ಬೌಲ್ಡರ್ ಸಿಟಿ (ಯುಎಸ್): ದೇಶದ ಅತಿ ದೊಡ್ಡ ಜಲವಿದ್ಯುತ್ ಸ್ಥಾವರಗಳಲ್ಲಿ ಒಂದಾದ ಹೂವರ್ ಅಣೆಕಟ್ಟಿನ ಟ್ರಾನ್ಸ್ಫಾರ್ಮರ್ನಲ್ಲಿ ಮಂಗಳವಾರ ಸ್ಫೋಟ ಉಂಟಾಗಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅರ್ಧ ಗಂಟೆಯ ಬಳಿಕ ನಂದಿಸಲಾಗಿದೆ. ವಿದ್ಯುತ್ ಗ್ರಿಡ್‌ಗೆ ಯಾವುದೇ ಅಪಾಯವಿಲ್ಲ, ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಲೋವರ್ ಕೊಲೊರಾಡೋ ಪ್ರದೇಶದ ಫೆಡರಲ್ ಬ್ಯೂರೋ ಆಫ್ ರಿಕ್ಲಮೇಶನ್ ಪ್ರಾದೇಶಿಕ ನಿರ್ದೇಶಕ ಜಾಕ್ಲಿನ್ ಎಲ್. ಗೌಲ್ಡ್ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಅಣೆಕಟ್ಟಿನ ತಳಹದಿಯಲ್ಲಿ ಬೆಂಕಿ ಕಾಣಿಸಿಕೊಂಡು ಕಟ್ಟಡದ ಮೇಲೆ ದೊಡ್ಡ ಪ್ರಮಾಣದ ಕಪ್ಪು ಹೊಗೆ ಸುತ್ತುತ್ತಿದೆ. ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ.
-
touring the #hooverdam and heard an explosion #fire pic.twitter.com/1tjWuNWBaZ
— Kristy Hairston (@kristynashville) July 19, 2022 " class="align-text-top noRightClick twitterSection" data="
">touring the #hooverdam and heard an explosion #fire pic.twitter.com/1tjWuNWBaZ
— Kristy Hairston (@kristynashville) July 19, 2022touring the #hooverdam and heard an explosion #fire pic.twitter.com/1tjWuNWBaZ
— Kristy Hairston (@kristynashville) July 19, 2022
ಇನ್ನು ಹೂವರ್ ಅಣೆಕಟ್ಟು ನೆವಾಡಾ ಮತ್ತು ಅರಿಜೋನಾ ನಡುವಿನ ಗಡಿಯಲ್ಲಿರುವ ಕೊಲೊರಾಡೋ ನದಿಯ ಕಪ್ಪು ಕಣಿವೆಯಲ್ಲಿದೆ. 726 ಅಡಿ ಎತ್ತರವಿದ್ದು, ಇದರ ಮೇಲೆ ದಿನಕ್ಕೆ 20,000 ವಾಹನಗಳು ಸಂಚರಿಸುತ್ತವೆ.
ಇದನ್ನೂ ಓದಿ: ರಾಧಾನಗರಿ ಅಣೆಕಟ್ಟಿನ ಗೇಟ್ನಲ್ಲಿ ತಾಂತ್ರಿಕ ದೋಷ : ಕರ್ನಾಟಕದತ್ತ ಹರಿದು ಬರುತ್ತಿದೆ ಅಪಾರ ಪ್ರಮಾಣದ ನೀರು