ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪೈಶಾಚಿಕ ಕೃತ್ಯಗಳು ಎಗ್ಗಿಲ್ಲದೇ ಸಾಗಿವೆ. ಚಿಕ್ಕಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದಿಂದಾಗಿ ಕುಖ್ಯಾತಿಯಾರುವ ದೇಶ ಈಗ ಮತ್ತೊಂದು ಕಾರಣಕ್ಕೆ ಅವಮಾನ ಅನುಭವಿಸುವಂತಾಗಿದೆ. ಶವಗಳ ಮೇಲೆ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಹೌದು, ಇದು ನಿಜಕ್ಕೂ ಅಚ್ಚರಿ ಮತ್ತು ಅವಮಾನಕರ ಸಂಗತಿ. ಶವಗಳನ್ನು ಭೂಮಿಯಲ್ಲಿ ಹೂತಿಟ್ಟ ಬಳಿಕ ಅವುಗಳನ್ನು ಹೊರತೆಗೆದು ಅತ್ಯಾಚಾರ ಮಾಡಲಾಗುತ್ತಿರುವ ಘಟನೆಗಳು ನಡೆದಿವೆ. ಇದನ್ನು ತಪ್ಪಿಸಲು ಅಲ್ಲಿನ ಪೋಷಕರು ಶವಸಂಸ್ಕಾರದ ಬಳಿಕ ಗೋರಿಗೆ ಬೀಗ ಹಾಕುತ್ತಿದ್ದಾರೆ. ಇದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮಹಿಳಾ ಶವಗಳನ್ನು ಸಂಸ್ಕಾರ ಮಾಡಿ ಬಂದ ಬಳಿಕ ಅಲ್ಲಿನ ಸ್ಮಶಾನ ಕಾವಲುಗಾರರು ಅದರ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಗಳು ನಡೆದಿವೆ. ಈ ಕೃತ್ಯಗಳು ತೀವ್ರ ಟೀಕೆಗೆ ಗುರಿಯಾಗಿದೆ.
ಈ ಬಗ್ಗೆ ಮಾಜಿ ಇಸ್ಲಾಂ ಪ್ರಚಾರಕ ಸುಲ್ತಾನ್ ಎಂಬಾತ ಮಾಹಿತಿ ನೀಡಿದ್ದು, "ಪಾಕಿಸ್ತಾನದಲ್ಲಿ ಲೈಂಗಿಕವಾಗಿ ನಿರಾಶೆಗೊಂಡ ಸಮಾಜ ಸೃಷ್ಟಿಯಾಗಿದೆ. ಶವಗಳ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಜನರು ತಮ್ಮ ಹೆಣ್ಣುಮಕ್ಕಳ ಶವಗಳು ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಅವರ ಸಮಾಧಿಗಳಿಗೆ ಬಾಗಿಲಿನ ಮಾದರಿಯಲ್ಲಿ ಸರಳುಗಳನ್ನು ಜೋಡಿಸಿ, ಅದಕ್ಕೆ ಬೀಗ ಹಾಕುತ್ತಿದ್ದಾರೆ" ಎಂದು ಹೇಳಿದ್ದಾರೆ. ಸುಲ್ತಾನ್, ಮಾಜಿ ಮುಸ್ಲಿಂ ನಾಸ್ತಿಕ ಕಾರ್ಯಕರ್ತನಾಗಿದ್ದಾರೆ. ಇವರು "ದಿ ಕರ್ಸ್ ಆಫ್ ಗಾಡ್, ನಾನು ಇಸ್ಲಾಂ ಅನ್ನು ಏಕೆ ತೊರೆದಿದ್ದೇನೆ" ಎಂಬ ಪುಸ್ತಕವನ್ನು ರಚಿಸಿದ್ದಾರೆ.
ಮತ್ತೊಬ್ಬ ಟ್ವಿಟರ್ ಬಳಕೆದಾರ ಸಾಜಿದ್ ಯೂಸುಫ್ ಶಾ, ದೇಶದ ಸಾಮಾಜಿಕ ಪರಿಸರವು ಲೈಂಗಿಕವಾಗಿ ಆವೇಶಗೊಂಡ ಮತ್ತು ದಮನಿತ ಸಮಾಜವನ್ನು ಹುಟ್ಟುಹಾಕಿದೆ. ಕೆಲವರು ತಮ್ಮ ಹೆಣ್ಣುಮಕ್ಕಳ ಸಮಾಧಿಯನ್ನು ಲೈಂಗಿಕ ದುರ್ಬಳಕೆಯಿಂದ ರಕ್ಷಿಸಲು ಹೋರಾಡುವಂತಾಗಿದೆ ಎಂದು ಬರೆದುಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಇದುವರೆಗೆ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಅತ್ಯಂತ ಭಯಾನಕ ವಿಚಾರವೆಂದರೆ, 2011 ರಲ್ಲಿ ಕರಾಚಿಯಲ್ಲಿನ ಉತ್ತರ ನಾಜಿಮಾಬಾದ್ ಸ್ಮಶಾನದ ಕಾವಲುಗಾರ ಮೊಹಮ್ಮದ್ ರಿಜ್ವಾನ್ ಎಂಬಾತ ಸಮಾಧಿಯಲ್ಲಿನ 48 ಮಹಿಳಾ ಶವಗಳ ಮೇಲೆ ಅತ್ಯಾಚಾರವೆಸಗಿದ್ದ. ಇದು ಬಹಿರಂಗವಾಗಿ, ಆತನನ್ನು ಬಂಧಿಸಲಾಗಿತ್ತು. ವಿಚಾರಣೆಯ ವೇಳೆ ಆತ ತನ್ನ ಪೈಶಾಚಿಕಿತೆಯನ್ನು ಒಪ್ಪಿಕೊಂಡಿದ್ದ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
2022 ರಲ್ಲಿ, ಪಾಕಿಸ್ತಾನದ ಗುಜರಾತ್‌ನ ಚಕ್ ಕಮಲಾ ಗ್ರಾಮದಲ್ಲಿ ಕೆಲವು ಕಾಮಾಂಧರು ಹುಡುಗಿಯ ಶವವನ್ನು ಅಗೆದು ಅತ್ಯಾಚಾರ ಮಾಡಿದ್ದರು. ಮೃತ ಬಾಲಕಿಯನ್ನು ಸಮಾಧಿ ಮಾಡಿದ ದಿನದ ಸಂಜೆಯೇ ಈ ಕೃತ್ಯ ನಡೆಸಿದ್ದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಾರ, ಶೇಕಡಾ 40 ಕ್ಕಿಂತ ಹೆಚ್ಚು ಪಾಕಿಸ್ತಾನಿ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಒಂದಲ್ಲಾ ಒಂದು ರೀತಿಯ ಹಿಂಸೆಗೆ ಒಳಗಾಗುತ್ತಾರೆ ಎಂದು ಹೇಳಿದೆ.
ಓದಿ: ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ಕೇಜ್ರಿವಾಲ್ ಬೆಂಬಲ