ಬೊಗೋಟಾ, ಕೊಲಂಬಿಯಾ: ದಟ್ಟವಾದ ಅಮೆಜಾನ್ ಕಾಡಿನಲ್ಲಿ ನಡೆಯುವುದು ವಯಸ್ಕರಿಗೆ ರೋಮಾಂಚನಕಾರಿಯೇ ಸರಿ. ಇಂತಹ ಕಡೆ ಏನು ತಿಳಿಯದ ಮಕ್ಕಳು 40 ದಿನ ಒಟ್ಟಿಗೆ ಬದುಕಿ ಬಂದಿದ್ದಾರೆ. ಭೀಕರ ವಿಮಾನ ಅಪಘಾತದಲ್ಲಿ ಬದುಕುಳಿದ ನಾಲ್ವರು ಮಕ್ಕಳು ಕಾಡಿನಲ್ಲಿ ಸಿಕ್ಕ ಎಲೆಗಳನ್ನು ತಿಂದು, ಅಮೆಜಾನ್ ಜೌಗು ಪ್ರದೇಶದ ನೀರು ಕುಡಿದು ಪ್ರಾಣ ಉಳಿಸಿಕೊಂಡಿದ್ದಾರೆ. ಅವರಲ್ಲಿ 11 ತಿಂಗಳ ಪುಟ್ಟ ಮಗುವೂ ಸೇರಿದೆ. ಉಳಿದವರ ವಯಸ್ಸು 13, 9 ಮತ್ತು 4 ವರ್ಷ. ಬಹಳ ದಿನಗಳ ನಂತರ ಅವರೆಲ್ಲ ಕಾಡಿನಲ್ಲಿ ಜೀವಂತವಾಗಿರುವುದನ್ನು ನೋಡುವುದೇ ಒಂದು ಪವಾಡ.
ವಿಮಾನ ಅಪಘಾತದಲ್ಲಿ ಬದುಕುಳಿದ ಮಕ್ಕಳು: ಅಮೆಜಾನ್ ಕಾಡಿನ ಸಮೀಪ ವಾಸಿಸುವ ಚಿಕ್ಕ ಮಕ್ಕಳ ಕುಟುಂಬವು ಕಾಡಿನ ಬಗ್ಗೆ ಜ್ಞಾನವನ್ನು ಹೊಂದಿದೆ. ಅದು ಈ ಮಕ್ಕಳಿಗೂ ಸಹಜವಾಗಿ ಬರುತ್ತದೆ. ಈ ಮಕ್ಕಳು ತಾಯಿಯ ಗರ್ಭದಲ್ಲಿರುವಾಗಲೇ ಪ್ರಕೃತಿಯಿಂದ ಅನೇಕ ವಿಷಯಗಳನ್ನು ಕಲಿತಿರುತ್ತಾರೆ. ಇನ್ನೊಂದೆಡೆ ಕಾಡುಪ್ರಾಣಿ, ವಿಷ ಕ್ರಿಮಿಗಳಿಗೆ ಹೆದರದೇ 40 ದಿನ ಬದುಕಿರುವುದು ಪವಾಡವೇ ಸರಿ ಎಂದು ಅರಣ್ಯ ಸಂರಕ್ಷಣಾ ತಜ್ಞರು ಹೇಳುತ್ತಾರೆ
ಮಕ್ಕಳಿಗೆ ಧೈರ್ಯ ತುಂಬಿದ್ದ ತಾಯಿ: ಅಪಘಾತದಲ್ಲಿ ಬದುಕುಳಿದ ಇಬ್ಬರು ಕಿರಿಯ ಮಕ್ಕಳ ತಂದೆ ಮ್ಯಾನುಯೆಲ್ ರಾನೊಕ್ ಭಾನುವಾರ ಆಸ್ಪತ್ರೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ವಿಮಾನ ಅಪಘಾತದ ಬಳಿಕ ನನ್ನ ಸಹೋದರನ ಪತ್ನಿ ಸುಮಾರು ನಾಲ್ಕ ದಿನಗಳ ಕಾಲ ಜೀವಂತವಾಗಿದ್ದರು ಎಂದು ನನ್ನ ಸಹೋದರನ ಹಿರಿಯ ಮಗಳು ಲೆಸ್ಲಿ ಜಾಕೊಬೊಂಬೈರ್ ಮುಕುಟುಯ್ ಹೇಳಿದ್ದಾಳೆ. ತಾಯಿ ರಾನೋಕ್ ಸಾಯುವ ಮುನ್ನ ಮಕ್ಕಳಿಗೆ ಈ ಪ್ರದೇಶದಿಂದ ದೂರ ಹೋಗುವಂತೆ ಮತ್ತು ಉಳಿದ ಮಕ್ಕಳನ್ನು ರಕ್ಷಿಸುವಂತೆ ಹೇಳಿದ್ದರು. ಅವರು ಕೊನೆಯುಸಿರೆಳೆಯುವ ಮುನ್ನ ಮಕ್ಕಳಲ್ಲಿ ಧೈರ್ಯ ತುಂಬಿದ್ದಾರೆ ಎಂದು ಮ್ಯಾನುಯೆಲ್ ರಾನೊಕ್ ಹೇಳಿದ್ದಾರೆ.
