ETV Bharat / international

ಬ್ರಿಕ್ಸ್‌ ಸದಸ್ಯತ್ವಕ್ಕೆ ಅರ್ಜಿ ಹಾಕಿದ ಪಾಕಿಸ್ತಾನ

Pakistan apply for BRICS membership: ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಮೂಲಕ 2010ರಲ್ಲಿ ಬ್ರಿಕ್ಸ್ ರಚನೆಯಾಯಿತು. ಜಾಗತಿಕ ಜನಸಂಖ್ಯೆಯಲ್ಲಿ ಈ ಐದು ದೇಶಗಳ ಪಾಲ್ಗೊಳ್ಳುವಿಕೆ ಶೇ.41, ಜಾಗತಿಕ ಅಭಿವೃದ್ಧಿಯಲ್ಲಿ ಶೇ.24 ಮತ್ತು ಜಾಗತಿಕ ವ್ಯಾಪಾರದಲ್ಲಿ ಶೇ.16ರಷ್ಟು ಪಾಲು ಹೊಂದಿವೆ.

BRICS membership
ಬ್ರಿಕ್ಸ್‌ನ ಸದಸ್ಯತ್ವ ಪಡೆಯಲು ಅರ್ಜಿ ಸಲ್ಲಿಸಿದ ಪಾಕಿಸ್ತಾನ: ರಷ್ಯಾದ ಸುದ್ದಿ ಸಂಸ್ಥೆ ಟಾಸ್​ ಹೇಳಿಕೆ
author img

By ANI

Published : Nov 23, 2023, 11:00 AM IST

ಮಾಸ್ಕೋ(ರಷ್ಯಾ): ಪ್ರಾದೇಶಿಕ ಮತ್ತು ಜಾಗತಿಕ ಸಂಸ್ಥೆಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಪಾಕಿಸ್ತಾನ ಬ್ರಿಕ್ಸ್‌ನ ಸದಸ್ಯತ್ವ ಪಡೆದುಕೊಳ್ಳಲು ಮುಂದಾಗಿದೆ. ರಷ್ಯಾದ ಸುದ್ದಿ ಸಂಸ್ಥೆ ಟಾಸ್ ವರದಿಯ ಪ್ರಕಾರ, ರಷ್ಯಾದಲ್ಲಿ ಹೊಸದಾಗಿ ನೇಮಕಗೊಂಡ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ ತಮ್ಮ ದೇಶವು 2024ರಲ್ಲಿ ಬ್ರಿಕ್ಸ್‌ನ ಸದಸ್ಯರಾಗಲು ಅರ್ಜಿ ಸಲ್ಲಿಸಿದೆ ಎಂದು ಹೇಳಿದ್ದಾರೆ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದಿಂದ 2010ರಲ್ಲಿ ಬ್ರಿಕ್ಸ್ ರಚನೆಯಾಯಿತು. ಈ ದೇಶಗಳ ಮೊದಲ ಅಕ್ಷರಗಳನ್ನು ಸೇರಿಸಿ, ಬ್ರಿಕ್ಸ್ ಎಂಬ ಹೆಸರನ್ನಿಡಲಾಯಿತು. ಈ ದೇಶಗಳು ಜಾಗತಿಕ ಜನಸಂಖ್ಯೆಯಲ್ಲಿ ಶೇ 41ರಷ್ಟು ಪಾಲು ಹೊಂದಿವೆ. ಜಾಗತಿಕ ಅಭಿವೃದ್ಧಿಯಲ್ಲಿ ಶೇ 24ರಷ್ಟು ಪಾಲು ಮತ್ತು ಜಾಗತಿಕ ವ್ಯಾಪಾರದಲ್ಲಿ ಶೇ 16ರಷ್ಟು ಪಾಲುದಾರಿಕೆ ಹೊಂದಿವೆ. ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ, ಸಂಘಟನೆಯಲ್ಲಿ ಇನ್ನೂ ಆರು ದೇಶಗಳನ್ನು ಸೇರಿಸಲು ನಿರ್ಧರಿಸಲಾಗಿದೆ.

