ETV Bharat / international

ಪಾಕ್ ಮಾಜಿ ಪ್ರಧಾನಿ ಇಮ್ರಾನ್​ಗೆ ಏಳು ಪ್ರಕರಣಗಳಲ್ಲಿ ಜಾಮೀನು - ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್

ಹಲವಾರು ಪ್ರಕರಣಗಳಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಏಳು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ಪಾಕ್ ಮಾಜಿ ಪ್ರಧಾನಿ ಇಮ್ರಾನ್​ಗೆ ಏಳು ಪ್ರಕರಣಗಳಲ್ಲಿ ಜಾಮೀನು
Pakistan court grants ex-PM Imran Khan bail in 7 cases relating to Judicial Complex clashes
author img

By

Published : Mar 27, 2023, 6:11 PM IST

ಇಸ್ಲಾಮಾಬಾದ್ (ಪಾಕಿಸ್ತಾನ) : ಇಲ್ಲಿನ ಫೆಡರಲ್ ನ್ಯಾಯಾಂಗ ಸಂಕೀರ್ಣದಲ್ಲಿ (ಎಫ್‌ಜೆಸಿ) ಮಾರ್ಚ್ 18 ರಂದು ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ವಿರುದ್ಧ ದಾಖಲಾಗಿರುವ ಏಳು ಪ್ರಕರಣಗಳಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಜಾಮೀನು ನೀಡಿದೆ. ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್, ಗೋಲ್ರಾ, ಬಾರಾ ಕಹು, ರಾಮ್ನಾ, ಖನ್ನಾ ಮತ್ತು ಸಿಟಿಡಿ ಪೊಲೀಸ್ ಠಾಣೆಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಏಳು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕೆಂದು ಸೋಮವಾರ ಇಸ್ಲಾಮಾಬಾದ್ ಹೈಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ಕೋರಿದ್ದರು.

ಈ ಪ್ರಕರಣಗಳು ಮಾರ್ಚ್ 18 ರಂದು ಫೆಡರಲ್ ಕೋರ್ಟ್ ಕಾಂಪ್ಲೆಕ್ಸ್‌ನ ಹೊರಗೆ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದ್ದಾಗಿವೆ. ಅವತ್ತು ಇಮ್ರಾನ್ ತೋಷಖಾನಾ ಪ್ರಕರಣದಲ್ಲಿ ಸಾಕ್ಷ್ಯ ಹೇಳಿದ್ದರು. ಇಸ್ಲಾಮಾಬಾದ್ ಹೈಕೋರ್ಟ್ ಅಧ್ಯಕ್ಷ, ನ್ಯಾಯಮೂರ್ತಿ ಆಮರ್ ಫಾರೂಕ್ ಮತ್ತು ನ್ಯಾಯಾಧೀಶ ಮಿಯಾಂಗುಲ್ ಹಸನ್ ಔರಂಗಜೇಬ್ ಅವರನ್ನು ಒಳಗೊಂಡ ನ್ಯಾಯಪೀಠವು ಇಮ್ರಾನ್ ಅವರ ಅರ್ಜಿಯ ವಿಚಾರಣೆ ನಡೆಸಿತು. ಒಂದು ವೇಳೆ ಬಂಧಿತರಾದರೆ ಇಮ್ರಾನ್ ಖಾನ್ ಭರಿಸಲಾಗದ ನಷ್ಟ ಅನುಭವಿಸುವಂತಾಗುತ್ತದೆ ಎಂದು ಇಮ್ರಾನ್ ಪರ ವಕೀಲ ಸಲ್ಮಾನ್ ಸಫ್ದರ್ ನ್ಯಾಯಾಲಯಕ್ಕೆ ತಿಳಿಸಿದರು.

