ETV Bharat / international

ಐದು ವರ್ಷದೊಳಗಿನ ಮಕ್ಕಳಿಗೆ ಫೈಜರ್​ ಲಸಿಕೆ ಶೇ 73ರಷ್ಟು ಪರಿಣಾಮಕಾರಿ - ಓಮಿಕ್ರಾನ್ ಸ್ಟ್ರೈನ್ ವಿರುದ್ಧ ಫೈಜರ್

6 ತಿಂಗಳಿಂದ 4 ವರ್ಷ ವಯಸ್ಸಿನ ಮಕ್ಕಳಲ್ಲಿ ಫೈಜರ್​ ಲಸಿಕೆ ಪರಿಣಾಮಕಾರಿತ್ವವು ಶೇಕಡಾ 73.2 ರಷ್ಟಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಐದು ವರ್ಷದೊಳಗಿನ ಮಕ್ಕಳಿಗೆ ಫೈಜರ್​ ಲಸಿಕೆ ಶೇ 73ರಷ್ಟು ಪರಿಣಾಮಕಾರಿ

author img

By

Published : Aug 25, 2022, 11:00 AM IST

ಲಾಸ್ ಏಂಜಲೀಸ್(ಅಮೆರಿಕ): ಓಮಿಕ್ರಾನ್ ಸ್ಟ್ರೈನ್ ವಿರುದ್ಧ ಫೈಜರ್ - ಬಯೋಎನ್‌ಟೆಕ್ ಕೋವಿಡ್ ಲಸಿಕೆ ಶೇಕಡಾ 73 ರಷ್ಟು ಪರಿಣಾಮಕಾರಿಯಾಗಿದೆ ಎಂದು ಫೈಜರ್​ ಪ್ರಕಟಿಸಿದೆ. ಈ ಲಸಿಕೆಯನ್ನು 6 ತಿಂಗಳಿಂದ 4 ವರ್ಷಗಳವರೆಗಿನ ಮಕ್ಕಳನ್ನು ರಕ್ಷಿಸುವಲ್ಲಿ ಈ ಲಸಿಕೆ ಹೆಚ್ಚು ಪರಿಣಾಮಕಾರಿ ಎಂದು ಫೈಜರ್ ಹೇಳಿದೆ.

ಜೂನ್ 17 ರಂದು ಈ ವಯಸ್ಸಿನ ಮಕ್ಕಳಿಗೆ ಫೈಜರ್​ ಲಸಿಕೆ ನೀಡಲು ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ ಅನುಮತಿ ನೀಡಿದೆ. ಲಸಿಕೆ ನೀಡಿಕೆ ಅಧ್ಯಯನದಲ್ಲಿ ಭಾಗವಹಿಸಿದವರು ಮೂರು 3-µg ಡೋಸ್‌ಗಳ Pfizer-BioNTech ಲಸಿಕೆ ಅಥವಾ ಪ್ಲಸೀಬೊ ಪಡೆದುಕೊಂಡಿದ್ದಾರೆ. 6 ತಿಂಗಳಿಂದ 4 ವರ್ಷ ವಯಸ್ಸಿನ ಮಕ್ಕಳಲ್ಲಿ ಲಸಿಕೆ ಪರಿಣಾಮಕಾರಿತ್ವವು ಶೇಕಡಾ 73.2 ರಷ್ಟಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಒಮಿಕ್ರಾನ್ ಬಿಎ.2 ಸ್ಟ್ರೈನ್ ಹೆಚ್ಚು ಪ್ರಚಲಿತದಲ್ಲಿದ್ದ ಸಮಯದಲ್ಲಿ ನಮ್ಮ ಕೋವಿಡ್-19 ಲಸಿಕೆಯ ಮೂರು 3-µg ಡೋಸ್‌ಗಳು ಚಿಕ್ಕ ಮಕ್ಕಳಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತವೆ ಎಂದು ಈ ಫಲಿತಾಂಶಗಳು ದೃಢಪಡಿಸುತ್ತವೆ. ನಾವು ಸಹ ಇಂತಹ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ BioNTech ನ ಸಹ-ಸಂಸ್ಥಾಪಕ ಉಗುರ್ ಸಾಹಿನ್ ಹೇಳಿದ್ದಾರೆ.

ಇದನ್ನು ಓದಿ: 10 ರಲ್ಲಿ 9 ಮಕ್ಕಳು ಸೇವಿಸುತ್ತಿಲ್ಲ ಹೃದಯ ಆರೋಗ್ಯ ಸ್ನೇಹಿ ಆಹಾರ: ಸಮೀಕ್ಷೆಯಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.