ಇಸ್ಲಾಮಾಬಾದ್: ದೇಶದಲ್ಲಿ ಹೊಸದಾಗಿ ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂಬ ಒತ್ತಾಯದ ಮಧ್ಯೆಯೇ ಉಚ್ಛಾಟಿತ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ವ್ಯಾಪಕ ಹಿಂಸಾಚಾರಕ್ಕೂ ತಿರುಗಿದೆ.
-
Pakistan on the boil as Imran Khan's 'march to chaos' continues
— ANI Digital (@ani_digital) May 25, 2022 " class="align-text-top noRightClick twitterSection" data="
Read @ANI Story | https://t.co/a2J7XOh0y5#ImranKhan #Islamabadmarch #Pakistan pic.twitter.com/fMPGWrMuhB
">Pakistan on the boil as Imran Khan's 'march to chaos' continues
— ANI Digital (@ani_digital) May 25, 2022
Read @ANI Story | https://t.co/a2J7XOh0y5#ImranKhan #Islamabadmarch #Pakistan pic.twitter.com/fMPGWrMuhBPakistan on the boil as Imran Khan's 'march to chaos' continues
— ANI Digital (@ani_digital) May 25, 2022
Read @ANI Story | https://t.co/a2J7XOh0y5#ImranKhan #Islamabadmarch #Pakistan pic.twitter.com/fMPGWrMuhB
ಪಾಕ್‌ನ ಇತ್ತೀಚೆಗಿನ ಬೆಳವಣಿಗೆಗಳು:
- ದೇಶದಲ್ಲಿ ಹೊಸದಾಗಿ ಸಾರ್ವತ್ರಿಕ ಚುನಾವಣೆ ನಡೆಸಬೇಕು. ಇದಕ್ಕೆ ಬೀದಿಗಿಳಿದು ಪ್ರತಿಭಟನೆ ನಡೆಸುವಂತೆ ಇಮ್ರಾನ್ ಖಾನ್ ತನ್ನ ಪಕ್ಷದ ಬೆಂಬಲಿಗರಿಗೆ ಕರೆ ಕೊಟ್ಟಿದ್ದರು. ಇನ್ನೊಂದೆಡೆ, ಪ್ರತಿಭಟನಾ ರ್ಯಾಲಿ ನಡೆಸಲು ಪಾಕ್ ಸುಪ್ರೀಂಕೋರ್ಟ್ ಕೂಡಾ ಅನುಮತಿಸಿದೆ. ಮತ್ತು ಇಮ್ರಾನ್ ಖಾನ್ ಬಂಧಿಸಲು ಆದೇಶ ನೀಡಲು ನಿರಾಕರಿಸಿದ ನಂತರದಲ್ಲಿ ಈ ಬೆಳವಣಿಗೆ ನಡೆದಿದೆ.
- ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ರಸ್ತೆಗಳಲ್ಲಿ ಹಾಕಿರುವ ಬ್ಯಾರಿಕೇಡ್‌ಗಳನ್ನು ತೆಗೆದು ಹಾಕಿದರು. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಪಿಟಿಐ ಬೆಂಬಲಿಗರ ಒಂದು ಗುಂಪು ಚೀನಾ ಚೌಕ್ ಮೆಟ್ರೋ ಸ್ಟೇಷನ್‌ಗೆ ಬೆಂಕಿ ಹಚ್ಚಿದ್ದಲ್ಲದೆ ಅಲ್ಲಿದ್ದ ಗಿಡಗಳನ್ನು ಕಿತ್ತೆಸೆದರು.
- ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಪೊಲೀಸರು ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನೂರಾರು ಕಾರ್ಯಕರ್ತರನ್ನು ಬಂಧಿಸಿದರು. ಅದೇ ರೀತಿ ಪಕ್ಷದ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗುವುದನ್ನು ತಡೆದರು. ಈ ಸಂದರ್ಭ ಹಲವು ಮಹಿಳೆಯರು, ಮಕ್ಕಳು ಗಾಯಗೊಂಡರು ಎಂದು ಪಾಕ್‌ನ ಸುದ್ದಿ ವಾಹಿನಿಗಳು ವರದಿ ಮಾಡಿವೆ.
-
Told you guys KP imran khan ka GHQ hai.pic.twitter.com/gLgYU5wUsy
— Mr Shelby ™ (@Farrukh_Shahzad) May 25, 2022 " class="align-text-top noRightClick twitterSection" data="
">Told you guys KP imran khan ka GHQ hai.pic.twitter.com/gLgYU5wUsy
— Mr Shelby ™ (@Farrukh_Shahzad) May 25, 2022Told you guys KP imran khan ka GHQ hai.pic.twitter.com/gLgYU5wUsy
— Mr Shelby ™ (@Farrukh_Shahzad) May 25, 2022
-