್ತಪಡಿಸಿದರು. ಅವರು ಉಕ್ರೇನ್‌ನಲ್ಲಿ ನಾಗರಿಕರ ಸಾವುಗಳನ್ನು ನಿಸ್ಸಂದಿಗ್ಧವಾಗಿ ಖಂಡಿಸಿದರು. ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತ ಮತ್ತು ಯುರೋಪ್​ ಸಹಭಾಗಿತ್ವದ ಮಹತ್ವ, ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ, ವ್ಯಾಪಾರ, ಹೂಡಿಕೆ ಮತ್ತು ಭೌಗೋಳಿಕ ಒಪ್ಪಂದಗಳ ಮೇಲಿನ ಮಾತುಕತೆಗಳ ಪುನರಾರಂಭದ ಬಗ್ಗೆ ಬಗ್ಗೆ ಉಭಯ ನಾಯಕರು ಚರ್ಚಿಸಿದರು.

ವಿಶ್ವಸಂಸ್ಥೆಯಲ್ಲಿ ಭಾತರತಕ್ಕೆ ಡೆನ್ಮಾರ್ಕ್​ ಬೆಂಬಲ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಾರತದ ಶಾಶ್ವತ ಸದಸ್ಯತ್ವಕ್ಕೆ ಡೆನ್ಮಾರ್ಕ್‌ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಹೇಳಿದರು. 2025 -2026ರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯತ್ವಕ್ಕಾಗಿ ಡೆನ್ಮಾರ್ಕ್‌ನ ಉಮೇದುವಾರಿಕೆಯ ಪರವಾಗಿ ಭಾರತ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ತಿಳಿಸಿದ್ದಾರೆ.

ಓದಿ: ಭಾರತಕ್ಕೆ ಭೇಟಿ ನೀಡಲು ಐವರಿಗೆ ಸ್ಪೂರ್ತಿಯಾಗಿ: ಡೆನ್ಮಾರ್ಕ್​​​ನ ಭಾರತೀಯರಿಗೆ ಮೋದಿ ಕರೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.