ಹೊಸದಾಗಿ ಸೇರ್ಪಡೆಯಾಯಾಗುವ 6 ರಾಷ್ಟ್ರಗಳು: ಮುಂದಿನ ವರ್ಷ ಬ್ರಿಕ್ಸ್​ನ ಸದಸ್ಯತ್ವ ಪಡೆದ ರಾಷ್ಟ್ರಗಳ ಸಂಖ್ಯೆ 11ಕ್ಕೆ ಏರಿಕೆಯಾಗಲಿದೆ. ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಈ ಆರು ದೇಶಗಳಾಗಿವೆ. ಈ ದೇಶಗಳ ಸದಸ್ಯತ್ವವು ಜನವರಿ 1, 2024ರಿಂದ ಜಾರಿಗೆ ಬರಲಿದೆ. ಅಂದರೆ, ಮುಂದಿನ ವರ್ಷದ ಆರಂಭದಿಂದ ಬ್ರಿಕ್ಸ್‌ನಲ್ಲಿ ಒಟ್ಟು 11 ಸದಸ್ಯರು ಇರಲಿದ್ದಾರೆ. ರಷ್ಯಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ, 2024ರಲ್ಲಿ ರಷ್ಯಾ ಅಧ್ಯಕ್ಷತೆ ವಹಿಸಲಿದೆ. ಇದರಿಂದ ರಷ್ಯಾದ ಬೆಂಬಲದೊಂದಿಗೆ ನಮ್ಮ ದೇಶವು ಬ್ರಿಕ್ಸ್​ ಸದಸ್ಯರಾಗಬಹುದು'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಪಾಕಿಸ್ತಾನವು ಈ ಪ್ರಮುಖ ಸಂಘಟನೆಯ ಭಾಗವಾಗಲು ಬಯಸುತ್ತದೆ. ನಾವು ಸಾಮಾನ್ಯವಾಗಿ ಪಾಕಿಸ್ತಾನದ ಸದಸ್ಯತ್ವಕ್ಕೆ ಮತ್ತು ನಿರ್ದಿಷ್ಟವಾಗಿ ರಷ್ಯಾದ ಒಕ್ಕೂಟಕ್ಕೆ ಬೆಂಬಲ ನೀಡಲು ಸದಸ್ಯ ರಾಷ್ಟ್ರಗಳನ್ನು ಸಂಪರ್ಕಿಸುವ ಪ್ರಕ್ರಿಯೆಯಲ್ಲಿದ್ದೇವೆ" ಎಂದು ತಿಳಿಸಿದ್ದಾರೆ.

ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆ ರಿಯಾಬ್ಕೊವ್ ಹೇಳಿಕೆ ಆಧರಿಸಿ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯು, 2024ರಲ್ಲಿ ಕಜಾನ್‌ನಲ್ಲಿ ನಡೆಯಲಿರುವ ಶೃಂಗಸಭೆಗೂ ಮುನ್ನವೇ ಅರ್ಜಿ ಸಲ್ಲಿಸಿದ ಪಾಕಿಸ್ತಾನಕ್ಕೆ ಸದಸ್ಯತ್ವ ನೀಡಲು ಯೋಜಿಸುತ್ತಿದೆ ಎಂದು ಉಲ್ಲೇಖಿಸಿದೆ. ಈ ಹಿಂದೆ ಚೀನಾ ಕೂಡ ಪಾಕಿಸ್ತಾನಕ್ಕೆ ಸದಸ್ಯತ್ವ ನೀಡುವ ಬಗ್ಗೆ ಅನುಕೂಲಕರ ನಿಲುವಿನ ಸುಳಿವು ನೀಡಿತ್ತು. ಭಾರತವು ಬ್ರಿಕ್ಸ್ ಗುಂಪಿನ ವಿಸ್ತರಣೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದೆ. ಆದರೆ, ಬ್ರಿಕ್ಸ್​ ಸೇರುವ ಪಾಕಿಸ್ತಾನದ ಪ್ರಯತ್ನದ ಬಗ್ಗೆ ಭಾರತ ಸರ್ಕಾರ ನಿರ್ದಿಷ್ಟವಾಗಿ ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: ಅಮೆರಿಕದಲ್ಲಿ 64 ಲಕ್ಷಕ್ಕೂ ಹೆಚ್ಚು ಅಕ್ರಮ ವಲಸಿಗರು: ಭಾರತೀಯರೆಷ್ಟು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.