ಮಕ್ಕಳು ಹಾವುಗಳು, ಪ್ರಾಣಿಗಳು ಮತ್ತು ಸೊಳ್ಳೆಗಳಿಂದ ತುಂಬಿದ ಕಾಡಿನಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಮರದ ಕಾಂಡಗಳಲ್ಲಿ ಅಡಗಿಕೊಂಡಿದ್ದರು. ಮಕ್ಕಳು ಕಾಡಿನ ಆಹಾರಕ್ಕೆ ಹೊಂದಾಣಿಕೆಯಾಗಿದ್ದರಿಂದ ಸ್ಥಳೀಯ ಆಹಾರ ತಿನ್ನಲು ಆಗುತ್ತಿರಲಿಲ್ಲ. ಮಗವೊಂದು ನಡೆಯಲು ಕಷ್ಟಪಡುತ್ತಿದೆ. ಎಲ್ಲ ಮಕ್ಕಳು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಎಂದು ಮಕ್ಕಳ ಚಿಕ್ಕಪ್ಪ ಫಿಡೆನ್ಸಿಯೊ ವೇಲೆನ್ಸಿಯಾ ತಿಳಿಸಿದ್ದಾರೆ.
ಹಣ್ಣು ಹಂಪಲ ತಿಂದು ಬದುಕಿದ ಮಕ್ಕಳು: ಮಕ್ಕಳು ತಾಯಿ ಮಾತುಗಳನ್ನು ಪಾಲಿಸಿದ್ಧಾರೆ. ಹೀಗಾಗಿ ಅವರು ಅಪಘಾತ ಸ್ಥಳದಿಂದ ಸುಮಾರು ಐದು ಕಿಲೋ ಮೀಟರ್ ದೂರದಲ್ಲಿ ವಾಸಿಸುತ್ತಿರುವುದು ತಿಳಿದು ಬಂದಿತ್ತು. ಕೊಲಂಬಿಯಾದ ಸ್ಥಳೀಯ ಜನರ ರಾಷ್ಟ್ರೀಯ ಸಂಸ್ಥೆ (OPIAC) ಪ್ರಕಾರ, ಈ ಮಕ್ಕಳು ನೈಸರ್ಗಿಕ ಪರಿಸರಕ್ಕೆ ಸಂಪರ್ಕ ಹೊಂದಿದ್ದರು. ಇದರಿಂದಾಗಿ ಅವರು ದೀರ್ಘಕಾಲ ಬದುಕಿದರು. ಈ ವೇಳೆ ಮಕ್ಕಳು ಕಾಡಿನಲ್ಲಿ ಹಣ್ಣುಗಳನ್ನು ತಿಂದು ಬದುಕಿದರು ಎಂದು ಮಾಹಿತಿ ನೀಡಿದರು.
ಈ ಮಕ್ಕಳು ಅನಕೊಂಡ ಮತ್ತು ಜಾಗ್ವಾರ್‌ಗಳಂತಹ ಭಯಾನಕ ಜೀವಿಗಳಿಂದ ತಪ್ಪಿಸಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಕಾಡಿನಲ್ಲಿರುವವರಿಗೆ ಮಾತ್ರ ಇದು ಸಾಧ್ಯ. ಮಂಗಗಳಂತಹ ಕೆಲವು ಪ್ರಾಣಿಗಳು ಇವರಿಗೆ ಬದುಕುವುದನ್ನು ಕಲಿಸಿವೆ ಎಂದು ಹೇಳಲಾಗುತ್ತದೆ. ಆ ಪ್ರಾಣಿಗಳು ತಿಂದ ಹಣ್ಣುಗಳನ್ನೇ ತಿಂದು.. ಎಲೆಗಳ ಮೇಲೆ ಬಿದ್ದ ನೀರನ್ನು ಈ ಮಕ್ಕಳು ಸೇವಿಸರಬಹುದು ಎಂಬುದು ನಂಬಿಕೆ. ರಾತ್ರಿ ವೇಳೆ ಸೊಳ್ಳೆ, ಹಾವುಗಳಿಂದ ರಕ್ಷಿಸಿಕೊಳ್ಳಲು ಪೊದೆಯಂತಹ ವಸ್ತುಗಳನ್ನು ಈ ಮಕ್ಕಳು ಬಳಸುತ್ತಿದ್ದರು ಎನ್ನಲಾಗಿದೆ.
