ETV Bharat / international

ಮುಸ್ಲಿಂ ರಾಷ್ಟ್ರಗಳು ರಷ್ಯಾ ಮೇಲಿನ ನಿರ್ಬಂಧಗಳನ್ನು ಬೆಂಬಲಿಸಿಲ್ಲ: ರಷ್ಯಾ ಉಪಪ್ರಧಾನಿ - ರಷ್ಯಾದ ಉಪ ಪ್ರಧಾನಿ ಮರಾತ್ ಖುಸ್ನುಲಿನ್

ವಿಶ್ವದ ಯಾವುದೇ ಮುಸ್ಲಿಂ ರಾಷ್ಟ್ರಗಳು ರಷ್ಯಾ ಮೇಲಿನ ನಿರ್ಬಂಧಗಳನ್ನು ಬೆಂಬಲಿಸುವುದಿಲ್ಲ ಎಂದು ರಷ್ಯಾದ ಉಪ ಪ್ರಧಾನಿ ಹೇಳಿದ್ದಾರೆ. ರಷ್ಯಾ ಇಸ್ಲಾಮಿಕ್ ವರ್ಲ್ಡ್​ ಫೋರಂ ಸಮಾವೇಶದ ನಂತರ ಅವರು ಈ ಮಾತು ಹೇಳಿದ್ದಾರೆ.

Nobody in the Muslim world supports
Nobody in the Muslim world supports
author img

By

Published : May 21, 2023, 5:40 PM IST

ಮಾಸ್ಕೊ : ಇಸ್ಲಾಮಿಕ್ ದೇಶಗಳು ರಷ್ಯಾದ ಮೇಲಿನ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳನ್ನು ಬೆಂಬಲಿಸುವುದಿಲ್ಲ ಮತ್ತು ಈ ವಾರದ ಕಜಾನ್ ಆರ್ಥಿಕ ವೇದಿಕೆಯಲ್ಲಿ ಸಹಿ ಮಾಡಿದ ಒಪ್ಪಂದಗಳು ಇದನ್ನು ಸಾಬೀತುಪಡಿಸುತ್ತವೆ ಎಂದು ರಷ್ಯಾದ ಉಪ ಪ್ರಧಾನಿ ಮರಾತ್ ಖುಸ್ನುಲಿನ್ ಹೇಳಿದರು. ಕಜಾನ್​ನಲ್ಲಿ ಏರ್ಪಡಿಸಲಾಗಿದ್ದ ದಿ ರಷ್ಯಾ ಇಸ್ಲಾಮಿಕ್ ವರ್ಲ್ಡ್​ ಫೋರಂ ಅಂಗವಾಗಿ ಇಸ್ಲಾಮಿಕ್ ಸಹಕಾರ ಸಂಘಟನೆಯ ದೇಶಗಳು ಮತ್ತು ರಷ್ಯಾದ ಪ್ರತಿನಿಧಿಗಳ ಮಧ್ಯೆ ನೂರಾರು ಸಭೆಗಳು ನಡೆದಿವೆ ಮತ್ತು 100 ಕ್ಕೂ ಹೆಚ್ಚು ಒಪ್ಪಂದಗಳಿಗೆ ಈ ಸಮಯದಲ್ಲಿ ಸಹಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಫೋರಂ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಒಟ್ಟುಗೂಡಿಸುವ ಸ್ಥಳವಾಗಿದೆ. ಏಕೆಂದರೆ ಮುಸ್ಲಿಂ ಜಗತ್ತಿನ ದೇಶಗಳು ನಮ್ಮನ್ನು ಬೆಂಬಲಿಸುತ್ತವೆ. ಮುಸ್ಲಿಂ ಪ್ರಪಂಚದ ಯಾವುದೇ ದೇಶಗಳು ನಮ್ಮ ವಿರುದ್ಧದ ನಿರ್ಬಂಧಗಳನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದರು. ಬೆರಳೆಣಿಕೆಯಷ್ಟು ಅರಬ್ ರಾಷ್ಟ್ರಗಳು ಮುಖ್ಯವಾಗಿ ಸೌದಿ ಅರೇಬಿಯಾ ಮತ್ತು ಈಜಿಪ್ಟ್ ಉಕ್ರೇನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ರಷ್ಯಾವನ್ನು ಔಪಚಾರಿಕವಾಗಿ ಖಂಡಿಸಿದರೂ ಯಾವುದೇ ಇಸ್ಲಾಮಿಕ್ ರಾಷ್ಟ್ರವು ಪಾಶ್ಚಿಮಾತ್ಯ ರಾಷ್ಟ್ರಗಳ ನಾಯಕತ್ವವನ್ನು ಅನುಸರಿಸಲಿಲ್ಲ ಮತ್ತು ಮಾಸ್ಕೋ ಮೇಲೆ ಯಾವುದೇ ಆರ್ಥಿಕ ನಿರ್ಬಂಧಗಳನ್ನು ವಿಧಿಸಿಲ್ಲ ಎಂಬುದು ಗಮನಾರ್ಹ.

