ETV Bharat / international

ಅವಿಶ್ವಾಸ ಮತದಲ್ಲಿ ಸೋತ ಇಮ್ರಾನ್​ ಖಾನ್.. ಪಾಕ್​ ಇತಿಹಾಸದಲ್ಲೇ ಪ್ರಧಾನಿಗೆ ದೊಡ್ಡ ಮುಖಭಂಗ​ - ಅಧಿಕಾರ ಕಳೆದುಕೊಂಡ ಇಮ್ರಾನ್ ಖಾನ್

ಪಾಕ್ ಇತಿಹಾಸದಲ್ಲಿ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್ ಖಾನ್ ಪ್ರಧಾನಿಯೊಬ್ಬರನ್ನು ಅಧಿಕಾರದಿಂದ ಪದಚ್ಯುತಗೊಳಿಸಲಾಗಿದೆ. ಈ ಮೊದಲು 1989ರಲ್ಲಿ ಬೆನ್​ಜಿರ್ ಭುಟ್ಟೋ ಮತ್ತು 2006ರಲ್ಲಿ ಶೌಕತ್ ಅಜೀಜ್ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಲಾಗಿತ್ತಾದರೂ, ಪ್ರತಿಪಕ್ಷಗಳು ವಿಶ್ವಾಸ ಗಳಿಸುವಲ್ಲಿ ವಿಫಲವಾಗಿದ್ದವು.

Pak PM Imran Khan ousted in no-confidence vote
ವಿಶ್ವಾಸ ಗಳಿಸದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಅಧಿಕಾರದಿಂದ ಪದಚ್ಯುತ
author img

By

Published : Apr 10, 2022, 7:22 AM IST

ಇಸ್ಲಾಮಾಬಾದ್(ಪಾಕಿಸ್ತಾನ): ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಪ್ರಧಾನಿಯೊಬ್ಬರು ಅಧಿಕಾರ ಕಳೆದುಕೊಂಡಿದ್ದಾರೆ. ಪಾಕ್ ಸಂಸತ್​​​ ಆದ ನ್ಯಾಷನಲ್ ಅಸೆಂಬ್ಲಿಯಲ್ಲಿ ಪ್ರಧಾನಿ ಇಮ್ರಾನ್ ಖಾನ್ 'ವಿಶ್ವಾಸ' ಗಳಿಸುವಲ್ಲಿ ವಿಫಲರಾಗಿದ್ದು, ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡರು.

ಈ ಮೊದಲು 1989ರಲ್ಲಿ ಬೆನ್​ಜಿರ್ ಭುಟ್ಟೋ ಮತ್ತು 2006ರಲ್ಲಿ ಶೌಕತ್ ಅಜೀಜ್ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಲಾಗಿತ್ತಾದರೂ, ಮತದಾನದ ವೇಳೆ ಆಡಳಿತ ಪಕ್ಷಕ್ಕೆ ಮತಗಳು ಬಂದ ಕಾರಣ ಅವರು ಅಧಿಕಾರಲ್ಲಿ ಮುಂದುವರೆದಿದ್ದರು. ಆದರೆ ಈ ಬಾರಿ ಇಮ್ರಾನ್ ಪಾಕ್ ಇತಿಹಾಸದಲ್ಲಿ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್ ಖಾನ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಲಾಗಿದೆ.

