ETV Bharat / international

ಇಮ್ರಾನ್​ ಖಾನ್​ ಬಂಧನ ಹಿನ್ನೆಲೆ: ಹಿಂಸಾಚಾರ ತಡೆಗೆ ಮಿಲಿಟರಿ ಕರೆಸಿದ ಸರ್ಕಾರ - ಪ್ರಧಾನಿ ಶಹಬಾಜ್ ಷರೀಫ್

ಪಾಕ್ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಬಂಧನದ ನಂತರ ರಾಷ್ಟ್ರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನೆ ತಡೆಯಲು ಸರ್ಕಾರ ಮಿಲಿಟರಿಯ ಕರೆಯಿಸಿದೆ.

pakistan
ಪಾಕಿಸ್ತಾನ ಹಿಂಸಾಚಾರ
author img

By

Published : May 11, 2023, 11:46 AM IST

ಇಸ್ಲಾಮಾಬಾದ್ (ಪಾಕಿಸ್ತಾನ): ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಬಂಧನದ ನಂತರ ಪಾಕಿಸ್ತಾನದಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರದ ಅಲೆ ಮತ್ತಷ್ಟು ವ್ಯಾಪಿಸುವುದನ್ನು ತಡೆಗಟ್ಟುವುದಲ್ಲದೇ, ನಿಯಂತ್ರಣಕ್ಕೆ ತರಲು ಹಿಂಸಾಚಾರ ನಡೆದ ಪ್ರದೇಶಗಳಲ್ಲಿ ಪಾಕಿಸ್ತಾನ ಸರ್ಕಾರ ಬುಧವಾರ ಮಿಲಿಟರಿ ಕರೆಯಿಸಿದೆ.

8 ದಿನ ಎನ್​ಎಬಿ ವಶಕ್ಕೆ ಖಾನ್​: ಅಲ್ ​- ಖಾದಿರ್​ ಟ್ರಸ್ಟ್​ ಹೆಸರಲ್ಲಿ ರಾಷ್ಟ್ರದ ಖಜಾನೆಯ ಸುಮಾರು 5000, ಕೋಟಿ ಪಾಕ್​ ರೂಪಾಯಿಯನ್ನು ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್​ರನ್ನು 14 ದಿನಗಳು ವಶಕ್ಕೆ ನೀಡುವಂತೆ ಎನ್ಎಬಿ (national accountability bureau) ಪರ ವಕೀಲರು ಮನವಿ ಮಾಡಿದರು.

ಆದರೆ, ಇದನ್ನು ವಿರೋಧಿಸಿದ ಖಾನ್ ಅವರ ವಕೀಲರು ಬಿಡುಗಡೆ ಮಾಡುವಂತೆ ನ್ಯಾಯಧೀಶರಿಗೆ ಮನವಿ ಮಾಡಿದರು. ವಾದ ಪ್ರತಿವಾದ ಆಲಿಸಿದ ನಂತರ ನ್ಯಾಯಾಲಯ, ಇಮ್ರಾನ್​ ಖಾನ್ ಅವರನ್ನು 8 ದಿನಗಳು ಎನ್​ಎಬಿ ವಶಕ್ಕೆ ಒಪ್ಪಿಸಿದೆ. ಇಷ್ಟಾದರೂ ಸುಮ್ಮನಿರದ ಖಾನ್​ ಅವರ ಪಿಟಿಐ ಪಕ್ಷವು ಬುಧವಾರ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದೆ.

ಇನ್ನು ನಿನ್ನೆ ಪ್ರಧಾನಿ ಶಹಬಾಜ್ ಷರೀಫ್ ನೇತೃತ್ವದಲ್ಲಿ ಕ್ಯಾಬಿನೆಟ್​​ ಸಭೆಯು ನಡೆದಿದ್ದು, ಪ್ರಧಾನಿ ರಾಷ್ಟ್ರ ಉದ್ದೇಶಿಸಿ ಮಾತನಾಡಿದ್ದಾರೆ. ಸಭೆಯಲ್ಲಿ ಪ್ರಧಾನಿ, ಇಮ್ರಾನ್​ ಖಾನ್​ ಬಂಧನ ವಿರೋಧಿಸಿ ಪಾಕಿಸ್ತಾನ್​ ತೆಹ್ರೀಕ್​-ಇ-ಇನ್ಸಾಫ್​ (ಪಿಟಿಐ) ಪಕ್ಷದ ಕಾರ್ಯಕರ್ತರು ಮತ್ತು ಖಾನ್ ಬೆಂಬಲಿಗರು ತೀವ್ರ ಪ್ರತಿಭಟನೆ ಅಲ್ಲದೇ ಹಿಂಸಾಚಾರ ಮುಂದುವರೆಸಿದ್ದಾರೆ. ಇದರಿಂದ ದೇಶದ ಅಶಾಂತಿ ಕೆಟ್ಟಿರುವುದಲ್ಲದೇ, ಖಾನ್ ಬೆಂಬಲಿಗರು ಅನೇಕ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ಹಾನಿಗೊಳಿಸಿದಿದ್ದಾರೆ.

