ಪೋರ್ಟ್‌ಲ್ಯಾಂಡ್( ಅಮೆರಿಕ): ಹೊರೈಜನ್ ಏರ್ ಫ್ಲೈಟ್‌ನಲ್ಲಿ ಹೆಚ್ಚುವರಿ ಕಾಕ್‌ಪಿಟ್ ಸೀಟಿನಲ್ಲಿ ಸವಾರಿ ಮಾಡುತ್ತಿದ್ದ ಆಫ್ ಡ್ಯೂಟಿ ಏರ್‌ಲೈನ್ ಪೈಲಟ್, ವಿಮಾನ ಹಾರಾಟದ ವೇಳೆ ಎಂಜಿನ್‌ಗಳನ್ನು ಸ್ಥಗಿತಗೊಳಿಸಲು ಪ್ರಯತ್ನಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಎಂಜಿನ್ ಆಫ್ ಮಾಡುವ ಮುನ್ನ ಈ ಫೈಲಟ್ 'ನಾನು ಮಾನಸಿಕವಾಗಿ ಸರಿಯಿಲ್ಲ' ಎಂದು ಹೇಳಿದ್ದ ಎಂದು ವರದಿಯಾಗಿದೆ.
ಪೈಲಟ್ ಜೋಸೆಫ್ ಡೇವಿಡ್ ಎಮರ್ಸನ್, ತನ್ನ ಮಾನಸಿಕ ಆರೋಗ್ಯ ಹದಗೆಟ್ಟಿದ್ದರಿಂದ ಇತ್ತೀಚೆಗೆ ಸೈಕೆಡೆಲಿಕ್ ಅಣಬೆಗಳನ್ನು ( ಇದನ್ನು ಮ್ಯಾಜಿಕ್ ಮಶ್ರೂಮ್ ಎಂದು ಕರೆಯಲಾಗುತ್ತದೆ) ತೆಗೆದುಕೊಂಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದ ಎಂದು ವರದಿಯಾಗಿದೆ. ಹಾರಾಟದ ವೇಳೆಯೇ ಫೈಲಟ್ ಎಂಜಿನ್ ಆಫ್ ಮಾಡಿದ್ದರ ಬಗ್ಗೆ ಕೇಸ್ ದಾಖಲಾಗಿತ್ತು. ಈ ಬಗ್ಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಒರೆಗಾನ್‌ನಲ್ಲಿನ ಸ್ಟೇಟ್ ಪ್ರಾಸಿಕ್ಯೂಟರ್‌ಗಳು ಅಲಾಸ್ಕಾ ಏರ್‌ಲೈನ್ಸ್ ಪೈಲಟ್ ವಿರುದ್ಧ 83 ಕೊಲೆ ಯತ್ನದ ಪ್ರಯತ್ನಗಳ ಬಗ್ಗೆ ವರದಿ ಬಹಿರಂಗ ಪಡಿಸಿದ್ದಾರೆ.
