ಲಾಸ್ ಏಂಜಲೀಸ್: ಅಮೆರಿಕ ಸಂಸತ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ಪತಿ ಪೌಲ್ ಪೆಲೋಸಿ, ನ್ಯಾಪಾ ಕೌಂಟಿ ನಗರದ ಯೂಂಟ್‌ವಿಲ್ಲೆಯಲ್ಲಿ ಮೇ ಕಾರು ಅಪಘಾತಕ್ಕೀಡಾಗಿದೆ. ಈ ವೇಳೆ ಅವರು ತಪ್ಪಿತಸ್ಥರೆಂದು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಐದು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಲ್ಲಿನ ಆಡಳಿತದಿಂದ ತಿಳಿದು ಬಂದಿದೆ.
ಕುಡಿದು ಕಾರು ಚಲಾಯಿಸಿದ ಆರೋಪದ ಮೇಲೆ 82ರ ಹರೆಯದ ಪೌಲ್ ಪೆಲೋಸಿ ಅವರು ಈಗಾಗಲೇ ಎರಡು ದಿನಗಳ ಜೈಲು ಶಿಕ್ಷೆ ಮುಗಿಸಿದ್ದು, ಇನ್ನೆರಡು ದಿನ ಜೈಲಿನಲ್ಲಿರಲಿದ್ದಾರೆ. ನಂತರ ಅವರಿಗೆ ಹೆಚ್ಚುವರಿ ಶಿಕ್ಷೆ ಇರುವುದಿಲ್ಲ ಎಂದು ನಾಪಾ ಕೌಂಟಿಯ ಸುಪೀರಿಯರ್ ಕೋರ್ಟ್ ನ್ಯಾಯಾಧೀಶ ಜೋಸೆಫ್ ಸೊಲ್ಗಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಹೇಳಿದೆ. ಜೈಲಿನಲ್ಲಿ ಉಳಿದ ದಿನಗಳನ್ನು ಕಳೆಯುವ ಬದಲು ನ್ಯಾಯಾಲಯದ ಕೆಲಸ ಮಾಡುವ ಮೂಲಕ ಉಳಿದ ಶಿಕ್ಷೆ ಪೂರ್ಣಗೊಳಿಸಲು ನ್ಯಾಯಾಲಯ ಆದೇಶಿಸಿದೆ ಎಂದು ಪೆಲೋಸಿಯ ವಕೀಲರು ಹೇಳಿದ್ದಾರೆ.
ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಗಾಯ ಮಾಡಿಕೊಂಡಿರುವುದಾಗಿ ಪೌಲ್ ಪೆಲೋಸಿ ತಪ್ಪೊಪ್ಪಿಕೊಂಡಿದ್ದರು. ನ್ಯಾನ್ಸಿ ಮತ್ತು ಪಾಲ್ ಪೆಲೋಸಿ 1963ರಲ್ಲಿ ವಿವಾಹವಾಗಿದ್ದರು.
ಇದನ್ನು ಓದಿ: ಭಾರತ ಬ್ರಿಟನ್ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಸುಧಾರಣೆಗೆ ಯತ್ನ: ಪ್ರಧಾನಿ ಅಭ್ಯರ್ಥಿ ಸುನಕ್