ಗ್ರೀಸ್: ಉತ್ತರ ಗ್ರೀಸ್‌ನ ಕವಾಲಾ ನಗರದ ಬಳಿ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದು ವಿಮಾನವೊಂದು ನೆಲಕ್ಕಪ್ಪಳಿಸಿದೆ. ಇದು ಪ್ರಯಾಣಿಕರ ವಿಮಾನವೋ ಅಥವಾ ಸರಕು ವಿಮಾನವೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆಯಲ್ಲಿ ಜೀವಹಾನಿಯ ಬಗ್ಗೆಯೂ ಮಾಹಿತಿ ಲಭ್ಯವಾಗಬೇಕಿದೆ.
ಅಪಘಾತಗೊಂಡ ಆಂಟೊನೊವ್ ವಿಮಾನವು ಸರ್ಬಿಯಾದಿಂದ ಜೋರ್ಡಾನ್‌ಗೆ ಹೊರಟಿತ್ತು. ಹಾರಾಟದ ಸಮಯದಲ್ಲಿ ವಿಮಾನದ ಎಂಜಿನ್ ಸ್ಥಗಿತಗೊಂಡಿದೆ. ತಕ್ಷಣ ವಿಮಾನದ ಪೈಲಟ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಥೆಸಲೋನಿಕಿ ಅಥವಾ ಕವಾಲಾ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವ ಮೊದಲು ಸೂಚನೆ ನೀಡಲಾಗಿದೆ.
-
BREAKING: Ukrainian cargo plane crashes near Kavala in northeast Greece
— KOIKIMEDIA (@KoikiMedia) July 17, 2022 " class="align-text-top noRightClick twitterSection" data="
Video allegedly showing the Antonov crash. Plane was supposedly flying from Serbia to Jordan and crashed in northern Greece
KOIKIMEDIA bringing the world 🌍 closer to your doorstep pic.twitter.com/tPpDliI6KD
">BREAKING: Ukrainian cargo plane crashes near Kavala in northeast Greece
— KOIKIMEDIA (@KoikiMedia) July 17, 2022
Video allegedly showing the Antonov crash. Plane was supposedly flying from Serbia to Jordan and crashed in northern Greece
KOIKIMEDIA bringing the world 🌍 closer to your doorstep pic.twitter.com/tPpDliI6KDBREAKING: Ukrainian cargo plane crashes near Kavala in northeast Greece
— KOIKIMEDIA (@KoikiMedia) July 17, 2022
Video allegedly showing the Antonov crash. Plane was supposedly flying from Serbia to Jordan and crashed in northern Greece
KOIKIMEDIA bringing the world 🌍 closer to your doorstep pic.twitter.com/tPpDliI6KD
ಪೈಲಟ್ ಹತ್ತಿರದ ಕವಾಲಾ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ಯತ್ನಿಸುತ್ತಿದ್ದಾಗ 40 ಕಿಮೀ ದೂರದಲ್ಲಿ ವಿಮಾನಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು ನೆಲಕ್ಕೆ ಅಪ್ಪಳಿಸಿತು. ಬಳಿಕ ಭಾರಿ ಸ್ಫೋಟ ಉಂಟಾಗಿದೆ. ಪೈಲಟ್ ಸೇರಿದಂತೆ ಇತರ ಜೀವಕ್ಕೆ ಹಾನಿಯಾದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಗ್ರೀಸ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಇದನ್ನೂ ಓದಿ: ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಅಗ್ನಿ ಅವಘಡ