ETV Bharat / international

'ಪ್ರಧಾನಿ ಹುದ್ದೆ ಕಳೆದುಕೊಂಡ ಇಮ್ರಾನ್​ ಖಾನ್​ ಕಪಿಲ್​ ಶರ್ಮಾ ಶೋ ಸೇರಲಿ': ಮಾಜಿ ಪತ್ನಿ ಗೇಲಿ - ಇಮ್ರಾನ್​ ಖಾನ್​ ಬಗ್ಗೆ ಮಾಜಿ ಪತ್ನಿ ಗೇಲಿ

ಪ್ರಧಾನಿ ಹುದ್ದೆ ಕಳೆದುಕೊಂಡ ಪಾಕ್​ನ ಇಮ್ರಾನ್​ ಖಾನ್​ ಪರಿಸ್ಥಿತಿಯನ್ನು ಛೇಡಿಸಿರುವ ಅವರ ಮಾಜಿ ಪತ್ನಿ ರೆಹಮ್​ ಖಾನ್​, ಇಮ್ರಾನ್​ ಹಾಸ್ಯ ಮಾಡುವಲ್ಲಿ ಚತುರರು. ಅವರು ಕಪಿಲ್ ಶರ್ಮಾ ಶೋನಲ್ಲಿ ಸೇರಬಹುದು ಎಂದಿದ್ದಾರೆ.

pakistan-former
ಮಾಜಿ ಪತ್ನಿ ಗೇಲಿ
author img

By

Published : Apr 14, 2022, 5:22 PM IST

ಇಸ್ಲಾಮಾಬಾದ್: ಪಾಕಿಸ್ತಾನದ ಇಮ್ರಾನ್​ ಖಾನ್​ ಪ್ರಧಾನಿ ಹುದ್ದೆ ಕಳೆದುಕೊಂಡಿದ್ದಕ್ಕೆ ಅವರ ಮಾಜಿ ಪತ್ನಿ ರೆಹಮ್​ ಖಾನ್​ ವ್ಯಂಗ್ಯವಾಡಿದ್ದು, ಇಮ್ರಾನ್​ರನ್ನು ಕಪಿಲ್​ ಶರ್ಮಾ ಶೋನಲ್ಲಿ ಸೇರಿಸಿಕೊಳ್ಳಲು ಸಲಹೆ ನೀಡಿದ್ದಾರೆ. 'ಇಮ್ರಾನ್​ ಖಾನ್​ ಹಾಸ್ಯ ಮಾಡುವಲ್ಲಿ ಚತುರರು. ಹೀಗಾಗಿ ಅವರನ್ನು ಭಾರತದಲ್ಲಿ ನಡೆಯುವ ಕಪಿಲ್​ ಶರ್ಮಾರ ಶೋನಲ್ಲಿ ನವಜೋತ್​ ಸಿಂಗ್​ ಸಿಧು ಬದಲು ಇವರನ್ನೇ ಕೂರಿಸಿ' ಎಂದಿದ್ದಾರೆ.

ಇಮ್ರಾನ್ ಖಾನ್‌ಗೆ ಬಾಲಿವುಡ್‌ನಲ್ಲಿ ಅವಕಾಶ ನೀಡಬೇಕು. ಅವರು ಆಸ್ಕರ್​ ಅವಾರ್ಡ್​ ವಿನ್ನಿಂಗ್​ ನಟನೆ ಮಾಡಬಲ್ಲರು. ಅಲ್ಲದೇ, ಕಾಮಿಡಿಯಲ್ಲಿ ಪ್ರತಿಭಾವಂತರು. ಕಪಿಲ್ ಶರ್ಮಾ ಶೋನಲ್ಲಿ ಪಾಜಿ (ನವಜೋತ್ ಸಿಂಗ್ ಸಿಧು) ಸ್ಥಾನದಲ್ಲಿ ಇಮ್ರಾನ್ ಖಾನ್​ರನ್ನು ಕೂರಿಸಬಹುದು. ಹಾಗೆಯೇ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜೊತೆ ಇಮ್ರಾನ್ ಖಾನ್‌ಗೆ ಉತ್ತಮ ಸಂಬಂಧ ಇದೆ. ಅವರ ನಡುವೆ ಉತ್ತಮ ಸ್ನೇಹವಿದೆ. ಇಮ್ರಾನ್ ಇತ್ತೀಚೆಗೆ ಕವಿತೆಯನ್ನು ಕೂಡ ಬರೆಯುತ್ತಿದ್ದಾರೆ. ಇದು ಶೋಗೆ ನೆರವಾಗಬಹುದು ಎಂದು ಕಟಕಿಯಾಡಿದ್ದಾರೆ.

'ಇಮ್ರಾನ್ ಖಾನ್ ಭ್ರಮೆಯಲ್ಲಿದ್ದಾರೆ': ಇಮ್ರಾನ್ ಖಾನ್ ಸಂಪೂರ್ಣ ಭ್ರಮೆಯಲ್ಲಿದ್ದಾರೆ. ಅವರು ಯಾರ ಸಲಹೆಯನ್ನೂ ಆಲಿಸುವುದಿಲ್ಲ. ನನ್ನ ಸಲಹೆಗಳನ್ನು ಕೇಳಿದ್ದರೆ, ಬಹುಶಃ ನಾನು ಅವರನ್ನು ಮತ್ತೆ ವರಿಸುತ್ತಿದ್ದೆ. ಇತರರು ಕೂಡಾ ಇಮ್ರಾನ್​ರನ್ನು ಬಿಟ್ಟು ಹೋಗುತ್ತಿರಲಿಲ್ಲ. ಅವರೊಬ್ಬ ಬರೀ ಪ್ರಚಾರ ಪ್ರಿಯ ವ್ಯಕ್ತಿ. ಮುಖಸ್ತುತಿಯನ್ನೇ ಅವರು ಬಯಸುತ್ತಾರೆ ಎಂದು ರೆಹಮ್​ ಖಾನ್​ ಛೇಡಿಸಿದ್ದಾರೆ.

ಇದನ್ನೂ ಓದಿ: 'ಮದುವೆಯಾದ ಹೊಸತರಲ್ಲೇ ಸಂತಾನಹರಣ': ಕಾಂಗ್ರೆಸ್​ ವಿರುದ್ಧ ಹಾರ್ದಿಕ್​ ಪಟೇಲ್​ ಬೇಸರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.