ETV Bharat / international

ಮೆಗಿ ಚಂಡಮಾರುತ: ಫಿಲಿಪೈನ್ಸ್​​ನಲ್ಲಿ ಈವರೆಗೆ 121 ಮಂದಿ ಸಾವು

ಕಳೆದ ಭಾನುವಾರ ಫಿಲಿಪೈನ್ಸ್​​ಗೆ ಅಪ್ಪಳಿಸಿದ ಮೆಗಿ ಚಂಡಮಾರುತದಿಂದ ಸಾಕಷ್ಟು ಹಾನಿಯಾಗಿದ್ದು, ಈವರೆಗೆ 121 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Phillipines storm death toll rises to 121
ಮೆಗಿ ಚಂಡಮಾರುತ: ಫಿಲಿಪೈನ್ಸ್​​ನಲ್ಲಿ ಈವರೆಗೆ 121 ಮಂದಿ ಸಾವು
author img

By

Published : Apr 14, 2022, 2:32 PM IST

ಮನಿಲಾ(ಫಿಲಿಪೈನ್ಸ್) : ಕಳೆದ ವಾರದಲ್ಲಿ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಚಂಡಮಾರುತದಿಂದ ಸತ್ತವರ ಸಂಖ್ಯೆ 121ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 81 ಮಂದಿ ಫಿಲಿಪೈನ್ ನಗರದಲ್ಲಿ ಉಂಟಾದ ಭೂಕುಸಿತದಲ್ಲಿ ಸಮಾಧಿಯಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಮಧ್ಯ ಫಿಲಿಪೈನ್ಸ್‌ನಲ್ಲಿ 118 ಮತ್ತು ದಕ್ಷಿಣ ಫಿಲಿಪೈನ್ಸ್‌ನಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಚಂಡಮಾರುತ ಹೆಸರು 'ಮೆಗಿ' ಈ ಚಂಡಮಾರುತದಿಂದ ಪ್ರವಾಹ ಮತ್ತು ಭಾರೀ ಭೂಕುಸಿತದಂಥಹ ದುಷ್ಪರಿಣಾಮಗಳು ಉಂಟಾಗಿವೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯು ಇದುವರೆಗೆ ಕೇವಲ 76 ಮಂದಿ ಸಾವನ್ನಪ್ಪಿದ್ದು, 29 ಕಾಣೆಯಾಗಿದ್ದಾರೆ ಎಂದು ವರದಿ ಮಾಡಿದೆ. ವಿಪತ್ತುಗಳಿಂದ ಪೀಡಿತ ಪ್ರಾಂತ್ಯಗಳಿಂದ ವರದಿಗಳನ್ನು ಈ ಸಂಸ್ಥೆ ಸಂಗ್ರಹಿಸುತ್ತಿದ್ದು, ಇನ್ನೂ ಸಾವುನೋವುಗಳ ಸಂಖ್ಯೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಬೇಬೇ ನಗರದಲ್ಲಿ ಉಂಟಾದ ಭೂಕುಸಿತದಲ್ಲಿ 81 ಮತ್ತು ಲೇಯ್ಟ್ ಪ್ರಾಂತ್ಯದ ಅಬುಯೋಗ್ ಪಟ್ಟಣದಲ್ಲಿ 31 ಮತ್ತು ಸಮರ್ ಪ್ರಾಂತ್ಯದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಕನಿಷ್ಠ 236 ಮಂದಿ ಚಂಡಮಾರುತದಲ್ಲಿ ಗಾಯಗೊಂಡಿರುವುದಾಗಿ ತಿಳಿದುಬಂದಿದ್ದು, ಅವರಿಗೆ ಚಿಕಿತ್ಸೆ ನೀಡುವ ಕಾರ್ಯ ಮುಂದುವರೆಯುತ್ತಿದೆ. ಇನ್ನು ಕಳೆದ ಭಾನುವಾರ ಅಪ್ಪಳಿಸಿದ ಮೆಗಿ ಚಂಡಮಾರುತ, ಈ ವರ್ಷ ಫಿಲಿಪೈನ್ಸ್ ಅಪ್ಪಳಿಸಿದ ಮೊದಲ ಉಷ್ಣವಲಯದ ಚಂಡಮಾರುತವಾಗಿದೆ. ಫಿಲಿಪೈನ್ಸ್ ದ್ವೀಪಸಮೂಹವು ಪೆಸಿಫಿಕ್ ಟೈಫೂನ್ ಬೆಲ್ಟ್‌ನಲ್ಲಿರುವ ಕಾರಣದಿಂದ, ವಿಪತ್ತು-ಪೀಡಿತ ರಾಷ್ಟ್ರಗಳಲ್ಲಿ ಇದೂ ಒಂದಾಗಿದೆ.

ಇದನ್ನೂ ಓದಿ: ಚೀನಾದ ಕಟ್ಟಡಗಳಿಂದ ಕೇಳಿಬರುತ್ತಿದೆ ಭಯಾನಕ ಕಿರುಚಾಟ: ಯಾರಿಗೂ ಬೇಡ ಈ ನರಕಯಾತನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.