ETV Bharat / international

Pakistan Hindu Girl: ಪಾಕಿಸ್ತಾನದಲ್ಲಿ ಮುಸ್ಲಿಂ ವ್ಯಕ್ತಿಯೊಂದಿಗೆ ವಿವಾಹಕ್ಕಾಗಿ ಹಿಂದೂ ಬಾಲಕಿಯ ಕಿಡ್ನಾಪ್; ಪೊಲೀಸರಿಂದ ರಕ್ಷಣೆ - Pakistan Dahrawar Ittehad

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಘ್ಘಾನ್ ಪಶ್ತೂನ್ ಕುಟುಂಬದವರಿಂದ ಅಪಹರಣಕ್ಕೊಳಗಾಗಿದ್ದ ಹಿಂದೂ ಬಾಲಕಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

Hindu Girl Kidnapped
ಹಿಂದೂ ಬಾಲಕಿ
author img

By

Published : Jun 11, 2023, 1:17 PM IST

ಕರಾಚಿ (ಪಾಕಿಸ್ತಾನ): ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ವಿವಾಹ ಮಾಡುವ ದುರುದ್ದೇಶದಿಂದ ಅಪಹರಣ ಮಾಡಿದ್ದ ಹಿಂದೂ ಬಾಲಕಿಯನ್ನು ಕರಾಚಿಯಲ್ಲಿ ವಶಕ್ಕೆ ಪಡೆದಿರುವುದಾಗಿ ಪಾಕ್​ ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಘ್ಘಾನ್ ಪಶ್ತೂನ್ ಕುಟುಂಬದವರು ಬಾಲಕಿಯನ್ನು ಕಿಡ್ನಾಪ್​ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.

ರವೀನಾ ಮೇಘವಾಲ್ ಎಂಬ ಬಾಲಕಿಯನ್ನು ದಕ್ಷಿಣ ಸಿಂಧ್ ಪ್ರಾಂತ್ಯದ ತಾಂಡೋ ಅಲ್ಲಾಯರ್‌ನ ಸಂಜಾರ್ ಚಾಂಗ್ ಪ್ರದೇಶದಿಂದ ಅಪಹರಿಸಿ, ಕರಾಚಿಗೆ ಕರೆದೊಯ್ಯಲಾಗಿತ್ತು ಎಂದು ತಂಡೋ ಅಲ್ಲ್ಯಾರ್ ಎಸ್‌ಎಸ್‌ಪಿ ಸೈಯದ್ ಸಲೀಮ್ ಶಾ ಮಾಹಿತಿ ನೀಡಿದ್ದಾರೆ.

"ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿದಂತೆ ಬಾಲಕಿಯ ಕುಟುಂಬ ಮತ್ತು ಸಿಂಧ್ ಪ್ರಾಂತ್ಯದ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪಾಕಿಸ್ತಾನದ ದಹ್ರಾವರ್ ಇತ್ತೆಹಾದ್ (ಪಿಡಿಐ) ದೂರು ದಾಖಲಿಸಿದೆ. ದೂರು ನೀಡಿದ ಬಳಿಕ ತನಿಖೆ ನಡೆಸಿ, ನಾವು ಕರಾಚಿಗೆ ಪೊಲೀಸ್​ ತಂಡವನ್ನು ಕಳುಹಿಸಿದೆವು, ಅಲ್ಲಿಂದ ಬಾಲಕಿಯನ್ನು ಸುರಕ್ಷಿತವಾಗಿ ಮಿರ್ಪುರ್ಖಾಸ್​ಗೆ ಕರೆ ತರಲಾಯಿತು. ಅಫ್ಘಾನಿಸ್ತಾನದ ಪಶ್ತೂನ್ ಕುಟುಂಬವು ಬಾಲಕಿ ಇಸ್ಲಾಂಗೆ ಮತಾಂತರಗೊಂಡಿದ್ದು, ಅವಳ ಸ್ವಂತ ಇಚ್ಛೆಯಿಂದಲೇ ಜಮೋ ಖಾನ್ ಅವರನ್ನು ವಿವಾಹವಾದರು ಎಂದು ಹೇಳಿಕೊಂಡಿದೆ" ಎಂದು ಶಾ ಹೇಳಿದರು.