ಇದೀಗ ಪೊಲೀಸರು ನ್ಯಾಯಾಲಯಕ್ಕೆ ತನಿಖೆಯ ಸಂಪೂರ್ಣ ವರದಿ ಹಾಜರುಪಡಿಸಿದ್ದಾರೆ. ಏತನ್ಮಧ್ಯೆ ಫೆಡರಲ್ ಪ್ರಾಸಿಕ್ಯೂಟರ್‌ಗಳು, ಎಮರ್ಸನ್ ಅನಗತ್ಯವಾಗಿ ಫ್ಲೈಟ್ ಸಿಬ್ಬಂದಿ ಕಾರ್ಯದಲ್ಲಿ ಎಂಟ್ರಿ ಆಗಿ ನಿಯಮ ಉಲ್ಲಂಘಿಸಿದ್ದಾರೆ. ಅವರ ಈ ಕೃತ್ಯಕ್ಕೆ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಆರೋಪಿ ಪರವಾಗಿ ಅವರ ವಕೀಲ ನೋಹ್ ಹಾರ್ಸ್ಟ್ ವಾದ ಮಂಡನೆ ಮಾಡಿದ್ದು, ಆತ ತಪ್ಪಿತಸ್ಥ ಅಲ್ಲ ಎಂಬ ಆರ್ಗ್ಯೂಮೆಂಟ್ ಮಾಡಿದ್ದಾರೆ
ಆಫ್ ಡ್ಯೂಟಿ ಪೈಲಟ್ ಹೀಗೆ ಮಾಡಿದ್ದೇಕೆ ಗೊತ್ತಾ?: ಮಲ್ಟ್‌ನೋಮಾ ಕೌಂಟಿ ಸರ್ಕ್ಯೂಟ್ ಕೋರ್ಟ್‌ನಲ್ಲಿ ಸಲ್ಲಿಸಲಾದ ಸಂಭವನೀಯ ಕಾರಣದ ಹೇಳಿಕೆಗಳ ಪ್ರಕಾರ, ಎಮರ್ಸನ್ ತನ್ನ ಬಂಧನದ ನಂತರ ಪೋರ್ಟ್ ಆಫ್ ಪೋರ್ಟ್‌ಲ್ಯಾಂಡ್ ಪೋಲೀಸರಿಗೆ, ತನ್ನ ಸ್ನೇಹಿತರೊಬ್ಬರ ನಿಧನದಿಂದಾಗಿ ತಾನು ಖಿನ್ನತೆಗೆ ಒಳಗಾಗಿದ್ದು, ಅದರಿಂದ ಹೊರ ಬರಲು ಹೋರಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಹಾರಾಟದ ವೇಳೆ, ಎಂಜಿನ್ ಆಫ್ ಮಾಡುವ ಮುಂಚೆ ಅಂದರೆ 48 ಗಂಟೆಗಳ ಮೊದಲು ಸೈಕೆಡೆಲಿಕ್ ಅಣಬೆಗಳನ್ನು ತೆಗೆದುಕೊಂಡಿದ್ದೆ. ಮತ್ತು ತಾನು 40 ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ರೆ ಮಾಡಿರಲಿಲ್ಲ ಎಂದು ತನಿಖೆ ವೇಳೆ ಪೊಲೀಸರಿಗೆ ಹೇಳಿದ್ದಾನೆ ಎಂದು ಕೋರ್ಟ್ಗೆ ಸಲ್ಲಿಸಿರುವ ದಾಖಲೆಗೆಳಲ್ಲಿ ಉಲ್ಲೇಖಿಸಲಾಗಿದೆ.
ಕ್ಯಾಲಿಫೋರ್ನಿಯಾದ ಪ್ಲೆಸೆಂಟ್ ಹಿಲ್‌ನಿಂದ ಅಲಾಸ್ಕಾ ಏರ್‌ಲೈನ್ಸ್ ಪೈಲಟ್ ಎಮರ್ಸನ್ ಅವರನ್ನು ಭಾನುವಾರ ರಾತ್ರಿ ಬಂಧಿಸಲಾಗಿತ್ತು. ವಾಷಿಂಗ್ಟನ್‌ನ ಎವೆರೆಟ್‌ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಿಸನ್ ಏರ್ ವಿಮಾನದಲ್ಲಿ ಸವಾರಿ ಮಾಡುತ್ತಿದ್ದಾಗ ಎಂಜಿನ್‌ಗಳನ್ನು ಮುಚ್ಚಲು ಪ್ರಯತ್ನಿಸಿದ್ದರು ಎಂದು ವಿಮಾನ ಸಿಬ್ಬಂದಿ ದೂರು ನೀಡಿದ್ದರು. ಈ ವೇಳೆ ತಕ್ಷಣ ವಿಮಾನದ ಸಿಬ್ಬಂದಿ ವಿಮಾನವನ್ನು ಪೋರ್ಟ್‌ಲ್ಯಾಂಡ್‌ಗೆ ತಿರುಗಿಸಿದ್ದರು. ಅಷ್ಟೇ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಮೂಲಕ 80 ಕ್ಕೂ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನ ರಕ್ಷಿಸಲಾಗಿತ್ತು.