ಇಸ್ಲಾಮಿಕ್ ಜಗತ್ತು ಮತ್ತು ರಷ್ಯಾ ನಡುವಿನ ವ್ಯಾಪಾರವು ಅಡೆತಡೆಯಿಲ್ಲದೆ ಮುಂದುವರೆದಿದೆ ಮತ್ತು ಕೃಷಿ ಉತ್ಪನ್ನಗಳು ಮತ್ತು ಹಲಾಲ್ ಆಹಾರ, ಕಚ್ಚಾ ತೈಲ ಸಂಸ್ಕರಣೆ ಮತ್ತು ಬ್ಯಾಂಕಿಂಗ್‌ನ ದ್ವಿಪಕ್ಷೀಯ ಒಪ್ಪಂದಗಳು ಸೇರಿದಂತೆ ಹೆಚ್ಚಿನ ವ್ಯವಹಾರಗಳು ಎಂದಿನಂತೆ ನಡೆಯುತ್ತಿವೆ ಎಂದು ಖುಸ್ನುಲಿನ್ ಬಹಿರಂಗಪಡಿಸಿದರು. ಭಾರತ, ಇರಾನ್, ಅಜರ್‌ಬೈಜಾನ್, ರಷ್ಯಾ, ಮಧ್ಯ ಏಷ್ಯಾ ಮತ್ತು ಯುರೋಪ್ ನಡುವೆ ಸರಕು ಸಾಗಣೆಗಾಗಿ 7,200 ಕಿಮೀ ಅಂತರದ ಹಡಗು, ರೈಲು ಮತ್ತು ರಸ್ತೆ ಮಾರ್ಗಗಳ ಅಂತರರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ ನಿರ್ಮಾಣದಿಂದ ವ್ಯಾಪಾರವನ್ನು ಸುಗಮಗೊಳಿಸಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾದಿಂದ ಭಾರತಕ್ಕೆ ಸರಕು ಸಾಗಿಸುವುದು ಸಾಂಪ್ರದಾಯಿಕ ಸೂಯೆಜ್ ಕಾಲುವೆ ಮಾರ್ಗಕ್ಕಿಂತ ವೇಗವಾಗಿದೆ ಮತ್ತು ಅಗ್ಗವಾಗಿದೆ. ಜೊತೆಗೆ ಈ ಮಾರ್ಗದಲ್ಲಿ ಯುರೋಪಿಯನ್ ಯೂನಿಯನ್ ನಿರ್ಬಂಧಗಳು ಯಾವುದೇ ಪರಿಣಾಮ ಬೀರುವುದಿಲ್ಲ.

ಅಲ್​ಖೈದಾ ಟಾಪ್ ಉಗ್ರವಾದಿಯ ಬಂಧನ: ಉತ್ತರ ಲೆಬನಾನ್‌ನಲ್ಲಿ ಉನ್ನತ ಶ್ರೇಣಿಯ ಅಲ್ ಖೈದಾ ನಾಯಕನನ್ನು ಬಂಧಿಸಿರುವುದಾಗಿ ಲೆಬನಾನಿನ ಸೇನಾ ಗುಪ್ತಚರ ನಿರ್ದೇಶನಾಲಯ ಖಚಿತಪಡಿಸಿದೆ. ಬಂಧಿತ ಉಗ್ರ ಯಾರೆಂದು ಇನ್ನೂ ಬಹಿರಂಗಪಡಿಸಲಾಗಿಲ್ಲ. ಶನಿವಾರದಂದು ವ್ಯಾಪಕ ಭದ್ರತಾ ಕಾರ್ಯಾಚರಣೆಯ ನಂತರ ಉತ್ತರ ಪ್ರದೇಶದ ಪಟ್ಟಣವಾದ ದೇರ್ ಅಮ್ಮಾರ್‌ನಲ್ಲಿ ಉಗ್ರನನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ. ಬಂಧಿತ ವ್ಯಕ್ತಿಯು ಫತಾಹ್ ಅಲ್-ಇಸ್ಲಾಂ ಎಂದು ಕರೆಯಲ್ಪಡುವ ಭಯೋತ್ಪಾದಕ ಸಂಘಟನೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಇದು ಅಲ್ ಖೈದಾದೊಂದಿಗೆ ಸಂಬಂಧ ಹೊಂದಿದೆ ಮತ್ತು 10 ವರ್ಷಗಳಿಂದ ಲೆಬನಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ಟ್ವಿಟರ್​ ಮಾದರಿಯ ಆ್ಯಪ್ ತಯಾರಿಸಿದ ಮೆಟಾ: ಜೂನ್ ಅಂತ್ಯಕ್ಕೆ ಲಾಂಚ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.