ಬೀಜಿಂಗ್ (ಚೀನಾ): ಚೀನಾ ದೇಶವು ಶೂನ್ಯ-ಕೋವಿಡ್ ನೀತಿ ಅನುಸರಿಸಿದೆ. ದೇಶದಲ್ಲಿ ಸೋಂಕುಗಳು ಹೆಚ್ಚಾದ ಸಮಯದಲ್ಲೂ ಹೊಸ ರೂಪಾಂತರ ತಳಿಗಳ ಪ್ರಕರಣಗಳು ಇಳಿಕೆಯಾಗಿವೆ ಎಂದು ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಬೀಜಿಂಗ್‌ನಲ್ಲಿನ ಕೋವಿಡ್ ಪ್ರಕರಣಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ.
2022ರ ಅವಧಿಯಲ್ಲಿ ಬೀಜಿಂಗ್‌ನಲ್ಲಿ ಓಮಿಕ್ರಾನ್ ಉಪ ತಳಿಗಳಾದ Ba.5.2 ಮತ್ತು BF.7 ಹೆಚ್ಚು ಪರಿಣಾಮ ಬೀರುವಂತಹ ರೂಪಾಂತರ ಸೋಂಕು ಇವಾಗಿವೆ ಎಂದು ಸಂಶೋಧನೆಯಿಂದ ತಿಳಿದುಬರುತ್ತದೆ. 2022ರ ನವೆಂಬರ್ 14 ಹಾಗೂ ಡಿಸೆಂಬರ್ 20ರ ನಡುವೆ ಸ್ಥಳೀಯ ಮಟ್ಟದಲ್ಲಿ ಸೋಂಕುಗಳ ಪ್ರಮಾಣ ಶೇ.90ಕ್ಕಿಂತ ಹೆಚ್ಚಾಗಿತ್ತು.
ಶೂನ್ಯ ಕೋವಿಡ್ ನೀತಿ: 2022 ಡಿಸೆಂಬರ್ 7ರಂದು ಚೀನಾ ತನ್ನ ಶೂನ್ಯ-ಕೋವಿಡ್ ಕಾರ್ಯವನ್ನು ಪೂರ್ಣಗೊಳಿಸಿತು ಎಂದು ಈ ಬಗ್ಗೆ ವ್ಯಾಪಕವಾಗಿ ವರದಿಯಾಗಿದೆ. ಈ ಕಟ್ಟುನಿಟ್ಟಾದ ಕೋವಿಡ್-19 ನಿಯಂತ್ರಣ ನೀತಿಗಳ ಅನ್ವಯ ಲಾಕ್‌ಡೌನ್‌ಗಳು, ಸಾಮೂಹಿಕ ಪರೀಕ್ಷೆ ಮತ್ತು ಕ್ವಾರಂಟೈನ್ ಹೇರಿದ್ದರಿಂದ ಹೊಸ ರೂಪಾಂತರ ಸೋಂಕುಗಳನ್ನು ತಡೆಗಟ್ಟಲು ಸಹಕಾರಿಯಾಯಿತು ಎಂದು ಸಂಶೋಧಕರು ಅಭಿಪ್ರಾಯಪಟ್ಟರು.
ಆರಂಭದಲ್ಲಿ ಕೋವಿಡ್ -19 ಅನ್ನು ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಿದ ಮೂರು ವರ್ಷಗಳಲ್ಲಿ, ಆಲ್ಫಾ, ಬೀಟಾ, ಗಾಮಾ, ಡೆಲ್ಟಾ ಮತ್ತು ಓಮಿಕ್ರಾನ್‌ನಂತಹ ರೂಪಾಂತರ ತಳಿಯ ಸೋಂಕುಗಳು ಕಾಣಿಸಿಕೊಂಡಿದ್ದವು. ಪ್ರಪಂಚದಾದ್ಯಂತ ಅನೇಕ ರೂಪಾಂತರ ತಳಿಗಳ ಸೋಂಕು ಉಲ್ಬಣವಾಗಿದ್ದವು. ಡಿಸೆಂಬರ್ 2019ರಿಂದ, ಬೀಜಿಂಗ್‌ನಲ್ಲಿ ಕಾಣಿಸಿಕೊಂಡ ಸ್ಥಳೀಯ ಕೋವಿಡ್-19 ಪ್ರಕರಣಗಳ ಸಂಬಂಧಿಸಿದಂತೆ ಸಂಶೋಧಕರು ಮಾದರಿಗಳನ್ನು ಸಂಗ್ರಹಿಸಿ ಸಂಶೋಧನೆ ನಡೆಸಿದ್ದರು.
