ETV Bharat / international

ಅಣ್ವಸ್ತ್ರ ಸಿಡಿತಲೆ ಹೊತ್ತು ಹಾರುವ 'ಘೌರಿ' ಕ್ಷಿಪಣಿ ಪರೀಕ್ಷೆ ನಡೆಸಿದ ಪಾಕಿಸ್ತಾನ - ಪಾಕಿಸ್ತಾನ ಕ್ಷಿಪಣಿ ವ್ಯವಸ್ಥೆ

ಪಾಕಿಸ್ತಾನದ ಕ್ಷಿಪಣಿ ಕಾರ್ಯಕ್ರಮಕ್ಕೆ ಸರಕು ಪೂರೈಸಿದ ಚೀನಾದ ಮೂರು ಕಂಪನಿಗಳಿಗೆ ಅಮೆರಿಕ ನಿರ್ಬಂಧ ವಿಧಿಸಿದ ಬೆನ್ನಲ್ಲೇ ನೆರೆರಾಷ್ಟ್ರ 'ಘೌರಿ' ಎಂಬ ಹೆಸರಿನ ಮತ್ತೊಂದು ಬ್ಯಾಲಿಸ್ಟಿಕ್​ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ನಡೆಸಿದೆ.

ಘೌರಿ ಕ್ಷಿಪಣಿ
ಘೌರಿ ಕ್ಷಿಪಣಿ
author img

By ETV Bharat Karnataka Team

Published : Oct 24, 2023, 3:32 PM IST

ಇಸ್ಲಾಮಾಬಾದ್: ಚೀನಾದ ನೆರವಿನಲ್ಲಿ ತನ್ನ ಸೇನಾ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುತ್ತಿರುವ ಪಾಕಿಸ್ತಾನ ಈಚೆಗಷ್ಟೇ ಅಣ್ವಸ್ತ್ರ ಸಿಡಿತಲೆಗಳನ್ನು ಸಾಗಿಸುವ 'ಬ್ಯಾಲಿಸ್ಟಿಕ್ ಕ್ಷಿಪಣಿ ಅಬಾಬೀಲ್ ವೆಪನ್ ಸಿಸ್ಟಮ್‌'ನ ಹಾರಾಟ ಪರೀಕ್ಷೆ ನಡೆಸಿತ್ತು. ಇದೀಗ ನೆರೆ ರಾಷ್ಟ್ರ ಮಂಗಳವಾರ 'ಘೌರಿ ವೆಪನ್ ಸಿಸ್ಟಮ್‌' ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ವರದಿಯಾಗಿದೆ.

ಸೇನಾಪಡೆಗಳಿಗೆ ಅತಿಮುಖ್ಯವಾಗಿರುವ ಸಿಡಿತಲೆಗಳನ್ನು ಸಾಗಿಸಬಲ್ಲ ಬ್ಯಾಲಿಸ್ಟಿಕ್​ ಕ್ಷಿಪಣಿ ವ್ಯವಸ್ಥೆ ಇದಾಗಿದ್ದು, ಅದರ ನಿಖರ ಗುರಿ ಸಾಧನೆ ಮತ್ತು ತಾಂತ್ರಿಕ ಸತ್ವದ ಪರೀಕ್ಷೆ ನಡೆಸಲಾಗಿದೆ. ಅದು ಯಶಸ್ವಿಯಾಗಿ ಹಾರಾಟ ನಡೆಸಿದೆ ಎಂದು ಪಾಕಿಸ್ತಾನ ಸೇನೆಯ ಭಾಗವಾದ ಆರ್ಮಿ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಎಸ್‌ಎಫ್‌ಸಿ) ಹೇಳಿಕೆಯಲ್ಲಿ ತಿಳಿಸಿದೆ.

