ETV Bharat / international

ಈ ವಾರಾಂತ್ಯದಲ್ಲಿ ಆಕಾಶದಿಂದ ಭೂಮಿಗೆ ಬೀಳಲಿದೆ 38 ವರ್ಷದ ಹಿಂದಿನ ನಾಸಾ ಉಪಗ್ರಹ - ನಿವೃತ್ತ ನಾಸಾ ಉಪಗ್ರಹ

1984ರಲ್ಲಿ ಉಡಾವಣೆಯಾದ ಭೂಮಿಯ ವಿಕಿರಣ ಬಜೆಟ್ ಉಪಗ್ರಹ ಎಂದು ಕರೆಯಲ್ಪಡುವ ನಾಸಾದ 2.5 ಟನ್ ತೂಕದ ಉಪಗ್ರಹವು ಭಾನುವಾರ ರಾತ್ರಿ ಆಕಾಶದಿಂದ ಭೂಮಿಗೆ ಬೀಳಲಿದೆ.

Representative image
ಪ್ರಾತಿನಿಧಿಕ ಚಿತ್ರ
author img

By

Published : Jan 7, 2023, 3:36 PM IST

ಕೇಪ್ ಕೆನವೆರಲ್ (ಫ್ಲೋರಿಡಾ): 38 ವರ್ಷದ ನಿವೃತ್ತ ನಾಸಾ ಉಪಗ್ರಹವೊಂದು ಆಕಾಶದಿಂದ ಬೀಳಲಿದೆ. ಅವಶೇಷಗಳು ಯಾರ ಮೇಲೂ ಬೀಳುವ ಸಾಧ್ಯತೆ ತುಂಬಾ ಕಡಿಮೆ ಎಂದು ನಾಸಾ ಶುಕ್ರವಾರ ಹೇಳಿದೆ. ನಾಸಾದ ಪ್ರಕಾರ, 5,400-ಪೌಂಡ್ (2,450-ಕಿಲೋಗ್ರಾಂ) ಉಪಗ್ರಹವು ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದ ನಂತರ ಸುಟ್ಟುಹೋಗುತ್ತದೆ. ಆದರೆ ಕೆಲವು ತುಣುಕುಗಳು ನೆಲಕ್ಕೆ ಅಪ್ಪಳಿಸಲೂ ಬಹುದು.

ರಕ್ಷಣಾ ಇಲಾಖೆಯ ಪ್ರಕಾರ ವಿಜ್ಞಾನ ಉಪಗ್ರಹವು ಭಾನುವಾರ ರಾತ್ರಿ ಕೆಳಗಿಳಿಯುವ ನಿರೀಕ್ಷೆಯಿದೆ. ಈ ಪ್ರಕ್ರಿಯೆಗೆ 17 ಗಂಟೆ ಕಾಲ ಸಮಯ ಹಿಡಿಯಬಹುದು ಎನ್ನಲಾಗ್ತಿದೆ. ಆದಾಗ್ಯೂ, ಕ್ಯಾಲಿಫೋರ್ನಿಯಾ ಮೂಲದ ಏರೋಸ್ಪೇಸ್ ಕಾರ್ಪೊರೇಷನ್, ಸೋಮವಾರ ಬೆಳಗ್ಗೆ ಭೂಮಿಗೆ ಬೀಳುವ ಗುರಿ ಹೊಂದಿದೆ.

ಇ‌ಆರ್​​ಬಿಎಸ್(ERBS) ಎಂದು ಕರೆಯಲ್ಪಡುವ ಭೂಮಿಯ ವಿಕಿರಣ ಬಜೆಟ್ ಉಪಗ್ರಹವನ್ನು 1984ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್‌ನಲ್ಲಿ ಉಡಾವಣೆ ಮಾಡಲಾಗಿತ್ತು. ಅದರ ನಿರೀಕ್ಷಿತ ಕೆಲಸದ ಜೀವಿತಾವಧಿಯು ಎರಡು ವರ್ಷಗಳಾಗಿದ್ದರೂ, ಉಪಗ್ರಹವು 2005ರಲ್ಲಿ ನಿವೃತ್ತಿಯಾಗುವವರೆಗೂ ಓಝೋನ್ ಮತ್ತು ಇತರ ವಾತಾವರಣದ ಮಾಪನಗಳನ್ನು ಮಾಡುತ್ತಲೇ ಇತ್ತು. ಭೂಮಿಯು ಸೂರ್ಯನಿಂದ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಹೊರಸೂಸುತ್ತದೆ ಎಂಬುದನ್ನು ಉಪಗ್ರಹವು ಅಧ್ಯಯನ ಮಾಡಿದೆ.