ಕೊಲಂಬಿಯಾದ ರಾಷ್ಟ್ರೀಯ ಸ್ಥಳೀಯ ಸಂಸ್ಥೆ (ONIC) ನ ಲೂಯಿಸ್ ಅಕೋಸ್ಟಾ ಪ್ರಕಾರ, ಮಕ್ಕಳು ಸ್ಥಳೀಯರು ಮತ್ತು ಕಾಡಿನ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಇದರಿಂದಾಗಿ ಅವರು ಕಾಡಿನಲ್ಲಿ ಸುಮಾರು 40 ದಿನಗಳ ಕಾಲ ಬದುಕಲು ಸಾಧ್ಯವಾಗಿದೆ. ಮಕ್ಕಳು 40 ದಿನಗಳ ಕಾಲ ಕಾಡಿನಲ್ಲಿ ಸಿಗುವ ಆಹಾರವನ್ನು ತಿನ್ನುತ್ತಿದ್ದರು ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದೆ.
ಮೇ 1ರಂದು ವಿಮಾನ ಪತನ: ಕೊಲಂಬಿಯಾದ ಕ್ಯಾಕ್ವೆಟಾ ಮತ್ತು ಗುವಿಯಾರ್ ಪ್ರಾಂತ್ಯಗಳ ನಡುವಿನ ಗಡಿಯ ಬಳಿ ಮಿಲಿಟರಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಾಲ್ಕು ಮಕ್ಕಳನ್ನು ರಕ್ಷಿಸಲಾಯಿತು. ಮೇ 1 ರಂದು, ವಿಮಾನದ ಇಂಜಿನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ನಂತರ ಏಳು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಅಮೆಜಾನ್ ಪ್ರಾಂತ್ಯದ ಸ್ಯಾನ್ ಜೋಸ್ ಡೆಲ್ ನಗರದಲ್ಲಿ ಪತನಗೊಂಡಿತ್ತು. ಇದರಲ್ಲಿ ಪೈಲಟ್ ಮತ್ತು ಈ ಮಕ್ಕಳ ತಾಯಿ ಮ್ಯಾಗ್ಡಲೀನಾ ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಅವರ ದೇಹಗಳು ವಿಮಾನದೊಳಗೆ ಪತ್ತೆಯಾಗಿವೆ. ಈಗ 13, 9, 4 ವರ್ಷ ಮತ್ತು 11 ತಿಂಗಳ ವಯಸ್ಸಿನ ನಾಲ್ಕು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದರು.
ನೂರಾರು ಸೈನಿಕರಿಂದ ರಕ್ಷಣಾ ಕಾರ್ಯ: ಈ ರಕ್ಷಣಾ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಸೈನಿಕರು ಮತ್ತು ಸ್ನಿಫರ್ ಡಾಗ್‌ಗಳು ಭಾಗಿಯಾಗಿದ್ದವು. ವಿಮಾನ ಪತನದಲ್ಲಿ ಮೂವರು ವಯಸ್ಕರು ಸಾವನ್ನಪ್ಪಿದ್ದಾರೆ. ಮಿಲಿಟರಿಯ "ಕ್ಷಿಪ್ರ ಹುಡುಕಾಟ" ನಂತರ ನಾಲ್ಕು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.
ಅಧ್ಯಕ್ಷರ ಟ್ವೀಟ್ಗೂ ಮೊದಲು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ರಕ್ಷಣಾ ಕಾರ್ಯಕರ್ತರು ಪೊದೆಗಳು ಮತ್ತು ಕೋಲುಗಳ ಸಹಾಯದಿಂದ ಮಾಡಿದ ಆಶ್ರಯವನ್ನು ನೋಡಿದ್ದಾರೆ. ಇದರಿಂದ ಅಪಘಾತದ ನಂತರ ಜನರು ಬದುಕುಳಿದಿರುವುದು ಕಂಡುಬರುತ್ತದೆ ಎಂದು ದೇಶದ ಸಶಸ್ತ್ರ ಪಡೆಗಳು ತಿಳಿಸಿದ್ದವು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದವು.
ಘಟನೆಯಲ್ಲಿ ಬದುಕುಳಿದ ಮಕ್ಕಳ ಅಜ್ಜ ನರ್ಸಿಜೋ ಮುಕುಟುಯ್ ಅವರು ಮಾತನಾಡಿ, ಈ ಸುದ್ದಿ ಕೇಳಿ ತುಂಬಾ ಸಂತೋಷವಾಯಿತು. ಕೊಲಂಬಿಯಾ ಸೈನ್ಯವು ಹಂಚಿಕೊಂಡ ಫೋಟೋದಲ್ಲಿ ನಮ್ಮ ಮೊಮ್ಮಕ್ಕಳನ್ನು ನೋಡಿ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.
ಓದಿ: plane crash: ಕಣ್ಮರೆಯಾಗಿದ್ದ ನಾಲ್ವರು ಮಕ್ಕಳು 40 ದಿನಗಳ ಬಳಿಕ ಜೀವಂತವಾಗಿ ಪತ್ತೆ!