ಪೋರ್ಟ್ ಮೊರೆಸ್ಬಿ: ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಜಾಗತಿಕವಾಗಿ ಪ್ರಖ್ಯಾತಿ ಪಡೆದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪಪುವಾ ನ್ಯೂಗಿನಿ ಮತ್ತು ಫಿಜಿ ಪುಟ್ಟ ದೇಶಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸೋಮವಾರ ನೀಡಿ ಗೌರವಿಸಿವೆ.
ಸದ್ಯ ಪಪುವಾ ನ್ಯೂಗಿನಿ ಪ್ರವಾಸದಲ್ಲಿರುವ ಮೋದಿ ಅವರಿಗೆ ಆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಲೋಗೊಹು'ವನ್ನು ಅಧ್ಯಕ್ಷ ಜನರಲ್ ಸರ್ ಬಾಬ್ ದಾಡೆ ಅವರು ಪ್ರದಾನ ಮಾಡಿದರೆ, ಇದಕ್ಕೂ ಮೊದಲು ಫಿಜಿ ದೇಶದ 'ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ' ಪ್ರಶಸ್ತಿಯನ್ನು ಆ ದೇಶದ ಪ್ರಧಾನಮಂತ್ರಿ ಸಿತಿವೇನಿ ರಬುಕಾ ಅವರು ನೀಡಿ ಗೌರವಿಸಿದರು.
ಪೆಸಿಫಿಕ್ ದ್ವೀಪ ರಾಷ್ಟ್ರಗಳ ಏಕತೆ, ವಿಶ್ವದ ದಕ್ಷಿಣದ ಭಾಗದ ರಾಷ್ಟ್ರಗಳನ್ನು ಮುನ್ನಡೆಸಿದ್ದಕ್ಕಾಗಿ ಪಪುವಾ ನ್ಯೂಗಿನಿ, ಫಿಜಿ ದೇಶಗಳು ಭಾರತದ ಪ್ರಧಾನಿಗೆ ಈ ಅತ್ಯುನ್ನತ ಗೌರವ ನೀಡಿವೆ. ಈ ಪ್ರಶಸ್ತಿಯನ್ನು ಕೆಲವೇ ಕೆಲವು ಅನಿವಾಸಿಗಳು ಮಾತ್ರ ಪಡೆದುಕೊಂಡಿದ್ದು, ಅದರಲ್ಲಿ ಭಾರತದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗೆ ನೀಡಿರುವುದು ಇದೇ ಮೊದಲು.
-
Papua New Guinea has conferred the Companion of the Order of Logohu on PM @narendramodi. It was presented to him by Papua New Guinea Governor General Sir Bob Dadae. pic.twitter.com/0Xki0ibW8D
— PMO India (@PMOIndia) May 22, 2023 " class="align-text-top noRightClick twitterSection" data="
">Papua New Guinea has conferred the Companion of the Order of Logohu on PM @narendramodi. It was presented to him by Papua New Guinea Governor General Sir Bob Dadae. pic.twitter.com/0Xki0ibW8D
— PMO India (@PMOIndia) May 22, 2023Papua New Guinea has conferred the Companion of the Order of Logohu on PM @narendramodi. It was presented to him by Papua New Guinea Governor General Sir Bob Dadae. pic.twitter.com/0Xki0ibW8D
— PMO India (@PMOIndia) May 22, 2023
ಗೌರವ ಪಡೆದ ಮೊದಲ ಪ್ರಧಾನಿ: ಇಂಡೋ ಪೆಸಿಫಿಕ್ ರಾಷ್ಟ್ರಗಳಾದ ಫಿಜಿ ಮತ್ತು ಪಪುವಾ ನ್ಯೂಗಿನಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಅವರು ಪಾತ್ರರಾದರು. ಇಂದು ಅವರಿಗೆ ಎರಡೂ ರಾಷ್ಟ್ರಗಳು ಗೌರವವನ್ನು ಸಮರ್ಪಣೆ ಮಾಡಿವೆ.
