ಇಸ್ಲಾಮಾಬಾದ್( ಪಾಕಿಸ್ತಾನ): ಇದು ಅಂತಾರಾಷ್ಟ್ರೀಯ ಷಡಂತ್ರ್ಯ ಎನ್ನುವ ಮೂಲಕ ಪ್ರಧಾನಿ ಇಮ್ರಾನ್ ಖಾನ್ ನಾಟಕ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನ ಮುಸ್ಲೀಂ ಲೀಗ್( ಪಿಎಂಎಲ್ಎನ್) ಅಧ್ಯಕ್ಷ ಷಹನಾಜ್ ಶರೀಫ್ ಆರೋಪಿಸಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಇದೆ ಎಂಬ ನೆಪದಲ್ಲಿ ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯದಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದು, ಅಮೆರಿಕದಿಂದ ಬೆದರಿಕೆ ಪತ್ರ ಬಂದಿದೆ ಎಂದಿರುವ ಇಮ್ರಾನ್ ಖಾನ್ ಇದು ನನ್ನ ಕೊನೆಯ ಪ್ರಯತ್ನ ಎಂದು ಹೇಳಿದ್ದಾರೆ ಎಂದು ಅಲ್ಲಿನ ಪತ್ರಿಕೆ ವರದಿ ಮಾಡಿದೆ.
ಅವಿಶ್ವಾಸ ನಿರ್ಣಯ ಸಂಬಂಧ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಷರೀಫ್. ಭಾನುವಾರ ನಿಮ್ಮ ಸೋಲು ಸನ್ನಿಹಿತವಾಗಿದೆ. ಇದು ಗೋಡೆ ಮೇಲಿನ ಬರಹದಷ್ಟೇ ಸತ್ಯ. ಹಾಗಾಗಿಯೇ ನೀವು ಇದನ್ನೆಲ್ಲ ಮಾಡುತ್ತಿದ್ದೀರಿ ಎಂದು ಇಮ್ರಾನ್ ಖಾನ್ ವಿರುದ್ಧ ಹರಿಹಾಯ್ದಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಬೇರೆಯವರ ಸಹಕಾರದೊಂದಿಗೆ ಹಾಗೂ ಭಾರಿ ಸದ್ದಿನೊಂದಿಗೆ ಅಧಿಕಾರಕ್ಕೆ ಬಂದಿತ್ತು ಎಂದು PML-N ಅಧ್ಯಕ್ಷರು ಹೇಳಿದ್ದಾರೆ.
ಇದೀಗ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಲು ಪ್ರತಿ ಪಕ್ಷಗಳು ಜಂಟಿಯಾಗಿ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಮಾರ್ಗವನ್ನು ಆರಿಸಿಕೊಂಡಿವೆ ಎಂದು ಡಾನ್ ವರದಿ ಮಾಡಿದೆ. ಮಾರ್ಚ್ 27 ರಂದು ಸಾರ್ವಜನಿಕ ರ್ಯಾಲಿಯಲ್ಲಿ ಬೆದರಿಕೆ ಪತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ತಕ್ಷಣವೇ ಪ್ರತಿಕ್ರಿಸದಿರಲು ಕಾರಣ ಏನೆಂದು ಇಮ್ರಾನ್ ಖಾನ್ ಅವರನ್ನು ಷರೀಫ್ ಪ್ರಶ್ನಿಸಿದ್ದಾರೆ.
ನಿಮಗೆ ಅಮೆರಿಕದಿಂದ ಬೆದರಿಕೆ ಪತ್ರ ಬಂದಿದ್ದರೆ, ಒಐಸಿ ಸಭೆಗೆ ಅಮೆರಿಕದ ನಿಯೋಗವನ್ನು ಕರೆದಿದ್ದಾದರೂ ಏಕೆ ಎಂದು ಕೇಳಿರುವ ಪಿಎಂಎಲ್ ಎನ್ ಪಕ್ಷದ ಅಧ್ಯಕ್ಷರು, ಪಾಕಿಸ್ತಾನ - ಅಮೆರಿಕ ರಾಜತಾಂತ್ರಿಕ ಸಂಬಂಧದ 75 ವರ್ಷಗಳ ಆಚರಣೆಯ ಸಭೆಯಲ್ಲಿ ಭಾಗವಹಿಸಿದ ಪಾಕಿಸ್ತಾನ ವಿದೇಶಾಂಗ ಸಚಿವರು ಅಲ್ಲಿ ಮಾತನಾಡಿದ್ದಾದರೂ ಏಕೆ ಎಂದು ಇಮ್ರಾನ್ ಖಾನ್ಗೆ ಷರೀಪ್ ಪ್ರಶ್ನಿಸಿದ್ದಾರೆ
ಇಮ್ರಾನ್ ಖಾನ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚೀನಾ, ಸೌದಿ ಅರೇಬಿಯಾ ಮತ್ತು ಟರ್ಕಿಯೊಂದಿಗೆ ಸಂಬಂಧಗಳನ್ನು ಹಾಳುಗಡೆವಿದೆ ಎಂದು ಪಿಎಂಎಲ್ಎನ್ ಪಕ್ಷದ ಅಧ್ಯಕ್ಷ ಶಹನಾಜ್ ಷರೀಫ್ ಆರೋಪಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ. ಇದೇ ವೇಳೆ ಮಾತನಾಡಿರುವ ಷರೀಫ್, ಇಮ್ರಾನ್ ಖಾನ್ ಮುಂದೆ ಮೂರು ಆಯ್ಕೆಗಳನ್ನು ಇರಿಸಿದ್ದಾರೆ.
ಅವಿಶ್ವಾಸ ಗೊತ್ತುವಳಿ ಎದುರಿಸುವುದು ಇಲ್ಲವೇ ಅವಧಿ ಪೂರ್ವ ಚುನಾವಣೆ ಘೋಷಣೆ ಮಾಡುವ ಮಾರ್ಗಗಳು ಇಮ್ರಾನ್ ಖಾನ್ ಮುಂದಿದ್ದು, ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನು ಓದಿ:ಅಚ್ಚರಿ..! ಒಂದೇ ಪಪ್ಪಾಯಿ ಮರ, 15 ಟಿಸಿಲು, 200 ಹಣ್ಣುಗಳು!!