ಘೌರಿ ವೆಪನ್ ಸಿಸ್ಟಮ್‌ ಉಡಾವಣೆಗೆ ಅಧ್ಯಕ್ಷ ಆರಿಫ್ ಅಲ್ವಿ, ಹಂಗಾಮಿ ಪ್ರಧಾನ ಮಂತ್ರಿ ಅನ್ವಾರುಲ್ ಹಕ್ ಕಾಕರ್, ಸೇನಾ ಮುಖ್ಯಸ್ಥರು, ಎಎಸ್‌ಎಫ್‌ಸಿ ಕಮಾಂಡರ್, ವ್ಯೂಹಾತ್ಮಕ ಪಡೆಗಳ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸಾಕ್ಷಿಯಾಗಿದ್ದರು. ಇದೇ ವೇಳೆ ಪಾಕಿಸ್ತಾನದ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಲು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ನೀಡಿದ ಕೊಡುಗೆಯನ್ನು ಎಎಸ್‌ಎಫ್‌ಸಿಯ ಕಮಾಂಡರ್ ಶ್ಲಾಘಿಸಿದ್ದಾರೆ.

ಇದಕ್ಕೂ ಮೊದಲು, ಅಕ್ಟೋಬರ್ 18ರಂದು ಪಾಕಿಸ್ತಾನವು, ಅಬಾಬೀಲ್ ವೆಪನ್ ಸಿಸ್ಟಮ್​ ಹೆಸರಿನ ಬ್ಯಾಲಿಸ್ಟಿಕ್ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತು.

ಪಾಕ್​ಗೆ ನೆರವು ನೀಡಿದ ಚೀನಾ ಕಂಪನಿ: ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ಬೇಕಾದ ವಸ್ತುಗಳನ್ನು ಪೂರೈಸಿದ್ದಕ್ಕಾಗಿ ಚೀನಾದ ಮೂರು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ. ಜನರಲ್ ಟೆಕ್ನಾಲಜಿ ಲಿಮಿಟೆಡ್, ಬೀಜಿಂಗ್ ಲುವೊ ಲುವೊ ಟೆಕ್ನಾಲಜಿ ಡೆವಲಪ್‌ಮೆಂಟ್‌ ಕಂಪನಿ ಲಿಮಿಟೆಡ್ ಮತ್ತು ಚಾಂಗ್ಝೌ ಉಟೆಕ್ ಕಾಂಪೋಸಿಟ್ ಕಂಪನಿ ಲಿಮಿಟೆಡ್ ನಿರ್ಬಂಧಕ್ಕೆ ಗುರಿಯಾದ ಕಂಪನಿಗಳು.

ಜಾಗತಿಕ ನಿಶ್ಶಸ್ತ್ರೀಕರಣದ ಭಾಗವಾಗಿ ಈ ನಿರ್ಬಂಧಗಳನ್ನು ಹೇರಲಾಗಿದೆ. ಈಗ ಹೇರಲಾದ ನಿರ್ಬಂಧಗಳು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣ, ಅವುಗಳ ವಿತರಣಾ ವಿಧಾನಗಳು ಮತ್ತು ಸಂಬಂಧಿತ ಖರೀದಿ ಚಟುವಟಿಕೆಗಳ ವಿರುದ್ಧ ಅಮೆರಿಕ ಬದ್ಧತೆಯಿಂದ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದರು.

ಪಾಕಿಸ್ತಾನದ ಮಿತ್ರರಾಷ್ಟ್ರವಾದ ಚೀನಾ, ಮಿಲಿಟರಿ ಆಧುನೀಕರಣ, ಸೇನೆಗೆ ಬೇಕಾದ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಸಾಧನಗಳ ಮುಖ್ಯ ಪೂರೈಕೆದಾರ ರಾಷ್ಟ್ರವಾಗಿದೆ.

ಇದನ್ನೂ ಓದಿ: ದಟ್ಟ ಮಂಜಿಗೆ ಬೃಹತ್​ ಸರಣಿ ಅಪಘಾತ: 7 ಮಂದಿ ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.