ಈ ಹಿಂಸಾಚಾರ ತಡೆಯಲು ರಾಜಧಾನಿಯಾದ ಇಸ್ಲಾಮಾಬಾದ್​, ಪಂಜಾಬ್​ನ ಜನನಿಬೀಡ ಪ್ರದೇಶದ, ವಾಯುವ್ಯದ ಅತ್ಯಂತ ಸೂಕ್ಷ್ಮ ಪ್ರಾಂತ್ಯಗಳಲ್ಲಿ ಮಿಲಿಟರಿ ನಿಯೋಜಿಸಲು ಸಭೆಯಲ್ಲಿ ಮನವಿ ಮಾಡಲಾಯಿತು. ಮಂಗಳವಾರ ಖಾನ್​ ಬಂಧನದ ನಂತರ ಇಸ್ಲಾಮಾಬಾದ್ ಮತ್ತು ಇತರ ಪ್ರಮುಖ ನಗರಗಳಲ್ಲಿ ಬೆಂಬಲಿಗರು ರಸ್ತೆ ತಡೆದರು, 14 ಸರ್ಕಾರಿ ಕಟ್ಟಡಗಳಿಗೆ ಮತ್ತು 21 ಪೊಲೀಸ್​ ವಾಹನಗಳಿಗೆ ಹಾಗೂ ಸರ್ಕಾರಿ ನಿಯಂತ್ರಣದ ರೇಡಿಯೋ ಪಾಕಿಸ್ತಾನ ಕಟ್ಟಡಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ.

ಅಲ್ಲದೇ ಬೆಂಬಲಿಗರ ಹಿಂಸಾತ್ಮಕ ಪ್ರತಿಭಟನೆಯಿಂದ ಪಾಕಿಸ್ತಾನ ಅಸೋಸಿಯೇಟೆಡ್​ ಪ್ರೆಸ್​ ಕಚೇರಿ ಧ್ವಂಸಗೊಂಡಿದೆ. ಇಂತಹ ಹಿಂಸಾಚಾರ ಪಾಕಿಸ್ತಾನ ಎಂದಿಗೂ ನೋಡಿರಲಿಲ್ಲ. ರೋಗಿಗಳಿದ್ದ ಆ್ಯಂಬುಲೆನ್ಸ್​ಗಳಿಂದ ಅವರನ್ನು ಹೊರತೆಗದು ಆ್ಯಂಬುಲೆನ್ಸ್​ಗೆ ಬೆಂಕಿ ಹಚ್ಚಲಾಯಿತು. ಈ ಹಿಂಸಾಚಾರವನ್ನು ಎಂದಿಗೂ ಕ್ಷಮಿಸಲಾರದು ಎಂದು ಕ್ಯಾಬಿನೆಟ್​ ಸಭೆಯ ನಂತರ ಪ್ರಧಾನಿ ಹೇಳಿದರು. ಮುಂದುವರಿದು ನಮ್ಮ ಸೈನ್ಯವು ಇಲ್ಲಿವರೆಗೆ ತಾಳ್ಮೆಯಿಂದ ವರ್ತಿಸಿದೆ. ಆದರೆ, ಈ ಪ್ರತಿಭಟನೆ ಹಿಂಸಚಾರದ ಹೋರಾಟ ಮುಂದುವರಿದರೆ ಯಾರು ಮುಖ್ಯ ಕಾರಣರಾಗುತ್ತಾರೋ ಅವರ ಮೇಲೆ ಕಟ್ಟು ನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.

ಪೂರ್ವ ಪಂಜಾಬ್​ನ ಪ್ರಾಂತ್ಯದಲ್ಲಿ, ಪ್ರತಿಭಟನಾಕಾರರೊಂದಿಗಿನ ಘರ್ಷಣೆಯಲ್ಲಿ 157 ಪೊಲೀಸರು ಗಾಯಗೊಂಡಿದ್ದಾರೆ. ಅಲ್ಲಿನ ಸ್ಥಳೀಯ ಸರ್ಕಾರ ಇದರಿಂದ ಹೆಚ್ಚಿನ ಸೇನೆಯನ್ನು ನಿಯೋಜಿಸುವಂತೆ ಕೇಳಿಕೊಂಡಿದ್ದಾರೆ. ಇನ್ನು ಪಿಟಿಐ ಪ್ರಧಾನ ಕಾರ್ಯದರ್ಶಿ ಅಸಾದ್​ ಉಮರ್, ಉಪಾಧ್ಯಕ್ಷ ಶಾ ಮಹಮೂದ್​ ಖೂರೇಷಿ, ಪಂಜಾಬ್​ ಮಾಜಿ ಗವರ್ನರ್​ ಉಮರ್​ ಸರ್ಫರಾಜ್​ ಚೀಮಾ ಅವರನ್ನು ಬುಧವಾರ ಬಂಧಿಸಲಾಗಿದೆ. ಜೊತೆಗೆ ಖಾನ್ 945 ಬೆಂಬಲಿಗರನ್ನು ಪೊಲೀಸರು ಮಂಗಳವಾರವೇ ಬಂಧಿಸಿದ್ದಾರೆ.

ಇದನ್ನು ಓದಿ: ಪಾಕಿಸ್ತಾನದಲ್ಲಿ ಅನಿರ್ದಿಷ್ಟಾವಧಿಗೆ ಇಂಟರ್​ನೆಟ್​ ಬಂದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.