ಒಂದು ವಾರದಿಂದ ರಾಜಕೀಯ ಏರಿಳಿತಗಳು ಪಾಕ್​ನಲ್ಲಿ ಗೊಂದಲ ಸೃಷ್ಟಿ ಮಾಡಿದ್ದವು. ಪಾಕ್ ಸುಪ್ರೀಂಕೋರ್ಟ್​ ಆದೇಶದಂತೆ ಇಮ್ರಾನ್ ಖಾನ್ ಅನಿವಾರ್ಯವಾಗಿ ಅವಿಶ್ವಾಸ ನಿರ್ಣಯದ ಮತದಾನ ಎದುರಿಸಬೇಕಾದ ಹಿನ್ನೆಲೆಯಲ್ಲಿ ಶನಿವಾರ ನಡೆದ ಅವಿಶ್ವಾಸ ನಿರ್ಣಯ ಮತದಾನದಲ್ಲಿ ಪ್ರತಿಪಕ್ಷಗಳು ನ್ಯಾಷನಲ್ ಅಸೆಂಬ್ಲಿಯ 174 ಮತಗಳನ್ನು ಪಡೆದುಕೊಂಡವು. ನ್ಯಾಷನಲ್ ಅಸೆಂಬ್ಲಿಯಲ್ಲಿ ಒಟ್ಟು 342 ಸದಸ್ಯರಿದ್ದು ಇಮ್ರಾನ್ ಖಾನ್ ಅಧಿಕಾರದಲ್ಲಿ ಮುಂದುವರೆಯಬೇಕಾದರೆ 172 ಸದಸ್ಯರ ಮತಗಳನ್ನು ಪಡೆಯುವುದು ಅನಿವಾರ್ಯವಾಗಿತ್ತು. ಆದರೆ ಅವಿಶ್ವಾಸ ನಿರ್ಣಯದ ವೇಳೆ ಇಮ್ರಾನ್​​ಖಾನ್​ನ ಪಿಟಿಐ ಪಕ್ಷದ ಸದಸ್ಯರು ಹಾಗೂ ಪಿಟಿಐ ಪಕ್ಷದ ಮೈತ್ರಿಕೂಟ ಪಕ್ಷದ ಬಹುತೇಕ ಸದಸ್ಯರು ಗೈರುಹಾಜರಾಗಿದ್ದರು. ಪ್ರತಿಪಕ್ಷದವರೆಲ್ಲರೂ ಮತದಾನದಲ್ಲಿ ಭಾಗಿಯಾಗಿದ್ದರು. ಆಡಳಿತ ಪಕ್ಷದ ಸದಸ್ಯರು ನ್ಯಾಷನಲ್ ಅಸೆಂಬ್ಲಿಯಿಂದ ವಾಕ್ ಔಟ್ ಮಾಡಿದರು.

ಇನ್ನೊಂದು ಅಚ್ಚರಿಯ ವಿಚಾರವೆಂದರೆ ಪಾಕ್​ ಇತಿಹಾಸದಲ್ಲಿ ಯಾವ ಪ್ರಧಾನಿಯೂ ಇದುವರೆಗೆ ಪೂರ್ಣ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ. ಇಮ್ರಾನ್ ಖಾನ್ ಅವರ ಪದಚ್ಯುತಿಯಾದ ನಂತರ ಹೊಸ ನಾಯಕನನ್ನು ಅಂದರೆ ಪ್ರಧಾನಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ನ್ಯಾಷನಲ್ ಅಸೆಂಬ್ಲಿ ಚಾಲನೆ ನೀಡಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪ್ರತಿಪಕ್ಷಗಳು ಘೋಷಿಸಿದ್ದು, ಭಾನುವಾರದ ವೇಳೆಗೆ ಅವರು ಪ್ರಧಾನಿಯಾಗಿ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ. ಸಂಸತ್‌ನ ಸ್ಪೀಕರ್ ಅಸದ್ ಕೈಸರ್ ಮತ್ತು ಡೆಪ್ಯುಟಿ ಸ್ಪೀಕರ್ ಖಾಸಿಂ ಖಾನ್ ಸೂರಿ ರಾಜೀನಾಮೆ ಸಲ್ಲಿಸಿದ್ದು, ಅವರ ಸ್ಥಾನಕ್ಕೂ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ: ಇಮ್ರಾನ್​​ಖಾನ್​ಗೆ ಭಾರತ ಇಷ್ಟವಿದ್ದರೆ, ಪಾಕ್ ತೊರೆಯಲಿ: ಮರ್ಯಮ್ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.