ಮಂಗಳದ ಅಧ್ಯಯನಕ್ಕೆ ನಾಸಾದ ಪ್ರಯತ್ನ: ಚಂದ್ರನ ನಿಗೂಢವನ್ನು ಪತ್ತೆ ಹಚ್ಚುವಲ್ಲಿ ನಾಸಾ ಸತತವಾಗಿ ಕಾರ್ಯಾಚರಣೆ ನಡೆಸುತ್ತಲೇ ಬಂದಿದೆ. 2023 ಮತ್ತು 24ರಲ್ಲಿ ಮಾನವರನ್ನು ಚಂದ್ರನ ಮೇಲ್ಮೈಗೆ ಕಳುಹಿಸುವ ಪ್ರಯತ್ನಗಳು ಮುಂದುವರೆದಿವೆ. ಓರಿಯನ್ ಬಾಹ್ಯಾಕಾಶ ನೌಕೆಯು ನವೆಂಬರ್ 28 ರಂದು ಆರ್ಟೆಮಿಸ್ ಒನ್ ಕಾರ್ಯಾಚರಣೆಯ ಸಮಯದಲ್ಲಿ ಭೂಮಿಯಿಂದ ಗರಿಷ್ಠ ದೂರವನ್ನು ತಲುಪಿದೆ. ಅದು ನಮ್ಮ ಗ್ರಹದಿಂದ 268,563 ಮೈಲುಗಳಷ್ಟು ದೂರದಲ್ಲಿದೆ.

ನಾಸಾದ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮಗಳ ಸಾಧನೆಗಳ ಸರಣಿಯಲ್ಲಿ ಸಂಸ್ಥೆ ತನ್ನ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ (SLS) ರಾಕೆಟ್ ಅನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ನಾಸಾದ ಓರಿಯನ್ ಬಾಹ್ಯಾಕಾಶ ನೌಕೆಯನ್ನು ಗಗನಯಾತ್ರಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬೂಸ್ಟರ್ ವಿಭಾಗದ ನಿರ್ಮಾಣವನ್ನು ಪೂರ್ಣಗೊಳಿಸಿದೆ.

13 ಲ್ಯಾಂಡಿಂಗ್ ಪ್ರದೇಶಗಳ ಆಯ್ಕೆ: ನಾಸಾ ಹಲವಾರು ಪ್ರಮುಖ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಇದು ಚಂದ್ರನ ಮೇಲ್ಮೈಗೆ ಮಾನವನನ್ನು ಕಳುಹಿಸುವಿಕೆಯನ್ನು ಖಚಿತಪಡಿಸಿದೆ. ಆದರೆ, ಮಂಗಳ ಗ್ರಹಕ್ಕೆ ಮೊದಲ ಗಗನಯಾತ್ರಿಗಳನ್ನು ಕಳುಹಿಸುವ ತಯಾರಿಯಲ್ಲಿ ಚಂದ್ರನ ಮೇಲಿನ ಸಂಶೋಧನೆಗಳು ಮತ್ತಷ್ಟು ತೀವ್ರತೆ ಪಡೆದುಕೊಂಡಿವೆ. ಚಂದ್ರನ ದಕ್ಷಿಣ ಧ್ರುವದ ಬಳಿ 13 ಲ್ಯಾಂಡಿಂಗ್ ಪ್ರದೇಶಗಳನ್ನು ನಾಸಾ ಈಗಾಗಲೇ ಗುರುತಿಸಿದೆ. ಅಲ್ಲಿ ಮುಂದಿನ ಅಮೆರಿಕನ್​ ಗಗನಯಾತ್ರಿಗಳು ಆರ್ಟೆಮಿಸ್ III ಸಮಯದಲ್ಲಿ ಚಂದ್ರನ ಮೇಲೆ ಇಳಿಯಬಹುದು.