ಇದನ್ನೂ ಓದಿ : ವಿಟ್ಲ ಬಾಲಕಿ ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣ : ಇಬ್ಬರ ಬಂಧನ

ಕುತೂಹಲಕಾರಿ ವಿಷಯ ಅಂದ್ರೆ, ಶನಿವಾರ ಬಾಲಕಿ ಮತ್ತು ಆರೋಪಿಯನ್ನು ತಂಡೋ ಅಲ್ಲಾಯರ್‌ನಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಜಮೋ ಖಾನ್ ಮತ್ತು ಅವರ ಪರ ವಕೀಲರು ಮದುವೆ ಪ್ರಮಾಣಪತ್ರವನ್ನು ಹಾಜರುಪಡಿಸಿದರು. ಆದರೆ, ಆರೋಪಿಗೆ ರಾಷ್ಟ್ರೀಯ ಗುರುತಿನ ಚೀಟಿಯನ್ನು ಸಲ್ಲಿಸಲು ಕೇಳಿದಾಗ ಆತನ ಬಳಿ ಯಾವುದೇ ದಾಖಲಾತಿ ಇರಲಿಲ್ಲ.

ಇನ್ನು ಮ್ಯಾಜಿಸ್ಟ್ರೇಟ್ ಸಬಾ ಒಮರ್ ಅವರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ, ಸುರಕ್ಷಿತವಾಗಿ ಮನೆ ತಲುಪಿಸಲು ತಿಳಿಸಿದ್ದು ನಂತರ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಹೇಳಿದರು. ಹಾಗೆಯೇ, ನ್ಯಾಯಾಲಯದಲ್ಲಿ ಬಾಲಕಿಯು ಪೋಷಕರು ಮತ್ತು ಸಂಬಂಧಿಕರನ್ನು ಭೇಟಿಯಾಗಲು ಮ್ಯಾಜಿಸ್ಟ್ರೇಟ್ ಅವಕಾಶ ಮಾಡಿಕೊಟ್ಟರು.

ಇದನ್ನೂ ಓದಿ : ಬಾಲಕಿ ಪುಸಲಾಯಿಸಿ ಕಿಡ್ನಾಪ್​ ಮಾಡಿದ ಕಿರಾತಕ..!

"ಜಮೋ ಖಾನ್ ಮತ್ತು ಅವರ ಸಹಚರರನ್ನು ಸಿಂಧ್ ಬಾಲ್ಯ ವಿವಾಹ ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಬೇಕು ಮತ್ತು ನಿಖಾ (ಮದುವೆ ಒಪ್ಪಂದ) ನಡೆಸಿದ ಮೌಲ್ವಿ ಮತ್ತು ಸಾಕ್ಷಿಗಳನ್ನು ಬಂಧಿಸಬೇಕು" ಎಂದು ಪಿಡಿಐ (Pakistan Dahrawar Ittehad) ಒತ್ತಾಯಿಸಿದೆ.

ಮರುಕಳಿಸುತ್ತಿರುವ ದುಷ್ಕೃತ್ಯ: ಸಿಂಧ್‌ ಪ್ರದೇಶದಲ್ಲಿ ನಡೆಯುತ್ತಿರುವ ಹಿಂದೂ ಯುವತಿಯರ ಅಪಹರಣ ಮತ್ತು ಬಲವಂತದ ಮತಾಂತರವು ಆತಂಕ ಉಂಟುಮಾಡಿದೆ. ಇತ್ತೀಚಿನ ತಿಂಗಳುಗಳಲ್ಲಿ ಸಿಂಧ್‌ನಲ್ಲಿ ಇಂತಹ ಪ್ರಕರಣಗಳು ಉಲ್ಬಣಗೊಂಡಿವೆ. ಪಾಕಿಸ್ತಾನದಲ್ಲಿ ಹಿಂದೂಗಳು ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದ್ದಾರೆ. ಅಧಿಕೃತ ಅಂದಾಜಿನ ಪ್ರಕಾರ, ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ.

ಇದನ್ನೂ ಓದಿ : ಅಪ್ರಾಪ್ತೆಯರನ್ನು ಅಪಹರಿಸಿದ ಗ್ರಾಮ ಸೇವಕರು ಅರೆಸ್ಟ್​...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.