ಫಿಜಿ ಮತ್ತು ಪಪುವಾ ನ್ಯೂಗಿನಿ ಈ ಗೌರವವನ್ನು ಚಿತ್ರಗಳ ಸಮೇತ ಪ್ರಧಾನಿ ಕಚೇರಿ ಟ್ವೀಟ್ ಮಾಡಿಕೊಂಡಿದೆ. "ಪಪುವಾ ನ್ಯೂಗಿನಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಲೋಗೋಹುವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗಿದೆ. ಇದನ್ನು ಆ ದೇಶದ ಗವರ್ನರ್ ಜನರಲ್ ಸರ್ ಬಾಬ್ ದಾಡೆ ಅವರು ಪ್ರದಾನ ಮಾಡಿದರು" ಎಂದಿದೆ.
-
PM @narendramodi has been conferred the highest honour of Fiji, the Companion of the Order of Fiji. It was presented to him by PM @slrabuka. pic.twitter.com/XojxUIKLNm
— PMO India (@PMOIndia) May 22, 2023 " class="align-text-top noRightClick twitterSection" data="
">PM @narendramodi has been conferred the highest honour of Fiji, the Companion of the Order of Fiji. It was presented to him by PM @slrabuka. pic.twitter.com/XojxUIKLNm
— PMO India (@PMOIndia) May 22, 2023PM @narendramodi has been conferred the highest honour of Fiji, the Companion of the Order of Fiji. It was presented to him by PM @slrabuka. pic.twitter.com/XojxUIKLNm
— PMO India (@PMOIndia) May 22, 2023
ಫಿಜಿ ದೇಶದ ಗೌರವ: ಫಿಜಿ ದೇಶ ಕೂಡ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರಧಾನಿ ಮೋದಿಯವರಿಗೆ ನೀಡಿದೆ. "ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ ಪ್ರಶಸ್ತಿಯನ್ನು ಪ್ರಧಾನಮಂತ್ರಿ ಸಿತಿವೇನಿ ರಬುಕಾ ಅವರು ನೀಡಿದರು" ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಕೂಡ ಟ್ವೀಟ್ ಮಾಡಿ, "ಭಾರತ, ಫಿಜಿ ಹಾಗೂ ಪಪುವಾ ನ್ಯೂಗಿನಿಯಾ ದೇಶಗಳು ಹೊಂದಿರುವ ಆಳವಾದ ಸಂಬಂಧದ ಸಂಕೇತವಾಗಿ ಆ ದೇಶಗಳು ತಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಗೌರವಾನ್ವಿತ ಪ್ರಧಾನಿ ಮೋದಿ ಅವರಿಗೆ ನೀಡಿವೆ" ಎಂದು ಬರೆದುಕೊಂಡಿದ್ದಾರೆ.
ಜಪಾನ್‌ನ ಹಿರೋಶಿಮಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮೋದಿ ಅವರು ಪಪುವಾ ನ್ಯೂಗಿನಿಯಾಕ್ಕೆ ಭೇಟಿ ನೀಡಿದರು. ಇಲ್ಲಿ ನಡೆದ ಫಿಪಿಕ್(ಎಫ್ಐಪಿಐಸಿ) ಶೃಂಗದ ಸಹ ಅಧ್ಯಕ್ಷತೆಯನ್ನು ಭಾರತ ವಹಿಸಿದೆ. ಪಪುವಾ ನ್ಯೂಗಿನಿಯಾ ಭೇಟಿಯ ನಂತರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ ಸಿಡ್ನಿಗೆ ಪ್ರಯಾಣಿಸಲಿದ್ದಾರೆ.
ಇದನ್ನೂ ಓದಿ: ಪಪುವಾ ನ್ಯೂಗಿನಿ ಪ್ರಧಾನಿ, ಗವರ್ನರ್ ಜನರಲ್ ಜತೆ ಮೋದಿ ಮಾತುಕತೆ: ಬಾಂಧವ್ಯ ವೃದ್ಧಿಗೆ ಒತ್ತು