ಅಟ್ಲಾಂಟಾ: ಅಟ್ಲಾಂಟಾದ ಜೈಲಿನಲ್ಲಿ ಪುರುಷ ಕೈದಿಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಐವರ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಪ್ರಕರಣದಲ್ಲಿ ಓರ್ವ ಸಾವನಪ್ಪಿ, ನಾಲ್ವರು ಗಾಯಗೊಂಡಿದ್ದಾರೆ ಎಂದು ಫೆಡರಲ್ ನಾಗರಿಕ ಹಕ್ಕುಗಳ ತನಿಖೆ ವಿಭಾಗದ ಅಧಿಕಾರಿಗಳು ಶುಕ್ರವಾರ ಈ ಮಾಹಿತಿ ನೀಡಿದ್ದಾರೆ.
ಡೇವಿಯನ್ ಬ್ಲೇಕ್(23) ಮೃತ ವ್ಯಕ್ತಿ. ಶುಕ್ರವಾರ ಮಧ್ಯಾಹ್ನ 3:30 ರ ಸುಮಾರಿಗೆ ಆತ ಸಾವನಪ್ಪಿದ್ದಾನೆ. ಗುರುವಾರ ಫುಲ್ಟನ್ ಕೌಂಟಿ ಜೈಲಿನಲ್ಲಿ ಇರಿತಕ್ಕೊಳಗಾಗಿದ್ದ ಎಂದು ಶೆರಿಫ್ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ. ಗಾಯಗೊಂಡ ಬ್ಲೇಕ್ ಮತ್ತು ಇತರ ಮೂವರನ್ನು ಗ್ರೇಡಿ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬ್ಲೇಕ್ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ. 5ನೇ ವ್ಯಕ್ತಿಗೆ ವೈದ್ಯಕೀಯ ಸಿಬ್ಬಂದಿ ಜೈಲಿನಲ್ಲಿಯೇ ಚಿಕಿತ್ಸೆ ನೀಡಿದ್ದಾರೆ. ಚೂರಿ ಇರಿತಕ್ಕೆ ನಿಖರ ಕಾರಣವೇನು? ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ.
ಕೇವಲ ಒಂದು ತಿಂಗಳ ಅವಧಿಯಲ್ಲಿ ಫುಲ್ಟನ್ ಕೌಂಟಿ ಕಸ್ಟಡಿಯಲ್ಲಿ ಬ್ಲೇಕ್ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಕೌಂಟಿ ವೈದ್ಯಕೀಯ ಪರೀಕ್ಷಕರ ಕಛೇರಿಯು ಬ್ಲೇಕ್‌ನ ಶವಪರೀಕ್ಷೆಯ ನಡೆಸಲಿದೆ. ಫುಲ್ಟನ್ ಕೌಂಟಿ ಜೈಲಿನಲ್ಲಿ ಏಕಾಏಕಿ ಹಿಂಸಾಚಾರ ಘಟನೆ ತೀವ್ರ ಕಳವಳವನ್ನುಂಟು ಮಾಡಿದೆ ಎಂದು ಶೆರಿಫ್ ಕಚೇರಿ ಅಧಿಕಾರಿ ಲ್ಯಾಬಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ನಾವು ಈ ವರ್ಷ ದುರದೃಷ್ಟಕರ ಸರಣಿ ಸಾವುಗಳನ್ನು ದಾಖಲಿಸಿದ್ದೇವೆ. ಅದರಲ್ಲಿ ನೈಸರ್ಗಿಕ ಕಾರಣಗಳಿಂದ, ಆರೋಗ್ಯ ಸಮಸ್ಯೆ ಹಾಗೂ ಹತ್ಯೆಗಳೂ ಸೇರಿದೆ. ಶೆರಿಫ್ ಕಚೇರಿಯ ಮಾಹಿತಿಯ ಪ್ರಕಾರ ಶುಕ್ರವಾರ ಮುಖ್ಯ ಕೌಂಟಿ ಜೈಲಿನಲ್ಲಿ 2,523 ಜನರನ್ನು ಬಂಧಿಸಲಾಗಿದೆ. ಜೈಲಿನ ಸಾಮರ್ಥ್ಯ 2,254. ಆದರೆ ಸುಮಾರು 270 ಜನರು ಹೆಚ್ಚಿದ್ದಾರೆ. ಹಿಂಸಾಚಾರ ಮತ್ತು ಜನಸಂದಣಿ ತಗ್ಗಿಸಲು ಬಂಧಿತರನ್ನು ಬೇರೆಡೆ ಸ್ಥಳಾಂತರಿಸುವ ಪ್ರಯತ್ನದ ಭಾಗವಾಗಿ ಕಚೇರಿ ಇತರ ಜೈಲುಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ" ಎಂದು ಲ್ಯಾಬಟ್ ಹೇಳಿದರು.