ಇದಲ್ಲದೆ, ಅರ್ಜಿದಾರರು ದೇಶದ ಏಕೈಕ ಅತಿದೊಡ್ಡ ರಾಜಕೀಯ ಪಕ್ಷದ ಮುಖ್ಯಸ್ಥರಾಗಿರುವುದರಿಂದ, ಅವರಿಗೆ ನಿರೀಕ್ಷಣಾ ಜಾಮೀನು ನೀಡದಿದ್ದರೆ ಅವರ ರಾಜಕೀಯ ವಿರೋಧಿಗಳು ಅವರ ವಿರುದ್ಧ ಸೇಡಿನ ಕ್ರಮ ಕೈಗೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ವಾದಿಸಿದರು. ಇಮ್ರಾನ್ ಖಾನ್ ಅವರ ಕಾರನ್ನು ಬೃಹತ್ ಸಂಖ್ಯೆಯ ಇಸ್ಲಾಮಾಬಾದ್ ಪೊಲೀಸರು ಸುತ್ತುವರೆದಿರುವ ಹಾಗೂ ಪೊಲೀಸರ ಭದ್ರತೆಯ ಮಧ್ಯೆ ಇಮ್ರಾನ್ ನ್ಯಾಯಾಲಯದ ಒಳಗೆ ಹೋಗುತ್ತಿರುವ ದೃಶ್ಯದ ವೀಡಿಯೊ ಒಂದನ್ನು ಪಿಟಿಐನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಜಾಮೀನು ಅರ್ಜಿ ವಿಚಾರಣೆಯ ಮುನ್ನ ಇಸ್ಲಾಮಾಬಾದ್ ಹೈಕೋರ್ಟ್​ಗೆ ಹೋಗುತ್ತಿದ್ದ ಇಮ್ರಾನ್ ಖಾನ್ ಅವರ ಫೋಟೊಗ್ರಾಫರ್ ಹಾಗೂ ಇನ್ನಿತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪಿಟಿಐ ನಾಯಕಿ ಶಿರೀನ್ ಮಜಾರಿ ಆರೋಪಿಸಿದರು. ಈ ನಾಲ್ವರು ನಿರಾಯುಧ ನಾಗರಿಕರು, ಅವರಲ್ಲಿ ಒಬ್ಬರು ನಮ್ಮ ಅಧಿಕೃತ ಛಾಯಾಗ್ರಾಹಕ. ನಾವು ಇಮ್ರಾನ್ ಖಾನ್ ಕಾರಿನೊಂದಿಗೆ ನ್ಯಾಯಾಲಯಕ್ಕೆ ಹೋಗುತ್ತಿದ್ದಾಗ ಮತ್ತು ಯಾವುದೇ ಅಪರಾಧ ಮಾಡದೆ ಇದ್ದಾಗ ಬಂಧಿಸಲಾಯಿತು. ಈಗ ನಮ್ಮನ್ನು ರಾಮ್ನಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿದೆ. ಐಸಿಟಿ ಪೊಲೀಸರನ್ನು ಟೀಕೆ ಮಾಡಿದ್ದಕ್ಕಾಗಿ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಶಿರೀನ್ ಟ್ವೀಟ್ ಮಾಡಿದ್ದಾರೆ.

ಪಿಟಿಐ ಪಕ್ಷದ ಬೆಂಬಲಿಗರನ್ನು ಸಾಮಾನ್ಯ ಉಡುಪು ಧರಿಸಿದ್ದ ಪೊಲೀಸರು ಎಳೆದೊಯ್ಯುವ ವೀಡಿಯೊಗಳನ್ನು ಅಧಿಕೃತ ಪಿಟಿಐ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇಂದು ಇಸ್ಲಾಮಾಬಾದ್‌ನಲ್ಲಿ ಪಿಟಿಐ ಕಾರ್ಯಕರ್ತರನ್ನು ಬಂಧಿಸಲಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಸಮವಸ್ತ್ರವನ್ನೂ ಧರಿಸದ ಯಾರೋ ನಮ್ಮನ್ನು ಜೈಲಿಗೆ ಕರೆದೊಯ್ಯುತ್ತಿದ್ದಾರೆ ಎಂದು ಪಕ್ಷ ಪ್ರಶ್ನೆ ಮಾಡಿದೆ. ಏತನ್ಮಧ್ಯೆ ಪೊಲೀಸರು ಕನಿಷ್ಠ 13 ಪಿಟಿಐ ಬೆಂಬಲಿಗರನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಹಸನ್ ವಾಟ್ಟೊ ತಿಳಿಸಿದ್ದಾರೆ.

ಇದನ್ನೂ ಓದಿ : ಇಮ್ರಾನ್‌​ ಅಥವಾ ಅವರ​ ಪಕ್ಷವನ್ನು​ ಪಾಕಿಸ್ತಾನ ರಾಜಕಾರಣದಿಂದ ಹೊರಹಾಕಬೇಕು: ಪಾಕ್​ ಆಂತರಿಕ ಸಚಿವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.