ಚಂದ್ರನ ಪರಿಸರದಲ್ಲಿ ನಾಸಾ ಸಿಬ್ಬಂದಿಯೊಂದಿಗೆ ಭವಿಷ್ಯದ ಆರ್ಟೆಮಿಸ್ ಕಾರ್ಯಾಚರಣೆಗಳಿಗಾಗಿ ಒತ್ತಡದ ರೋವರ್ ಕಾರ್ಯಾಚರಣೆಗಳು ಮತ್ತು ಮೂನ್‌ವಾಕ್‌ಗಳನ್ನು ಪರೀಕ್ಷಿಸಲು ಚಂದ್ರನ ಭೂಪ್ರದೇಶದ ಬಳಕೆ ಬಗ್ಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಏತನ್ಮಧ್ಯೆ, ಖಾಸಗಿ ಚಂದ್ರನ ಕಾರ್ಯಾಚರಣೆಗಳು ನಿಧಾನವಾಗಿ ಹೊಸ ರೂಪುಗಳನ್ನು ಪಡೆದುಕೊಳ್ಳುತ್ತಿವೆ.

8 ವ್ಯಕ್ತಿಗಳನ್ನೊಳಗೊಂಡ ವೈಯಕ್ತಿಕ ಮಿಷನ್ ಘೋಷಣೆ: ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ ಅವರು ಡಿಸೆಂಬರ್‌ನಲ್ಲಿ ಚಂದ್ರನ ಸುತ್ತ ಸ್ಪೇಸ್‌ಎಕ್ಸ್ ವಿಮಾನದಲ್ಲಿ ಕಲಾವಿದರು ಮತ್ತು ಸೃಜನಶೀಲ ವೃತ್ತಿಪರರನ್ನು ಹೊತ್ತ ಎಂಟು ವ್ಯಕ್ತಿಗಳ ಖಾಸಗಿ ಮಿಷನ್ ಅನ್ನು ಈಗಾಗಲೇ ಘೋಷಿಸಿದ್ದಾರೆ.

2018 ರಲ್ಲಿ ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರು ಜಪಾನ್‌ನ ಅತಿದೊಡ್ಡ ಆನ್‌ಲೈನ್ ಬಟ್ಟೆ ಚಿಲ್ಲರೆ ವ್ಯಾಪಾರಿ ಜೊಜೊಟೌನ್‌ನ ಸಂಸ್ಥಾಪಕರಾದ ಮೇಜಾವಾ ಕಂಪನಿಯ ಭವಿಷ್ಯದ ಫಾಲ್ಕನ್ ರಾಕೆಟ್ನಲ್ಲಿ ಚಂದ್ರನ ಸುತ್ತ ಸವಾರಿ ಮಾಡುವ ಮೊದಲ ಖಾಸಗಿ ಗ್ರಾಹಕರಾಗಿದ್ದಾರೆ ಎಂದು ಬಹಿರಂಗಪಡಿಸಿದ್ದರು. ದಿ ವರ್ಜ್ ಪ್ರಕಾರ, ಮೇಜಾವಾ ಅವರು ತಮ್ಮ ಡಿಯರ್‌ಮೂನ್ ಮಿಷನ್‌ನ ಭಾಗವಾಗಿ 2023 ರ ಆರಂಭದಲ್ಲಿ ಚಂದ್ರನಡೆಗೆ ಪ್ರಯಾಣಿಸಲು ಯೋಜಿಸಿದ್ದಾರೆ.

ಇದನ್ನೂ ಓದಿ: ಮಾನವನಿಗೆ ಚಂದ್ರ ಮತ್ತಷ್ಟು ಹತ್ತಿರ... ಮಂಗಳದ ಅಧ್ಯಯನಕ್ಕೆ ನಾಸಾದ ಪ್ರಯತ್ನ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.