ಜನವರಿ 2021ರಲ್ಲಿ ಅಧಿಕಾರ ವಹಿಸಿಕೊಂಡ ಲ್ಯಾಬಟ್ ಹೊಸ ಜೈಲಿಗಾಗಿ ಒತ್ತಾಯಿಸುತ್ತಿದ್ದಾರೆ. ಜೈಲಿನ ಪರಿಸ್ಥಿತಿಗಳ ಮೇಲೆ ಕೌಂಟಿಯ ಮೇಲೆ ಅನೇಕ ಬಾರಿ ಯಶಸ್ವಿಯಾಗಿ ಮೊಕದ್ದಮೆ ಹೂಡಿರುವ ಸಂಸ್ಥೆಯು ಯುಸ್ ನ್ಯಾಯಾಂಗ ಇಲಾಖೆಗೆ ಏಪ್ರಿಲ್ನಲ್ಲಿ ಬರೆದ ಪತ್ರದಲ್ಲಿ ಪ್ರಸ್ತುತ ತನ್ನ ಆರೈಕೆಯಲ್ಲಿರುವ ಜನರ ಪರಿಸ್ಥಿತಿಗಳನ್ನು ಸರಿಪಡಿಸಲು ಸ್ಪಷ್ಟ ಅಸಮರ್ಥತೆ ಪ್ರದರ್ಶಿಸಿದೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಲ್ಯಾಬಟ್ ಹೇಳಿದ್ದಾರೆ. ಹಾಗೂ ಇದು ಜೈಲು ಸಿಬ್ಬಂದಿ ಕ್ರೌರ್ಯ ಮತ್ತು ಹಿಂಸೆಯ ಸಂಸ್ಕೃತಿಯ ಪರಿಣಾಮವಾಗಿದೆ ಎಂದಿದ್ದಾರೆ.
ಅಮೆರಿಕ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಜುಲೈನಲ್ಲಿ ಕೌಂಟಿಯಲ್ಲಿನ ಜೈಲು ಪರಿಸ್ಥಿತಿಗಳ ಬಗ್ಗೆ ತನ್ನ ನಾಗರಿಕ ಹಕ್ಕುಗಳ ತನಿಖೆಯನ್ನು ಪ್ರಾರಂಭಿಸಿತು. ಕೊಕೇನ್ ಮತ್ತು ಬ್ಯಾಟರಿ ಹೊಂದಿದ ಆರೋಪ ಸೇರಿದಂತೆ ವಿವಿಧ ಆರೋಪಗಳ ಮೇಲೆ ಜನವರಿ 25 ರಂದು ಅಟ್ಲಾಂಟಾ ಪೊಲೀಸರು ಬ್ಲೇಕ್‌ನನ್ನು ಬಂಧಿಸಿದ್ದರು ಎಂದು ಜೈಲು ದಾಖಲೆಗಳು ಬಹಿರಂಗ ಪಡಿಸಿವೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.
ಇದನ್ನೂ ಓದಿ: 13 ಮಿಲಿಯನ್ ಡಾಲರ್ ವಂಚನೆ ಹಗರಣ: ನ್ಯೂಜೆರ್ಸಿಯಲ್ಲಿ ಭಾರತೀಯ ಮೂಲದ ಅಮೆರಿಕ ಪ್ರಜೆ ಬಂಧನ