ಪ್ರೊಫೆಸರ್ ಜಾರ್ಜ್ ಗಾವೊ ಮಾಹಿತಿ: ನಮ್ಮ ವಿಶ್ಲೇಷಣೆಯು ಬೀಜಿಂಗ್‌ನಲ್ಲಿ ಪ್ರಕರಣಗಳ ಉಲ್ಬಣಕ್ಕೆ ಎರಡು ಒಮಿಕ್ರಾನ್ ಉಪ-ರೂಪಾಂತರಗಳು ಮೂಲ ಕಾರಣವಾಗಿವೆ. ಇದರಿಂದ ಚೀನಾದಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡಿದೆ. ಈ ಪರಿಸ್ಥಿತಿಯನ್ನು ಅರಿತು ನಿಕಟವಾಗಿ ಮೇಲ್ವಿಚಾರಣೆ ಮುಂದುವರಿಸಲಾಯಿತು. ಇದರಿಂದ ಯಾವುದೇ ಹೊಸ ರೂಪಾಂತರ ತಳಿಗಳನ್ನು ಬೇಗ ಪತ್ತೆ ಹಚ್ಚಲಾಗುತ್ತದೆ ಎಂದು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಇನ್‌ಸ್ಟಿಟ್ಯೂಟ್ ಆಫ್ ಮೈಕ್ರೋಬಯಾಲಜಿ ಪ್ರೊಫೆಸರ್ ಜಾರ್ಜ್ ಗಾವೊ ಮಾಹಿತಿ ನೀಡಿದರು.
413 ಹೊಸ ರೂಪಾಂತರ ತಳಿಗಳು: 413 ಹೊಸ ರೂಪಾಂತರ ತಳಿಗಳನ್ನು ವಿಶ್ಲೇಷಣೆ ಮಾಡಲಾಗಿದ್ದು, ಇವು ಕೋವಿಡ್-19 ಸೋಂಕಿನ ರೂಪಾಂತರ ತಳಿಗಳಾಗಿವೆ ಎಂದು ಬಹಿರಂಗಪಡಿಸಿತು. 14 ನವೆಂಬರ್ 2022ರ ನಂತರ ಬೀಜಿಂಗ್‌ನಲ್ಲಿ ಪ್ರಬಲವಾದ ರೂಪಾಂತರ ತಳಿ (BF.7) ಅನೇಕ ಸಂಕಷ್ಟಗಳನ್ನು ತಂದೊಡ್ಡಿತ್ತು. ಇದು ಸ್ಥಳೀಯ ಮಟ್ಟದಲ್ಲಿ ಈ ರೂಪಾಂತರ ಸೋಂಕು ಶೇ.75.7ರಷ್ಟು ಕಾಣಿಸಿಕೊಂಡಿತ್ತು. ಮತ್ತೊಂದು ಓಮಿಕ್ರಾನ್ನ ಉಪಪ್ರಕಾರವಾದ ರೂಪಾಂತರ ತಳಿ (BF 5.2) ಸೋಂಕಿನ ಪ್ರಕರಣಗಳು ಶೇ.16.3ರಷ್ಟು ಕಂಡುಬಂದಿವೆ.
ಅನ್ವಯಿಕ ಸೋಂಕುಶಾಸ್ತ್ರದ ಮಾದರಿ: ಬೀಜಿಂಗ್‌ನ ಡೇಟಾದ ಆಧಾರದ ಮೇಲೆ ಚೀನಾದ ಬಗ್ಗೆ ಸಾಮಾನ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಾವು ಎಚ್ಚರಿಕೆವಹಿಸಬೇಕಾಗುತ್ತದೆ. ದೊಡ್ಡ ಮತ್ತು ಜನನಿಬಿಡ ಒಂದು ಪ್ರದೇಶದಲ್ಲಿ 'SARS-CoV-2'ನ ಅನ್ವಯಿಕ ಸೋಂಕುಶಾಸ್ತ್ರದ ಮಾದರಿಯು ಇಡೀ ದೇಶಕ್ಕೆ ಹರಡುವುದಿಲ್ಲ ಎಂದು ಅಧ್ಯಯನದಲ್ಲಿ ಭಾಗಿಯಾಗದ ದಕ್ಷಿಣ ಆಫ್ರಿಕಾದ ಸ್ಟೆಲೆನ್‌ಬೋಶ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ವೋಲ್ಫ್‌ಗ್ಯಾಂಗ್ ಪ್ರೀಸರ್ ಮತ್ತು ಡಾ ಟೊಂಗೈ ಮಾಪೊಂಗಾ ತಿಳಿಸಿದರು.
ಇದನ್ನೂ ಓದಿ: ಪ್ರಬಲ ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ : 21 ಸಾವಿರಕ್ಕೂ ಅಧಿಕ ಮಂದಿ ಬಲಿ.. ಆಹಾರಕ್ಕಾಗಿ ಬದುಕುಳಿದವರ ಪರದಾಟ